ಮುಕ್ತ ಹಾರ್ಡ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ಶಿಗ್ಗಾವಿ 24: ತಾಲೂಕಿನ ಗಂಗೀಭಾವಿಯಲ್ಲಿ ಇಗಲ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ನಡೆದ ಮುಕ್ತ ಹಾರ್ಡ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ರೈತ ಸೇನೆ ಕರ್ನಾಟಕ ಜಿಲ್ಲಾ ಅಧ್ಯಕ್ಷ ವರುಣಗೌಡ ಪಾಟೀಲ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಗಂಗೀಭಾವಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶೀಧರ ಯಲಿಗಾರ, ಭಾ.ಜ.ಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಪುರಸಭೆ ಸದಸ್ಯ ಪರುಶರಾಮ ಸೊನ್ನದ, ಕೆ.ಪಿ.ಸಿ.ಸಿ ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಕಾಂಗ್ರೇಸ್ ಮುಖಂಡ ಹಾಗೂ ಗ್ರಾಮ ಪಂಚಾಯತ ಸದಸ್ಯ ಅಣ್ಣಪ್ಪ ಲಮಾಣಿ ಸೇರಿದಂತೆ ಕ್ರಿಕೇಟ್ ಆಸಕ್ತರು ಉಪಸ್ಥಿತರಿದ್ದರು.
ಇಗಲ್ಸ್ ಕ್ರಿಕೆಟ್ ಕ್ಲಬ್ ಮುಕ್ತ ಹಾರ್ಡ ಟೆನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯ ಪ್ರಥಮ ಬಹುಮಾನ 20,001 ರೂ.ನ್ನು ರೈತ ಸೇನೆ ಕರ್ನಾಟಕ ಜಿಲ್ಲಾ ಅಧ್ಯಕ್ಷ ವರುಣಗೌಡ ಪಾಟೀಲ ಶ್ಯಾಡಂಬಿ, ದ್ವಿತೀಯ ಬಹುಮಾನ ರೂ 15,001 ರೂನ್ನು 10ನೇ ಕೆ.ಎಸ್.ಆರ್.ಪಿ ಪಡೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಗಂಗೀಭಾವಿ, ತೃತೀಯ ಬಹುಮಾನ 10001 ರೂ.ನ್ನು ಗಂಗೀಭಾವಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶೀಧರ ಯಲಿಗಾರ ನೀಡಿದ್ದು, ಟ್ರೋಪಿ ಕೊಡುಗೆ ಪುರಸಭೆ ಸದಸ್ಯೆ ಸಂಗೀತಾ ತಿಪ್ಪಣ್ಣಾ ವಾಲ್ಮೀಕಿ, ಕಿರಣ ಹ ಗೋಣಿ, ಟೀ ಶರ್ಟ ಕೊಡುಗೆ ಸುಲೇಮಾನ ಹಂಚಿನಮನಿ, ಸಾಯಿರಾಮ, ಯಂಕು ಪಿ ಹೆಚ್, ಬಿ ವಾಗೇಶ, ಬ್ಯಾಟ್ ಕೊಡುಗೆ ಪುರನಾನಂದ ತಳವಾರ, ನಿಂಗಪ್ಪ ಶಿವಳ್ಳಿ, ಬಾಲ್ ಕೊಡುಗೆ ಪ್ರವೀಣ ಪಾಟೀಲ, ಸ್ಟಂಪ ಕೊಡುಗೆ ಶಿಗ್ಗಾವಿ ಯುವ ಮೋರ್ಚಾ ಉಪಾಧ್ಯಕ್ಷ ಚೇತನ ಕಲಾಲ ಸೇರಿದಂತೆ ಅನೇಕ ಗಣ್ಯ ಮಾನ್ಯರು ತನು ಮನ ಧನದ ಮೂಲಕ ಸಹಾಯ ನೀಡಿದ್ದಾರೆ ಅಲ್ಲದೇ ಶಿಗ್ಗಾವಿ ಪುರಸಭೆ ಹಾಗೂ ಹೊಸುರ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮತ್ತು 10 ನೇ ಕೆ.ಎಸ್.ಆರ್.ಪಿ ಪಡೆಯ ಸಿಬ್ಬಂದಿ ವರ್ಗದವರು ಹಾಗೂ ಇಗಲ್ಸ್ ಕ್ರಿಕೆಟ್ ಕ್ಲಬ್ ಪದಾಧಿಕಾರಿಗಳು ಪ್ರೋತ್ಸಾಹಕರಾಗಿದ್ದಾರೆ.