ಸಾರ್ವಜನಿಕರ ಕುಂದುಕೊರತೆಗೆ ತಕ್ಷಣ ಪರಿಹಾರ ನೀಡಿ: ಡಿಎಸ್‌ಪಿ
ಇಂಡಿ: ಸಾರ್ವಜನಿಕರ ಕುಂದುಕೊರತೆಗೆ ತಕ್ಷಣ ಪರಿಹಾರ ನೀಡಬೇಕು ಇಲ್ಲದಿದ್ದರೆ ಸೂಕ್ತ ವಿಚಾರಣೆಗೆ ಒಳಪಡಿಸಲಾಗುವದೆಂದು ಲೋಕಾಯುಕ್ತ ಡಿಎಸ್‌ಪಿ ಅರುಣ ನಾಯಕ ಹೇಳಿದರು.
ಅವರು ಸೋಮವಾರ ಪಟ್ಟಣದ ತಹಸೀಲ್ದಾರ ಕಚೇರಿಯ ಸಬಾಭವನದಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆಯ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಾಯುಕ್ತ ಪಿ.ಐ ಆನಂದ ಚಿಕ್ಕಣ್ಣನವರ ಮಾತನಾಡಿ, ಲೋಕಾಯುಕ್ತ ವಿಚಾರಣೆಯಲ್ಲಿರುವ ಅರ್ಜಿಗಳಲ್ಲಿ ಕೇಳಿದ ಮಾಹಿತಿ ಒದಗಿಸಬೇಕೆಂದು ಅಧಿಕಾರಿಗಳಿಗೆ ವಿನಂತಿಸಿದರು.
ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ ಮಾತನಾಡಿ, ಸಾರ್ವಜನಿಕ ಕುಂದುಕೊರತೆಗಳಿಗೆ ಪ್ರತಿ ಇಲಾಖೆ ಸ್ಪಂದಿಸುತ್ತಿದ್ದು ಇತ್ತೀಚೆಗೆ ಗ್ರಾಮ ವಾಸ್ತವ ಕೂಡ ಮಾಡಿ ಪ್ರತಿಯೊಂದು ಹಳ್ಳಿಗಳಿಗೆ ಮನೆಗಳಿಗೆ ಹೋಗಿ ಸರಕಾರದ ಯೋಜನೆ ತಲುಪಿಸುತ್ತಿದ್ದು. ಕೆಲವೊಂದು ಅರ್ಜಿಗಳು ವಿಳಂಬವಾದಲ್ಲಿ ಗಮನಕ್ಕೆ ತರಲು ಕೇಳಿಕೊಂಡರು.
ತಹಸೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾ.ಪಂ, ಜಿ.ಪಂ ನೀರಾವರಿ, ಶಿಕ್ಷಣ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳಿಗೆ ಹಿರೇಬೇವನೂರ, ಲಚ್ಯಾಣ ಸೇರಿದಂತೆ ವಿವಿಧ ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ಸಾಕಷ್ಟು ಅರ್ಜಿಗಳು ಸ್ಥಳದಲ್ಲಿಯೇ ವಿಚಾರಿಸಿ ಸಂಬಂದಿತ ಇಲಾಖೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳದಲ್ಲಿಯೇ ಬಗೆಹರಿಸಲಾಯಿತು.
ಗುರುನಾಥ ಚವ್ಹಾಣ, ಲೋಕಾಯುಕ್ತ ಸಿಬ್ಬಂದಿ ವರ್ಗ, ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.