ಶಿಗ್ಗಾವ್

ಅಕ್ರಮವಾಗಿ ಪಡಿತರ ಅಕ್ಕಿ ವಶಕ್ಕೆ

ಅಕ್ರಮವಾಗಿ ಪಡಿತರ ಅಕ್ಕಿ ವಶಕ್ಕೆ

ಶಿಗ್ಗಾವಿ 21: ಪಟ್ಟಣದ ಮಧ್ಯಭಾಗವಾದ ಜಯನಗರದ ವಡ್ಡರ ಓಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳು ರವಿವಾರ ವಶಪಡಿಸಿಕೊಂಡಿದ್ದಾರೆ. 

ಪಟ್ಟಣದ ನಿಂಗಪ್ಪ ಜವಳಗಟ್ಟಿ ಎಂಬುವವರಿಗೆ ಸೇರಿದೆ ಎನ್ನಲಾಗಿರುವ ಪಡಿತರ ಅಕ್ಕಿಯ ಚೀಲಗಳನ್ನ ಮೇಲಾಧಿಕಾರಿಗಳ ಆದೇಶದ ಮೇರೆಗೆ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿದ ತಾಲೂಕಾ ಆಹಾರ ನೀರೀಕ್ಷಕ ಎಸ್ ಬಿ ಸಜ್ಜನ ಹಾಗೂ ಅಧಿಕಾರಿಗಳು ಸುಮಾರು 40 ಕ್ವಿಂಟಾಲ್ 90 ಕೆ. ಜಿ ಪಡಿತರ ಅಕ್ಕಿಯನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 


ಸುದ್ದಿ ಓದಿ