ಕಾನೂನುಬಾಹಿರ ಚಟುವಟಿಕೆ : ರೌಡಿಶೀಟರ್ ನನ್ನು ಜೈಲಿಗಟ್ಟಿದ ಬೆಳಗಾವಿ ಪೊಲೀಸರು

ಕಾನೂನುಬಾಹಿರ ಚಟುವಟಿಕೆ : ರೌಡಿಶೀಟರ್ ನನ್ನು ಜೈಲಿಗಟ್ಟಿದ ಬೆಳಗಾವಿ ಪೊಲೀಸರು

ಬೆಳಗಾವಿ : ಅಪರಾಧ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಶೀಟರ್ ನನ್ನು ಬಂಧಿಸಿರುವ ಬೆಳಗಾವಿ ಪೊಲೀಸರು ಬಂಧಿತನನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ತಿಳಿಸಿದ್ದಾರೆ.

   ಬೆಳಗಾವಿ ಮಹಾದ್ವಾರ ರಸ್ತೆಯ ನಿವಾಸಿ ರೌಡಿಶೀಟರ್ ವಿನಾಯಕ @ ವಿಲ್ಲಕ ಶಂಕರ ಪ್ರಧಾನ ಈತನಿಗೆ ಗೂಂಡಾ ಕಾಯ್ದೆಯ ಅಡಿಯಲ್ಲಿ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.

   ಬೆಳಗಾವಿ ನಗರದ ಮಹಾದ್ವಾರ ರಸ್ತೆಯ ನಿವಾಸಿ ಹಾಗೂ ರೌಡಿಶೀಟರ ಆಗಿರುವ ವಿನಾಯಕ @ ವಿಲ್ಲಕ ಶಂಕರ ಪ್ರಧಾನ ಈತನ ಮೇಲೆ ಕರ್ನಾಟಕ ಅಕ್ರಮ ಸರಾಯಿವ್ಯವಹಾರ, ಮಾದಕ ದ್ರವ್ಯ, ಜೂಜುಕೋರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ತಡೆ ಅಧಿನಿಯಮ 1985 ರ ಕಲಂ 3 ಉಪಕಲಂ(2) ರ(ಗೂಂಡಾ ಕಾಯ್ದೆ) ಅಡಿಯಲ್ಲಿ ಕ್ರಮಕೈಕೊಳ್ಳಲಾಗಿದೆ ಎಂದು ಬೋರಸೆ ಅವರು ತಿಳಿಸಿದ್ದಾರೆ.

   ವಿನಾಯಕ @ ವಿಲ್ಲಕ ಶಂಕರ ಪ್ರಧಾನ ಈತನು  1999 ರಿಂದಲೂ ನಿರಂತರವಾಗಿ ತನ್ನ ಸಹಚರರೊಂದಿಗೆ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಕುಖ್ಯಾತ ಆರೋಪಿತನಾಗಿ ಬೆಳಗಾವಿ ನಗರದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುತ್ತ ಬಂದಿರುತ್ತಾನೆ.

    ಈತನು ಕೊಲೆಗೆ ಪ್ರಯತ್ನ, ಹಣಕ್ಕಾಗಿ ಅಪಹರಣ, ದರೋಡೆ, ಹಲ್ಲೆ, ಅಕ್ರಮ ಗುಂಪುಗಾರಿಕೆ, ಮತೀಯ ಭಾವನೆಗಳ ಕೆರಳಿಸುವಿಕೆ, ಸುಲಿಗೆ, ಮಾರಕಾಸ್ತ್ರಗಳ ಬಳಕೆ ಮುಂತಾದ ಅಪರಾಧಗಳಲ್ಲಿ ತೊಡಗಿ ಬೆಳಗಾವಿ ನಗರದಲ್ಲಿ ಭಯ ಮತ್ತುಅಶಾಂತಿಯ ವಾತಾವರಣ ನಿರ್ಮಿಸಿರುತ್ತಾನೆ.

   ಈತನ ವಿರುದ್ಧ ಕರ್ನಾಟಕ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹಾಗೂ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಒಟ್ಟು 21 ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ. ಈತನ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಈತನ ಮೇಲೆ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ಹಾಗೂಎಮ್.ಓ.ಬಿ ಕಾರ್ಡ ತೆರೆದು ನಿರ್ವಹಿಸಿಕೊಂಡು ಬಂದರೂ ಸಹ ಈತನ ಕಾನೂನು ಬಾಹಿರ ಚಟುವಟಿಕೆಗಳುಕಡಿಮೆಯಾಗಿರುವದಿಲ್ಲ ಆದ್ದರಿಂದ ಈತನಿಗೆ ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡುವಂತಹ ಕಠಿಣ ಕ್ರಮಕೈಕೊಂಡರೂ ಸಹ ಈತನು ಸದರಿ ಗಡಿಪಾರು ಆದೇಶವನ್ನು ಉಲ್ಲಂಘಿಸಿ ಪುನಃ ಬೆಳಗಾವಿ ನಗರವನ್ನು

    ಕಾನೂನು ಬಾಹಿರವಾಗಿ ಪ್ರವೇಶಿಸಿ ತನ್ನ ಸಹಚರರೊಂದಿಗೆ ಕೂಡಿಕೊಂಡು ಒಬ್ಬ ವ್ಯಕ್ತಿಯನ್ನು ಹಣಕ್ಕಾಗಿಅಪಹರಣ ಮಾಡಿದ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.

    ಈತನ ಮೇಲೆ ದಾಖಲಾಗಿರುವ ಪ್ರಕರಣಗಳಲ್ಲಿಯ 10 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿವಿಚಾರಣೆಯಲ್ಲಿದ್ದು, ಈತನು ಸದರಿ ಪ್ರಕರಣದ ಸಾಕ್ಷಿದಾರರು ತನ್ನ ವಿರುದ್ಧ ನ್ಯಾಯಾಲಯಗಳಲ್ಲಿ ಸಾಕ್ಷಿನುಡಿಯದಂತೆ ಬೆದರಿಕೆ ಹಾಕುವ ಬಗ್ಗೆ ತಿಳಿದು ಬಂದಿರುತ್ತದೆ. ಈತನ ಕಾನೂನು ಬಾಹಿರ ಕೃತ್ಯಗಳನ್ನು ಸಾಮಾನ್ಯಕಾನೂನಿನ ಅಡಿಯಲ್ಲಿ ನಿಯಂತ್ರಿಸಲು ಸಾಧ್ಯವಿರುವದಿಲ್ಲ ಎಂಬುವದು ಆತನ ಮೇಲೆ ದಾಖಲಾದ ಪ್ರಕರಣಗಳಮೇಲಿಂದ ಕಂಡು ಬರುತ್ತದೆ. ಆದ್ದರಿಂದ ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲುಹಾಗೂ ಬೆಳಗಾವಿ ನಗರದ ಸಾಮಾನ್ಯ ನಾಗರಿಕರ ಸುರಕ್ಷತೆಗಾಗಿ ಸದರಿ ವಿನಾಯಕ @ ವಿಲ್ಲಕ ಶಂಕರ ಪ್ರಧಾನ,ಸಾ: ಮಹಾದ್ವಾರ ರೋಡ ಬೆಳಗಾವಿ ಈತನಿಗೆ ಗೂಂಡಾ ಕಾಯ್ದೆಯ ಅಡಿಯಲ್ಲಿ ಬಂಧಿಸಿ ದಿನಾಂಕ:16.04.2026ರಂದು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಸುದ್ದಿ ಓದಿ