ಶಿಗ್ಗಾವ್

ಯುವಕರು ಗುರಿ ಇಟ್ಟು ಕಾರ್ಯ ನಿರ್ವಹಿಸಿದರೆ ಜಯ: ಬೊಮ್ಮಾಯಿ

ಯುವಕರು ಗುರಿ ಇಟ್ಟು ಕಾರ್ಯ ನಿರ್ವಹಿಸಿದರೆ ಜಯ: ಬೊಮ್ಮಾಯಿ

ಶಿಗ್ಗಾವಿ : ಯುವ ಶಕ್ತಿಯೇ ನಿಜವಾದ ದೇಶದ ಶಕ್ತಿಯಾಗಿದ್ದು, ಆ ಯುವಕರು ಗುರಿ ಇಟ್ಟು ಕಾರ್ಯ ನಿರ್ವಹಿಸಿದ್ದೆ ಆದರೆ ಜಯ ತಮ್ಮದಾಗಿಸಿಕೊಳ್ಳುತ್ತಾರೆ ಆ ನಿಟ್ಟಿನಲ್ಲಿ ಯುವಕರು ಮುಂದೆ ಬರಬೇಕು ಎಂದು ಉದ್ಯಮಿ ಹಾಗೂ ಯುವ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.ಪಟ್ಟಣದ ಹೊರವಲಯದ ಬೊಮ್ಮಾಯಿಯವರ ನಿವಾಸದಲ್ಲಿ ಪ್ರಭಂಜನ ಕಂಪನಿ ವತಿಯಿಂದ ಹಮ್ಮಿಕೊಂಡ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿ ಮಾತನಾಡಿದ ಅವರು ಯುವಕರ ಇಚ್ಚಾಶಕ್ತಿಗೆ ಅನುಗುಣವಾಗಿ ಉದ್ಯೋಗ ಲಭಿಸಬೇಕು, ಆಯಾ ದೇಶದ ಉಜ್ವಲ ಭವಿಷ್ಯ ನಿಂತಿರುವುದೇ ಯುವಕರಿಂದ ಆ ಯುವಕರಿಗೆ ಮೊದಲು ಉದ್ಯೋಗ ನೀಡಬೇಕು ಎಂದರು, ತಾಲೂಕಿನ ಕೆಲ ದಿನಗಳಲ್ಲಿ ಉದ್ಯೋಗದ ಕ್ರಾಂತಿಯೇ ನಡೆಯಲಿದ್ದು ಈಗಾಗಲೇ ಬಂಕಾಪೂರ ಪ್ರಭಂಜನ್ ಇಂಡಸ್ಟ್ರೀಸ್, ಹನುಮರಹಳ್ಳಿ ಸಿದ್ದ ಉಡುಪು ಘಟಕದಲ್ಲಿ ಜೊತೆಗೆ ಕೆಲದಿನಗಳಲ್ಲಿಯೇ ಕುರ್ಷಾಪೂರದಲ್ಲಿ ಜವಳಿ ಪಾರ್ಕನಿಂದ ಸಾವಿರಾರು ಯುವಕರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ ಇದಕ್ಕೆ ಮಾಡುವ ಇಚ್ಚಾಶಕ್ತಿ ಬೇಕು ಅದನ್ನು ಈ ಕ್ಷೇತ್ರದ ಶಾಸಕರ ಮಾರ್ಗದರ್ಶನದಲ್ಲಿ ಯುವ ಸಮೂಹ ಮಾಡುತ್ತಿದೆ ಎಂದರು.

ಬಿಜೆಪಿ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಒಬ್ಬರಾಜಕಾರಣಿಯ ಚಿತ್ತ ಮುಂದಿನ ರಾಜಕಾರಣದ ಕಡೆಗೆ ಇರುತ್ತದೆ ಆದರೆ ಒಬ್ಬ ಮುತ್ಸದ್ದಿ ರಾಜಕಾರಿಣಿಯ ಚಿತ್ತ ಕ್ಷೇತ್ರದ ಸರ್ವ ಕ್ಷೇತ್ರಗಳ ಅಭಿವೃದ್ದಿಯ ಕಡೆಗೆ ಇರುತ್ತದೆ ಅದು ದೂರದೃಷ್ಟಿಯ ಹರಿಕಾರ, ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿಯವರಿಗೆ ಇದೆ, ಕುಡಿಯಲು ನೀರು, ನಡೆಯಲು ದಾರಿ ಇಲ್ಲದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬಂದ್ ಬೊಮ್ಮಾಯಿಯವರು ಅಭಿವೃದ್ದಿಯ ಕುರಿತು ಕ್ರಾಂತಿಯನ್ನೇ ಮಾಡಿ ಈ ಹಿಂದುಳಿತ ತಾಲೂಕನ್ನ ಅಳಿಸಿ ರಾಜ್ಯಕ್ಕೆ ಮಾದರಿ ತಾಲೂಕಾಗಿ ಮಾಡಿದ್ದಾರೆ, ಕೆಲವೇ ದಿನಗಳಲ್ಲಿ ಉದ್ಯೋಗ ಮೇಳದ ಮೂಲಕ ನಿರುದ್ಯೋಗ ಹೋಗಲಾಡಿಸುವ ಉದ್ಯೋಗದ ಕ್ರಾಂತಿಯನ್ನೇ ಮಾಡಲಿದ್ದಾರೆ, ಕೆಲವೇ ದಿನಗಳಲ್ಲಿ ರುವ ಜವಳಿ ಪಾರ್ಕ ತಲೆಯೆತ್ತಲಿದೆ ಎಂದರು.

ಪ್ರಭಂಜನ್ ಇಂಡಸ್ಟ್ರೀಸ್ ಮಾಲೀಕ ರಾಘವೇಂದ್ರ ಮೇಲಗಿರಿ ಮಾತನಾಡಿ, ತಾಲೂಕಿನಾದ್ಯಂತ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಉದ್ಯೋಗದ ಕ್ರಾಂತಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಬೊಮ್ಮಾಯಿಯವರ ದೂರದೃಷ್ಟಿಯ ಚಿಂತನೆಯ ಜೊತೆಗೆ ಕೈಜೋಡಿಸಿ ನಿರೂದ್ಯೋಗವನ್ನು ಹೋಗಲಾಡಿಸೋಣ ಎಂದರು.ಸವಣೂರ ತಾಲೂಕಾ ಭಾಜಪ ಅದ್ಯಕ್ಷ ಗಂಗಾಧರ ಬಾಣದ, ಪುರಸಭೆ ಅದ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಶೋಭಾ ನಿಸ್ಸೀಮಗೌಡ್ರ ಮತ್ತು ಅಮೇರಿಕದ ಉದ್ಯಮಿ ಮುರಗೇಶ ಚಿನ್ನೂರ ಮಾತನಾಡಿದರು.

ಉದ್ಯೋಗ ಮೇಳದಲ್ಲಿ ಶಿಗ್ಗಾವಿ-ಸವಣೂರ ತಾಲೂಕು ಸೇರಿದಂತೆ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಯುವಕರು ಹಾಗೂ ನಿರುದ್ಯೋಗಿಗಳುಭಾಗವಹಿಸಿದ್ದರು. ತಾಪಂ ಉಪಾದ್ಯಕ್ಷೆ ವಿಜಯಲಕ್ಷ್ಮಿ ಮುಂದಿನಮನಿ, ಪುರಸಭೆ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಡಾ. ಮಲ್ಲೇಶಪ್ಪ ಹರಿಜನ, ಎಪಿಎಂಸಿ ಅದ್ಯಕ್ಷ ಹರ್ಜಪ್ಪ ಲಮಾಣಿ, ನರಹರಿ ಕಟ್ಟಿ, ಶರೀಫ ನಧಾಫ್, ವಿಶ್ವನಾಥ ಹರವಿ, ರಮೇಶ ವನಹಳ್ಳಿ, ಬಸವರಾಜ ನಾರಾಯಣಪೂರ, ದಯಾನಂದ ಅಕ್ಕಿ, ಹೊನ್ನಪ್ಪ ಹೂಗಾರ, ಚನ್ನವೀರಯ್ಯ ಹಿರೇಮಠ, ರೇಣುಕನಗೌಡ ಪಾಟೀಲ, ಶ್ರೀಮತಿ ಪದ್ಮಕ್ಕ, ಶಿವರಾಜ ರಾಯಣ್ಣವರ, ಕಾಶೀನಾಥ ಕಳ್ಳಿಮನಿ, ವಿನಯ ಮುಂಡಗೋಡ, ಮಲ್ಲಿಕಾರ್ಜುನ ಹಡಪದ, ಪ್ರತಿಕ ಕೋಳೆಕಾರ ಸೇರಿದಂತೆ ಮುಖಂಡರು, ಉದ್ಯೋಗ ಆಕಾಂಕ್ಷಿಗಳು ಇದ್ದರು.  ಪಟ್ಟಣದ ಹೊರವಲಯದ ಬೊಮ್ಮಾಯಿಯವರ ನಿವಾಸದಲ್ಲಿ ಪ್ರಭಂಜನ ಕಂಪನಿ ವತಿಯಿಂದ ಹಮ್ಮಿಕೊಂಡ ಉದ್ಯೋಗ ಮೇಳವನ್ನು ಉದ್ಯಮಿ, ಯುವ ಮುಖಂಡ ಭರತ್ ಬೊಮ್ಮಾಯಿ ಉದ್ಘಾಟಿಸಿದರು.

ಸುದ್ದಿ ಓದಿ