ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಕ್ರೀಡಾಕೂಟವು ಬಹಳ ಮಹತ್ವದ್ದು: ಬಿರಾದಾರ
ಇಂಡಿ 10: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರಿಡಾಕೂಟದಲ್ಲಿ ತಾಲೂಕಿನ ಚಿಕ್ಕಬೇವನೂರ ಗ್ರಾಮದ ಎಚ್.ಪಿ.ಎಸ್. ಶಾಲೆಯ ಶಿಕ್ಷಕಿ ಸರೋಜಿನಿ ಮಾವಿನಮರ ಕುಸ್ತಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶಾಲೆಯ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಸಂಗಮೇಶ ಬಿರಾದಾರ ಹೇಳಿದರು.
ಅವರು ಬುದವಾರ ತಾಲೂಕಿನ ಚಿಕ್ಕಬೇವನೂರ ಗ್ರಾಮದ ಎಚ್.ಪಿ.ಎಸ್. ಶಾಲೆಯಲ್ಲಿ ಸಾದಕಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದಾದರೂ ಒಂದು ಶಾಲೆಯ ಅಥವಾ ಗ್ರಾಮದ ಒಳ್ಳೆಯ ಹೆಸರು ಬರಬೇಕಾದರೆ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಕ್ರೀಡಾಕೂಟವು ಬಹಳ ಮಹತ್ವದ್ದಾಗಿದೆ. ಮಾವಿನಮರ ಸಾದನೆ ಇನ್ನು ಬಾನೆತ್ತರಕ್ಕೆ ಕೊಂಡೊಯ್ಯಲಿ ಎಂದು ಶುಭ ಹಾರೈಸಿದರು.
ಶಾಲಾ ಮುಖ್ಯ ಗುರು ಬಿ.ಎನ್. ಜಮಾದಾರ ಮಾತನಾಡಿ, ಸದೃಢ ಸಮಾಜ ನಿರ್ಮಾಣ ಮಾಡಲು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ನಾವುಗಳು ಸೇವೆ ಸಲ್ಲಿಸಿದಾಗ ಮಾತ್ರ ಬಲಿಷ್ಠ ರಾಷ್ರ್ಟ ನಿರ್ಮಾಣಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುನೀಲ ಚವ್ಹಾಣ, ನಿಂಗಮ್ಮ ದೇಶಮುಖ, ಸೋಮಣ್ಣ ಪ್ರಚಂಡಿ, ಅಪ್ಪಾಸಾಹೇಬ ಹೊಸಮನಿ, ಶಂಕರ ಮೂಲಿಮನಿ, ಚಂದ್ರಕಾಂತ ವಾಲಿಕಾರ, ಚಂದ್ರಶೇಖರ ಕಟ್ಟಿಮನಿ, ಮಂಗಳ ನೆಲ್ಲಗಿ, ಅನಿತಾ ವಾಲಿಕಾರ, ಸಂತೋಷ ಮೇಲಿನಮನಿ, ಪ್ರಭು ವಾಲಿಕಾರ, ಆರ್.ಎಮ್. ಮುಜಾವರ್, ದ್ರಾಕ್ಷಾಯಿಣಿ ಕೋಳಿ ಗ್ರಾಪಂ ಸರ್ವ ಸದಸ್ಯರು ಹಾಗೂ ಶಾಲಾ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತತಿಯರು ಉಪಸ್ಥಿತರಿದ್ದರು.