ಅವಿರೋಧವಾಗಿ ಪ್ರಭಾವತಿ ಆಯ್ಕೆ
ರಾಣಿಬೆನ್ನೂರ 24: ಸ್ಥಳೀಯ ನಗರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯೆ ಪ್ರಭಾವತಿ ತಿಳುವಳ್ಳಿಯವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕುತೂಹಲಕ್ಕೆ ತೆರೆ ಎಳೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮಂಜುಳಾ ಹತ್ತಿ, ಸುಮಂಗಳಾ ಪಾಟೀಲ ನೀಡಿದ್ದ ನಾಮಪತ್ರವನ್ನು ಹಿಂಪಡೆದ ಕಾರಣ ಪ್ರಭಾವತಿ ತಿಳುವಳ್ಳಿಯವರು ಅವಿರೋಧವಾಗಿ ಆಯ್ಕೆಗೊಂಡರು. ಒಟ್ಟು 35 ಸದಸ್ಯ ಸಂಖ್ಯಾಬಲದಲ್ಲಿ 15 ಬಿಜೆಪಿ, 9 ಕಾಂಗ್ರೆಸ್, 9 ಕೆಪಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರು ಚುನಾವಣೆಯಲ್ಲಿ ಹಾಜರಿದ್ದರು.
ಉಪವಿಭಾಗಾಧಿಕಾರಿ ಶಿವಾನಂದ ಉಳಾಗಡ್ಡಿ ಚುನಾವಣಾ ಕಾರ್ಯ ನಿರ್ವಹಿಸಿದರು. ಪೌರಾಯುಕ್ತ ಉದಯಕುಮಾರ ಬಿ,ಟಿ ಸೇರಿದಂತೆ ಇತರ ನೌಕರ ವರ್ಗದವರು ಇದ್ದರು. ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಪ್ರಭಾವತಿ ತಿಳುವಳ್ಳಿಯವರನ್ನು ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮತ್ತು ಇತರ ನಗರಸಭಾ ಸದಸ್ಯರುಗಳು ಅಭಿನಂದಿಸಿದರು. ಉಪಾಧ್ಯಕ್ಷರ ಆಯ್ಕೆಯಾಗುತ್ತಲೇ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು