ತಲ್ಲೂರ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿಯ ವಿಸರ್ಜನಾ ಮೆರವಣಿಗೆ
ಯರಗಟ್ಟಿ 29: ಗಣೇಶ ಹಬ್ಬವು ನಮ್ಮ ಸಂಸ್ಕೃತಿ, ಧರ್ಮವನ್ನು ಎತ್ತಿ ಹಿಡದಿದೆ ಈ ಹಬ್ಬದಿದಂದ ಗ್ರಾಮಗಳಿಗೆ ಒಳ್ಳೆ ಹೆಸರು ಬರಲು ಸಾಧ್ಯ ಎಂದು ತೊರಗಲ್ಲಮಠದ ದೀಪಕ್ ಸ್ವಾಮೀಜಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಹಾದಿ ಬಸವೇಶ್ವರ ಗಜಾನನ ಯುವಕ ಮಂಡಳ ಕಳೆದ ಹತ್ತು ದಿನದಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಗುರುವಾರ ರಾತ್ರಿ 11ನೇ ದಿನದಂದು ವಿಸರ್ಜಿಸುವ ವೇಳೆ ನಡೆದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಭವ್ಯ ಮೆರವಣಿಗೆಯಲ್ಲಿ ಯುವಕರು ಗುಲಾಲ ಎರಚುತ್ತ ಕುಣಿದು ಕುಪ್ಪಳಿಸಿದರು. ಗಣಪತಿ ಮಹರಾಜ ಕೀ ಜೈ , ಗಜಾನನ ಮಹರಾಜಕೀ ಜೈ ಮುಂತಾದ ಘೋಷಣೆಗಳು ಮುಗಿಲು ಮುಟ್ಟಿದ್ದವು. ಮುರಗೋಡ ರಸ್ತೆಯಲ್ಲಿರುವ ಸಣ್ಣ ನೀರಾವರಿ ಕೆರೆಯಲ್ಲಿ ವಿಗ್ರಹ ವಿಸರ್ಜನೆ ಮಾಡಲಾಯಿತು.
ಮುಖಂಡ ಬಾಬುಗೌಡ ಅಣ್ಣಿಗೇರಿ, ಶಂಕರಗೌಡ ಪಾಟೀಲ, ಜಗದೀಶ ಹೊಸಮಠ, ಯಲ್ಲಪ್ಪ ಆನಿಗೋಳ, ಬಸವರಾಜ ಪೂಜೇರ, ಮಹಾರುದ್ರ್ಪ ಉಪ್ಪಿನ, ಆರ್.ಬಿ.ಅಣ್ಣಿಗೇರಿ, ಸುರೇಶ ಬೆನಕಟ್ಟಿ, ಮುತ್ತು ಬಡಿಗೇರ, ಮಹೇಶ ಲಿಗಾಡಿ, ಉಮೇಶ ಬೆನಕಟ್ಟಿ, ಮಹೇಶ ಬಾವಿಕಟ್ಟಿ, ರವಿ ಆನಿಗೋಳ, ಕಿರಣ ಶಿವನಗೌಡ್ರ, ಪಂಚಲಿಂಗಪ್ಪ ಕಾಶಪ್ಪನವರ ಸೇರಿದಂತೆ ಕಮೀಟಿ ಸದಸ್ಯರು ಗ್ರಾಮಸ್ಥರು ಇದ್ದರು.