ಹೂವಿನ ಹಡಗಲಿ

ಅಲಬೂರು ಪರ್ಮಿಟ್ ಹೆಸರಲ್ಲಿ ಅಕ್ರಮ ಮರಳು ದಂಧೆ

ಅಲಬೂರು ಪರ್ಮಿಟ್ ಹೆಸರಲ್ಲಿ ಅಕ್ರಮ ಮರಳು ದಂಧೆ

ಹೂವಿನಹಡಗಲಿ 04: ತಾಲೂಕಿನ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ಸಾಗಿದೆ. ಈ ನದಿ ಪ್ರಾತ್ರದಲ್ಲಿಯಾವುದೇ ಮರಳು ಟೆಂಡರ್‌ಇಲ್ಲ. ಇಲ್ಲಿ ನಡೀಯುತ್ತಿರೋ ಮರಳು ಗಣಿಗಾರಿಕೆ ಸಂಪೂರ್ಣ ಅಕ್ರಮವಾಗಿದೆ. ಹಗಲು ರಾತ್ರಿ ಎನ್ನದೇ ದಂಧೆ ಕೋರರು ನದಿ ಒಡಲು ಬಗೆದು ಮರಳು ಹೆಕ್ಕುತ್ತಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಹೊಸದಾಗಿ ಟೆಂಡರ್ ಆಗಿಲ್ಲ ಆದರೂ ಅಲಬೂರು ಪರ್ಮಿಟ್ ಹೆಸರಿನಲ್ಲಿ ಪುರ.ಕೊಂಬಳಿ. ನವಲಿ.ಹಕ್ಕಂಡಿ.ಬನ್ನಿಮಟ್ಟಿ. ಬ್ಯಾಲಹುಣ್ಸಿ ನದಿ ತೀರದ ಹಳ್ಳಿಗಳಲ್ಲಿ ಕಣ. ಕೃಷಿ ಭೂಮಿಗಳಲ್ಲಿ ಅಕ್ರಮ ಮರಳು ಸಂಗ್ರಹ ಮಾಡಿ ಅಕ್ರಮ ಮರಳು ದಂಧೆ ನಡೆಸಿದ್ದಾರೆ. ಗಣಿ ಹಾಗೂ ಕಂದಾಯ ಇಲಾಖೆ ಗಪ್‌ಚುಪ್ ಆಗಿವೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.ಕಂದಾಯಿ ಇಲಾಖೆ ಅಧಿಕಾರಿಗಳು ಫಿಕ್ಸ್‌ ಮಾಡಿಅಕ್ರಮಕ್ಕೆ ಸಾಥ್ ನೀಡಿದ್ದಾರೆಅನ್ನೋಆರೋಪ ನದಿ ಪಾತ್ರದಲ್ಲಿ ಕೇಳಿ ಬರ್ತಾಯಿದೆ.ಮರಳು ಬೇಡಿಕೆಯನ್ನುಅಕ್ರಮ ಮರಳು ದಂಧೆಕೋರರು ಪೂರೈಸುತ್ತಿದ್ದಾರೆ. ಅಲಬೂರು ಬಳಿ ಗಣಿಗಾರಿಕೆ  ಸರ್ಕಾರಅನುಮತಿ ನೀಡಿದೆ. ಒಂದು ಪಾಸ್ ಪಡೆದು  ಮೂರು ನಾಲ್ಕು ಟಿಪರ್ ಗಳನ್ನು ಅಕ್ರಮವಾಗಿತುಂಬಿಕೊಂಡುದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 15ಸಾವಿರಕ್ಕೆ ಸಿಗುವ ಮರಳು ಇದೀಗ 25ಸಾವಿರ ಕ್ಕೆ ಮಧ್ಯರಾತ್ರಿತಂದು ಹಾಕುತ್ತಿದ್ದಾರೆ.ಬಡವರಿಗೆ ಮನೆ ಕಟ್ಟಿಕೊಳ್ಳಲು ತೀವ್ರತೊಂದರೆಯಾಗಿದೆ. 


ಸುದ್ದಿ ಓದಿ