ರಾಯಬಾಗ

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ 

ರಾಯಬಾಗ, 08 ; ಜೀವನದಲ್ಲಿ ಏನಾದರೂ ಒಳ್ಳೆಯ ಸಾಧನೆ ಮಾಡಿದರೆ ಮಾತ್ರ ಈ ಮನುಷ್ಯ ಜೀವನಕ್ಕೆ ಒಂದು ಗೌರವ, ಬೆಲೆ ಬರುತ್ತದೆ ಎಂದು ಜಮಖಂಡಿ ಓಲೆಮಠದ ಆನಂದ ದೇವರು ಹೇಳಿದರು.  

ಶುಕ್ರವಾರ ಮಧ್ಯಾಹ್ನ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸತೀಶ ಚೌಗುಲೆ ಸ್ವತಂತ್ರ ಪಿ.ಯು.ಕಾಲೇಜ ರಾಯಬಾಗ ಮತ್ತು ದಿಗ್ಗೇವಾಡಿಯ ಜಿ.ಬಿ.ಚೌಗುಲೆ ಸ್ವತಂತ್ರ ಪಿ.ಯು.ಕಾಲೇಜಿನ 2025-26ನೇ ಸಾಲಿನ ಪ್ರಥಮ ಪಿ.ಯು.ಕಾಲೇಜ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಬದುಕಿಗೆ ಬಣ್ಣ ಮತ್ತು ಜ್ಞಾನ ನೀಡುವ ಶಿಕ್ಷಕರನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ಮನ್ನಡೆಯಬೇಕು. ತಂದೆ-ತಾಯಿಗಳ ಕನಸು ನನಸು ಮಾಡುವಂತಹ ಸಾಧನೆ ನಾವು ಮಾಡಬೇಕು. ಹುಟ್ಟು ದರಿದ್ರ ಆದರೂ ನಮ್ಮ ಸಾವು ಚರಿತ್ರೆ ಆಗಬೇಕೆಂದು ನುಡಿದ ಅಂಬೇಡ್ಕರ್ ಅವರ ಮಾತಿನಂತೆ ನಾವು ಬದುಕಬೇಕೆಂದರು.  

ಚಿಕ್ಕೋಡಿ ಶೈಕ್ಷಣಿಕ ಜಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪಿ.ಯು) ಉಪನಿರ್ದೇಶಕ ಪಿ.ಐ.ಭಂಡಾರೆ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿವೆ. ಅವುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಪಾಲ್ಗೊಳ್ಳಬೇಕು. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಜ್ಞಾನ ನೀಡಿ, ಅವರು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿ ರೂಪಿಸಬೇಕೆಂದರು.  

ಸಂಸ್ಥೆ ಅಧ್ಯಕ್ಷ ಎಲ್‌.ಬಿ.ಚೌಗುಲೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದಲ್ಲಿ ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯ ಎಸ್‌.ಎ.ನಾಂದನಿ, ಎಸ್‌.ಎಸ್‌.ದಿಗ್ಗೇವಾಡಿ, ಎಮ್‌.ಎನ್‌.ಮುಲ್ಲಾ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು. ಸುರೇಶ ಐಹೊಳೆ ಸ್ವಾಗತಿಸಿದರು, ಎನ್‌.ಐ.ಬಡಿಗೇರ ನಿರೂಪಿಸಿದರು, ಎಸ್‌.ಎಸ್‌.ಕಾಡಾಪೂರೆ ವಂದಿಸಿದರು. 


ಸುದ್ದಿ ಓದಿ