ರಾಣೆಬೆನ್ನೂರ

ಅಕ್ರಮ ಮರಳು ಸಾಗಾಣಿಕೆ: ತಹಶೀಲ್ದಾರರಿಂದ ದಿಢೀರ ದಾಳಿ

ಅಕ್ರಮ ಮರಳು ಸಾಗಾಣಿಕೆ: ತಹಶೀಲ್ದಾರರಿಂದ ದಿಢೀರ ದಾಳಿ

ಮರಳು ತುಂಬಿದ 4 ಮಜ್ಡಾ ವಾಹನ ವಶಕ್ಕೆ 

ರಾಣೆಬೆನ್ನೂರ 20:  ರಾಣೀಬೆನ್ನೂರ ತಾಲೂಕಿನ ಗುಡಗೂರ ಹೊನ್ನತ್ತಿ ಗ್ರಾಮದ ರಸ್ತೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆಂಬ ನಿಖರ ಮಾಹಿತಿ ಮೇರೆಗೆ ಇಲ್ಲಿನ ತಹಶೀಲ್ದಾರ ಶಂಕರ ಜಿ.ಎಸ್‌.ರವರು ತಮ್ಮ ಸಿಬ್ಬಂ ದಿಯ ತಂಡದೊಂದಿಗೆ ಇಂದು ದಿಢೀರ ದಾಳಿ ನಡೆಸಿದಾಗ ಅಕ್ರಮ ಮರಳು ಸಾಗಾಣಿಕೆ ದಾರರು ಸಿಕ್ಕಿ ಬಿದ್ದಿದ್ದಲ್ಲದೇ ಮರಳು ತುಂಬಿದ 4 ಮಜ್ಡಾ ವಾಹನ ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  

ಈ ಬಗ್ಗೆ ನಮ್ಮ ಪ್ರತಿನಿಧಿ ತಹಶೀಲ್ದಾರರನ್ನು ಸಂಪರ್ಕಿಸಿದಾಗ ಮೇಡ್ಲೇರಿ ತುಂಗಭದ್ರಾ ಹೊಳೆಯ ಪ್ರದೇಶದಲ್ಲಿ ಯಾವದೇ ಪಾಸ್ ಹಾಗೂ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವುದರ ಬಗ್ಗೆ ಗುಮಾನಿ ಇತ್ತು. ಈ ದಿನ ಬೆಳಿಗ್ಗೆ 5-30ಕ್ಕೆ ಹೊಳೆಯ ಪ್ರದೇಶದಲ್ಲಿ ಬೀಟ್ ನಡೆಸುತ್ತಿರುವಾಗ 4 ಮಜ್ಡಾ ವಾಹನಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾಗ  ದಾಳಿ ನಡೆಸಿ ಚಾಲಕರ ಸಮೇತ ಕೆಎ 27 ಎ6878, ಕೆಎ 14 9656, ಕೆಎ 17 ಬಿ2855, ಕೆಎ 12 ಎ9388ನೇ ನಂಬರಿನ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಬಂಧಿಯ ವಾಹನಗಳ ಮಾಲಕರ ಮೇಲೆ ಕಾನೂನು ಕ್ರಮ ಜರುಗಿಸುವವರೆಗೆ ವಾಹನಗಳನ್ನು ಗ್ರಾಮೀಣ ಆರಕ್ಷಕ ಠಾಣೆಯ ವಶಕ್ಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ