ಶಿಗ್ಗಾವ್

ಕೆರೆ ಕಟ್ಟಿ ಒಡೆದು ನೀರು ನುಗ್ಗಿ ಅಪಾರ ಹಾನಿ

ಕೆರೆ ಕಟ್ಟಿ ಒಡೆದು ನೀರು ನುಗ್ಗಿ ಅಪಾರ ಹಾನಿ

ಶಿಗ್ಗಾವಿ 09 : ತಾಲೂಕಿನ ಕಡಹಳ್ಳಿ ಗ್ರಾಮದ ಕೆರೆ ಕಟ್ಟಿ ಒಡೆದು ರೈತರ ಜಮೀನಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದ್ದು ಪ್ರದೇಶಕ್ಕೆ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಬೇಟಿ ನೀಡಿ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಹಾನಿಯಾಗದಂತೆ ತಡೆಯಲು ಕ್ರಮ ಕೈಗೊಳ್ಳಿರಿ ಎಂದು ತಾಲೂಕ ದಂಡಾಧಿಕಾರಿ ಮಂಜುನಾಥ ಮುನ್ನೋಳ್ಳಿಯವರಿಗೆ ಇನಾಮ ತಡಸ ಗ್ರಾಮ ಪಂಚಾಯತ ಸದಸ್ಯ ಬಸನಗೌಡ ರಾಮನಗೌಡ್ರ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ