ರಾಣೆಬೆನ್ನೂರ

ಬುದ್ಧಿ ಶುದ್ಧವಾಗಿದ್ದರೆ ಸುಖ ಪ್ರಾಪ್ತಿ: ಡಾ. ಶಿವಾನಂದ ಭಾರತಿ ಶ್ರೀ

ಬುದ್ಧಿ ಶುದ್ಧವಾಗಿದ್ದರೆ ಸುಖ ಪ್ರಾಪ್ತಿ:  ಡಾ. ಶಿವಾನಂದ ಭಾರತಿ ಶ್ರೀ

ಲೋಕದರ್ಶನ ವರದಿ

ರಾಣಿಬೆನ್ನೂರ 27:  ಬುದ್ಧಿ ಶುದ್ಧವಾಗಿದ್ದರೆ ಸುಖ ಪ್ರಾತ್ಪಿಯಾಗುತ್ತದೆ. ಮನುಜನು ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ ಶುದ್ಧವಾಗಿರುವುದಿಲ್ಲವೋ ಅಲ್ಲಿಯವರೆಗೂ ಶಾಂತಿ, ನೆಮ್ಮದಿ ಹಾಗೂ ಸಂತೃಪ್ತಿ ಮತ್ತು ಮುಕ್ತಿ ಸಿಗುವುದಿಲ್ಲ ಎಂದು ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

  ಬುಧವಾರ ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿ ಸಿದ್ಧಾರೂಢ ಮಠದಲ್ಲಿ ಸದ್ಗುರು ಸಿದ್ಧಾರೂಢಸ್ವಾಮಿಯವರ ಜಯಂತಿ ಅಂಗವಾಗಿ ನಡೆಸುವ 25ನೇಯ ವೇದಾಂತ ಪರಿಷತ್, ಡಾ| ಶಿವಾನಂದ ಭಾರತಿ ಮಹಾಸ್ವಾಮಿಜಿಗಳವರ 82ನೇಯ ಜಯಂತೋತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

      ಶಿವಾವತಾರಿ ಭೂಲೋಕ ವಾಸಿಯಾದ  ಸಿದ್ಧಾರೂಢರು ಸರ್ವ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಲೆಂಬ ಸಂಕಲ್ಪದಿಂದ ಜಾತಿ, ಮತ, ಪಂಥಗಳ ಬೇಧವಿಲ್ಲದೆ ಶಾಂತಿ ಮಂತ್ರವನ್ನು ಬೋಧಿಸಿದ ಮಹಾತ್ಮ ಸಿದ್ಧಾರೂಢರು. ಅಂತವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಜಾತಿಯ ಸೋಂಕು ತಗುಲದೆ ಸರ್ವರೂ ಒಂದಾಗಿ ಬಾಳಲು ಸಾಧ್ಯ, ಅಲ್ಲದೆ ಸತ್ಸಂಗವು ಜನ್ಮಜನ್ಮಾಂತರ ಪಾಪಕರ್ಮಗಳು ನಾಶವಾಗಿ ಮುಕ್ತಿಯನ್ನು ಪಡೆಯಲು ಸಾಧ್ಯ ಎಂದು ಶ್ರೀಗಳು ನುಡಿದರು.

      ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು ಮಾತನಾಡಿ, ಮನುಷ್ಯ ಮನಸ್ಸು, ಬುದ್ದಿ, ಚಿತ್ತಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸದ್ಗುರುವಿನ ಉಪದೇಶವನ್ನು ಆಲಿಸಿದಾಗಲೇ ಮನುಜ ಸದ್ಗತಿಯನ್ನು ಪಡೆಯಲು ಸಾಧ್ಯ, ಮಹಾತ್ಮರ ದರ್ಶನ ಫಲದಿಂದಾಗಿ ಕಠೋರತೆಯಿಂದ ಕಾಡಿನಲ್ಲಿ ಜೀವಿಸುತ್ತಿದ್ದ ವಾಲ್ಮಿಕಿ ಶ್ರೀರಾಮನ ದರ್ಶನ ಪಡೆದ ಕಾರಣ ಸಾಕ್ಷಾತ್ಕಾರ ಹೊಂದಿ ರಾಮಾಯಣ ರಚಿಸಿ ಆದಿಕವಿ ವಾಲ್ಮಿಕಿ ಮಹಷರ್ಿಯಾದರು. ಸತ್ಸಂಗವು ಮನುಷ್ಯನನ್ನು ಒತ್ತಡದ ಜೀವನದಿಂದ ಬಿಡುಗಡೆ ಪಡೆದು ಮುಕ್ತಿಯ ಕಡೆಗೆ ಕೊಂಡೊಯ್ಯುವ ಸನ್ಮಾರ್ಗವಾಗಿದೆ ಎಂದು ನುಡಿದರು. 

       ಹಲವಾರು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಪರೋಪಕಾರಂ ಇದಂ ಶರೀರಂ ಎಂಬಂತೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವಿತದ ಅವಧಿಯಲ್ಲಿ ಪುಣ್ಯದ ಕಾರ್ಯಗಳನ್ನು ಮಾಡುವುದರೊಂದಿಗೆ ಭಗವಂತನ ಕೃಪೆಗೆ ಪಾತ್ರರಾಗಬೇಕು, ಗುರುವಿನ ಸೇವೆ ಹಾಗೂ ಪುಣ್ಯ ಕಾರ್ಯ ಮಾಡಲು ಏಕಾಗ್ರತೆಗೆ ಸತ್ಸಂಗ ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು. 

     ದಾವಣಗೇರಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು ಮಾತನಾಡಿ, ಮನುಷ್ಯನ ಜೀವನದ ಬಂಡಿಗೆ ಸಾರಥಿ ಬುದ್ದಿ, ಸಾರಥಿ ಸರಿಯಾದ ಮಾರ್ಗದಲ್ಲಿ ಸಾಗಿದಾಗ ಮೋಕ್ಷದ ಗುರಿಮುಟ್ಟಲು ಸಾಧ್ಯ, ಮಹಾಭಾರತದಲ್ಲಿ ಕರ್ಣನಿಗೆ ಸರಿಯಾದ ಸಾರಥಿ ಇರದ ಕಾರಣ ಅವನು ಸೋಲು ಕಂಡನು. ಅದೇ ಅಜರ್ುನನಿಗೆ ಬುದ್ಧಿ ಎಂಬ ಶ್ರೀಕೃಷ್ಣ ಪರಮಾತ್ಮ ಸಾರಥಿಯಾಗಿದ್ದರಿಂದ ಗೆಲುವೆಂಬ ಗುರಿ ಮುಟ್ಟಲು ಸಾಧ್ಯಾವಾತಿ  ಎಂದು ಶ್ರೀಗಳು ಹೇಳಿದರು.

     ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಕುಗ್ರಾಮವಾದ ಖಂಡೇರಾಯನಹಳ್ಳಿಗೆ ದಾರಿಯೂ ಸಹ ಇದ್ದಿಲ್ಲ, ಗುರು ಕೃಪೆಯಿಂದ ಇಂದು ಈ ಗ್ರಾಮ ಸಂಪತ್ಭರಿತವಾಗಿದೆ, ಗುರು ಪಾದವನಿಟ್ಟ ನೆಲ ಪುಣ್ಯ ಕ್ಷೇತ್ರ, ನೀನಿಟ್ಟ ಜಲ ಪಾವನ ತೀರ್ಥ ಎಂಬಂತೆ ಡಾ| ಶಿವಾನಂದ ಭಾರತಿ ಶ್ರೀಗಳ ಪಾದ ಸ್ಪರ್ಶದಿಂದ ಇಂದು ಪುಣ್ಯ ಕ್ಷೇತ್ರವಾಗಿದೆ. ಮುಂದಿನ ವರ್ಷ ಮಹಾರಥೋತ್ಸವದ ಜೊತೆಗೆ ರಜತಮಹೋತ್ಸವ ಆಚರಿಸುವ ಸಂಕಲ್ಪ ಮಾಡಿದ್ದೇವೆ ಎಂದರು

    ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಮಹಾಸ್ವಾಮಿಜಿ, ಚಳಗೇರಿಯ ಕಟಗಿಹಳ್ಳಿ ಮಠದ ಡಾ|ಮಹಾಂತೇಶ್ವರ ಶ್ರೀಗಳು, ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮಿಜಿ, ಇಂಚಲದ ಪ್ರಣರ್ಾನಂದ ಭಾರತಿ ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಮುರಳೀಧರ ಶ್ರೀಗಳು, ನಗರದ ವಿರಕ್ತಮಠದ ಗುರುಬಸವ ಶ್ರೀಗಳು, ಮಣಕೂರ ಸಿದ್ಧಾರೂಢ ಗುರುದೇವಾಶ್ರಮದ ಮಾತಾಜಿ ಚನ್ನಬಸಮ್ಮನವರು, ಗೋಕಾಕ ತಾಲೂಕ ಹಡಗಿನಾಳದ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ದತಿಯ ಒಂದು ಚರಣದ ಮತಿಗೆ ಮಂಗಲವಿವುದಾವದುತ್ತಮರ ಸಂಗ ವಿಷಯ ಕುರಿತು ತಮ್ಮ ಉಪದೇಶಾಮೃತ ನೀಡಿದರು. 

   ಹರಿಹರ ಮಾಜಿ ಶಾಸಕರಾದ ಶಿವಶಂಕರ, ಬಿ.ಪಿ. ಹರೀಷ, ಬೆಂಗಳೂರ ಗಿರೀಶ ಭೈರತಿ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಪೂಜಾರ, ಉಪಾಧ್ಯಕ್ಷೆ ಲಲಿತಾ ಹಿರೇಬಿದರಿ, ಸದಸ್ಯರಾದ ಮಲ್ಲೇಶಪ್ಪ ತೋಟಗೇರ, ಶಕುಂತಲಾ ಕೊಡ್ಲೇರ, ಶ್ರೀಮಠದ ಅಧ್ಯಕ್ಷ ಫಕ್ಕೀರಪ್ಪಗೌಡ್ರ, ಜನಾರ್ಧನ ಕಡೂರ, ಡಾ| ಎಂ.ಸುನಿತಾ, ಅರುಣಸ್ವಾಮಿ ಹಿರೇಮಠ, ನ್ಯಾಯವಾದಿ ಎಂ.ಬಿ.ಚಿನ್ನಪ್ಪನವರ, ಡಾಕೇಶ ಲಮಾಣಿ, ಗಂಗಾಧರ ಬಣಕಾರ, ಕರಬಸಪ್ಪ ಮಾಕನೂರ ಇದ್ದರು. 

        ಬ್ರಾಹ್ಮಿ ಮುಹೂರ್ತದಲ್ಲಿ ಸಿದ್ಧಾರೂಢರ ಪಂಚಲೋಹದ ಮೂತರ್ಿಗೆ ಪಂಚಾಮೃತ ಅಭಿಷೇಕ ಹಾಗೂ ಪೂಜಾ ವಿಧಾನಗಳನ್ನು ಚನ್ನಯ್ಯ ಶಾಸ್ತ್ರೀ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ನಗರದ ವಕೀಲ ಎಂ.ಬಿ. ಚಿನ್ನಪ್ಪನವರ ಹಾಗೂ ದಾವಣಗೇರಿಯ ಬಾಪೂಜಿ ಮೆಡಿಕಲ್ ಕಾಲೇಜ ಪ್ರೊ| ಡಾ| ಎಂ. ಸುನಿತಾ ಕುಟುಂಬದವರಿಂದ ಡಾ| ಶಿವಾನಂದ ಭಾರತಿ ಶ್ರೀಗಳವರ ತುಲಾಬಾರ ನೆರವೇರಿಸಿದರು. ನಂತರ ಸಾಮೂಹಿಕ ವಿವಾಹದಲ್ಲಿ ನವದಂಪತಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು 

ಸುದ್ದಿ ಓದಿ