ಯರಗಟ್ಟಿ

ಕಾಲುವೆ ಸೈಪನ್ ದುರಸ್ತಿ ಕಾಮಗಾರಿ 15 ದಿನಗಳಲ್ಲಿ ಮುಗಿಯದಿದ್ದರೆ ಬೃಹತ್ ಪ್ರತಿಭಟನೆ : ಮಹಾಂತೇಶ ಕವಠಗಿಮಠ ಎಚ್ಚರಿಕೆ

ಕಾಲುವೆ ಸೈಪನ್ ದುರಸ್ತಿ ಕಾಮಗಾರಿ 15 ದಿನಗಳಲ್ಲಿ ಮುಗಿಯದಿದ್ದರೆ ಬೃಹತ್ ಪ್ರತಿಭಟನೆ : ಮಹಾಂತೇಶ ಕವಠಗಿಮಠ ಎಚ್ಚರಿಕೆ

ಯರಗಟ್ಟಿ 09: ಸಮೀಪದ ಮುನವಳ್ಳಿಯ ಶಿಂದೋಗಿ ಕ್ರಾಸ್‌ನಲ್ಲಿ ಮಲಪ್ರಭಾ ಎಡದಂಡೆ ಕಾಲುವೆಯ ಸೆ ಪನ್ ಒಡೆದು ಎರಡು ವರ್ಷ ಕಳೆದರು ದುರಸ್ತಿ ಗೋಳಿಸದ ಹಿನ್ನಲೆಯಲ್ಲಿ ಸೋಮವಾರ ರಾಜ್ಯ ಹೆದ್ದಾರಿಯನ್ನು ಬಂದ ಮಾಡಿ ಸರಕಾರದ ವಿರುದ್ಧ ಬ್ರಹತ್ ಪ್ರತಿಭಟನೆ ವಿರೂಪಾಕ್ಷ ಮಾಮನಿಯವರ ನೆತೃತ್ವದಲ್ಲಿ ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಮೂರು ತಾಸು ಪ್ರತಿಭಟನೆ ಜರುಗಿತು. 

ನಂತರ ಬಿಜೆಪಿ ಮುಖಂಡ ಮಾಂತೇಶ ಕೌವಟಗಿಮಠ ಸ್ಥಳಕ್ಕೆ ಆಗಮಿಸಿ ನಿರಾವರಿ ನಿಗಮದ ಎಮ್‌.ಡಿ ಹಾಗೂ ಮುಖ್ಯ ಇಂಜಿನಿಯರಗಳ ಜೋ ತೆಗೆ ಪೋನ ಮುಖಾಂತರ ಮಾತನಾಡಿ ಇಗಾಗಲೆ ಮುಖ್ಯಮಂತ್ರಿಗಳ ಜೋತೆ ಹಾಗೂ ಸಂಬಂದಪಟ್ಟ ಅಧಿಕಾರಿಗಳಿಂದ ಅಂದಾಜು ಪ್ರತಿ ತಯಾರಿಸಿದ್ದು ಇದೆ ಇನ್ನು 15 ದಿನದಲ್ಲಿ 9.5 ಕೋಟಿಯ ಟೆಂಡರ ಕರೆದು ಕಾಮಗಾರಿಯನ್ನು ಪ್ರಾರಂಭಿಸುವದಾಗಿ ತಿಳಿಸಿದರು. 

ಒಂದು ವೇಳೆ 15 ದಿವಸದಲ್ಲಿ ಟೆಂಡರ ಅಥವಾ ಕಾಮಗಾರಿ ಪ್ರಾರಂಭವಾಗದಿದ್ದರೆ ದಾರವಾಡದ ಎಮ್‌.ಡಿಯವರ ಆಫೀಸ ಮುಂದೆ ಎಲ್ಲ ರೈತರ ಸಹಯೋಗದಲ್ಲಿ ದರಣಿ ಹುಡುವದಾಗಿ ಸಂಬಂದ ಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯಲು ತಿಳಿಸಿದರು.  

ಆದರು ದುರಸ್ತೆ ಯಾಗಿಲ್ಲಾ ಇದೆಲ್ಲದರ ಮಧ್ಯೆ ನೀರು ಬಿಟ್ಟು ಆ ಸಮಸ್ಯೆ ಗೌಣ ಮಾಡಿ ಮತ್ತೆ ಅದೇ ದುರ್ವವ್ಯಸ್ಥೆ ನಡೆಯುತ್ತಿದೆ. ಜಲಾಶಯದ 0 ಮೈಲ್‌ನಿಂದಲೇ ಬೇಸಿಗೆಯಲ್ಲಿ ಕಾಲುವೆ ಎಡ ಮತ್ತು ಬಲ ಬದಿಯಲ್ಲಿ ಸಿಮೆಂಟ್ ಹಾಕುವುದು, ಒಳಗೆ ಬಿದ್ದ ಮಣ್ಣು, ಕಲ್ಲು ಸೇರಿದಂತೆ ಇತರ ಗಲೀಜು ಸ್ವಚ್ಛಗೊಳಿಸುವುದು. ಕಾಂಕ್ರೀಟ್ ಬೆಡ್ ಹಾಕುವುದು ಕೊನೆಯ ಭಾಗದವರೆಗೆ ವ್ಯವಸ್ಥಿತವಾಗಿ ನಡೆದರೆ ಕಾಲುವೆ ನೀರು ಕೊನೆಯ ಭಾಗದ ರೈತರಿಗೆ ತಲುಪಬಹುದ ಮಾಜಿ ವಿಧಾನಸಭಾ ಪರಿಷತ್ತ್‌ ಸದಸ್ಯ ಮಹಾಂತೇಶ ಕವಟಗಿಮಠ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದರು. 

ರಾಜಕೀಯ ಹೊರೆತುಪಡಿಸಿ ಪಕ್ಷಾತೀತವಾಗಿ ರೈತರ ಅಳಲಿಗೆ ಎಲ್ಲಾ ಜನಪ್ರತಿನಿಧಿಗಳು ರೈತರ ಪರ ನಿಂತು ನೀರು ಕೊಡಿಸುವ ಕಾರ್ಯ ಮಾಡಬೇಕು ನಿರ್ಲಕ್ಷ್ಯ ತೋರಿದ ಇಂಜಿನಿಯರ್ ಮೇಲೆ ಕ್ರಮ ಕೈಗೊಳಬೇಕು ಎಂದು ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ನೇತೃತ್ವದಲ್ಲಿ  ಅನೇಕ ರೈತರು ಪ್ರತಿಭಟನೆ ಮಾಡುವ ಮೂಲಕ ಧರಣಿ ಕುಂತ ಪ್ರಸಂಗ ನಡೆದಿದೆ. 

ಈ ಕಾಲುವೆ ದುರಸ್ತಿ ನೆಪದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ನಿತ್ಯ ಕೇಳಿ ಬರುತ್ತಿದೆ ವಿರೂಪಾಕ್ಷ ಮಾಮನಿ ಹೇಳಿದರು.  

ಆ ಪ್ರಕಾರ ಸೇರಿದ ಜನ ಶಿಂದೋಗಿ, ಯಕ್ಕೇರಿ, ಹಿರೂರ, ಹಳ್ಳೂರ, ಬಂಡಾರಹಳ್ಳಿ, ತೇರೆದಕೊಪ್ಪ, ಬೊಚಬಾಳ ಗ್ರಾಮಗಳ ಸಾವಿರಾರು ಜನ ರೈತರು ಸೇರಿದ್ದರು ರೈತರನ್ನು ಉದ್ದೇಸಿಸಿ ಜಗದೀಶ ಕೌಜಗೆರಿ, ಉಮೇಶ ದಂಡಿನ, ಶಿವಾನಂದ ಮೇಟಿ, ಸುಬಾಸ ಗಿದಿಗೌಡ, ಮಾತನಾಡಿ ಸಾವಿರಾರು ಎಕ್ಕರೆ ಹೊಲಗಳಿಗೆ ಇ ಸೈಪಾನದಿಂದ ರೈತರಿಗೆ ನೀರೂ ವದಗಿಸುತಿದ್ದರು. 

ಈ ಸೈಪಾನ ಒಡೆದು ಹೋಗಿದ್ದರಿಂದ ಎರಡು ವರ್ಷದಿಂದ ರೈತರ ಹೊಲಗಳಿಗೆ ನೀರು ಇಲ್ಲದೆ ಸರಿಯಾಗಿ ಬೆಳೆ ಇಲ್ಲದ ಕಾರಣ ರೈತರು ಸಂಕಷ್ಟದಲ್ಲಿ ಇರುವರು. ಈ ಪಾನ ದುರಸ್ತಿಗೋಳಿಸಿಲು ಸಂಬಂದಪಟ್ಟ ಅಧಿಕಾರಿಗಳಿಗೆ ಅನೇಕಬಾರಿ ರೈತರು ಮನವಿ ಸಲ್ಲಿಸಿದ್ದರು ಅಧಿಕಾರಿಗಳು ಕ್ಯಾರೆ ಅನ್ನಲಿಲ್ಲ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಬಂದು ರೈತರಿಗೆ ಸ್ಪಂದಿಸುವ ಕೆಲಸ ಮಾಡ್ತಾರಾ ಕಾದುನೋಡಬೇಕಿದೆ.!  

ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಬಾಸ ಪಾಟೀಲ, ತಾಲೂಕ ಅಧ್ಯಕ್ಷ ಈರಣ್ಣ ಚಂದರಗಿ, ರಮೇಶ ಗೋಮಾಡಿ, ಶೇಖರ ಗೋಕಾಂವಿ, ಮಾಂತೇಶ ಕುರಬಟ್ಟಿ, ಸುರೇಶ ಕುರಬಟ್ಟಿ, ಮಲ್ಲಿಕಾರ್ಜುನ ರಡರಟ್ಟಿ, ಸುರೇಶ ಅಮಠ, ಮಡಿವಾಳಯ್ಯ ಹಿರೇಮಠ, ಅನೀಲ ಕದಂ, ಅಪ್ಪು ನುಗ್ಗಾನಟ್ಟಿ, ರಾಜು ಸಾಲಿಮಠ, ಸುನೀಲ ಮಾಮನಿ, ನೀರಾವರಿ ಇಲಾಖೆಯ ಅಧಿಕಾರಿಗಳಾದ ಎಡಬ್ಲ್ಯು ಮುದಿಗೌಡ್ರ, ಇತರರು ಉಪಸ್ಥಿತರಿದ್ದರು. 

ಡಿ.ವಾಯ್‌.ಎಸ್‌.ಪಿ ಪಾಂಡುರಂಗ, ಸಿ.ಪಿ.ಐ ದರ್ಮಟ್ಟಿ, ಪಿ.ಎಸ್‌.ಐ ಆನಂದ ಕ್ಯಾರಲಕಟ್ಟಿ ಪ್ರತಿಭಟನೆಯಲ್ಲಿ ಅಹಿತಕರ ಘಟನೆಗಳಾಗದಂತೆ ನೋಡಿಕೊಂಡರು. ರಸ್ತೆ ಬಂದ ಮಾಡಿದ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಕೆಲುವ ಗಂಟೆಗಳ ಕಾಲ ತೊಂದರೆಯಾಯಿತು. 


ಸುದ್ದಿ ಓದಿ