ರಾಜಕೀಯಕ್ಕೆ ಬಂದರೆ ಮಾದರಿ ರಾಜಕೀಯ ಕ್ರಾಂತಿಯನ್ನೇ ಮಾಡುತ್ತೇನೆ
ಶಿಗಾವಿ : ನನಗೆ ರಾಜಕೀಯಕ್ಕೆ ಬರುವ ಆಸಕ್ತಿಯಂತೂ ಇಲ್ಲ, ರಾಜಕೀಯಕ್ಕೆ ಬಂದರೆ ಮಾದರಿ ರಾಜಕೀಯ ಕ್ರಾಂತಿಯನ್ನೇ ಮಾಡುತ್ತೇನೆ, ರಾಜಕೀಯ ಅಂದರೆ ಎಲ್ಲರೂ ಶಶಿಧರ ಯಲಿಗಾರ ಅವರನ್ನು ನೋಡಿ ರಾಜಕಾರಣ ಮಾಡಬೇಕು ಎನ್ನುವಂತೆ ರಾಜಕಾರಣ ಮಾಡುತ್ತೇನೆ ಎಂದು ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ತಾಲೂಕಿನ ಗಂಗೇಭಾವಿಯಲ್ಲಿ ಯಲಿಗಾರ ಅವರ ರೆಸಾರ್ಟನಲ್ಲಿ ಗಂಗೇಬಾವಿ ಸಿ ಬಿ ಯಲಿಗಾರ ಸೇವಾ ಸಂಸ್ಥೆ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಗಂಗೇಬಾವಿ ಕೆರೆಗೆ ಬಾಗಿನ ಅರೆ್ಣ ಮತ್ತು ಶಿಗ್ಗಾವಿ ಸವಣೂರ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕಿಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಸೇವೆಗೆ ಹಲವಾರು ಜನರು ಕೇಳುತ್ತಿದ್ದಾರೆ ನನಗೆ ರಾಜಕೀಯ ಇಚ್ಚೆ ಇಲ್ಲ, 11,500 ಅಂಗನವಾಡಿ ಮಕ್ಕಳಿಗೆ ಕಾನ್ವೆಂಟ್ ಅಂಕಲಿಪಿ ಪ್ರಿಂಟ್ ಮಾಡಿಸಿಕೊಂಡು ಬಂದಿದ್ದೇನೆ ಶೀಘ್ರದಲ್ಲಿಯೇ ಅಂಗನಾಡಿ ಮಕ್ಕಳಿಗೆ ಅವುಗಳನ್ನು ವಿತರಿಸಲಾಗುವುದು, ನನಗೂ ಬೇಕಾದಷ್ಟು ಶ್ರೀಮಂತ ಗೆಳೆಯರು ಇದ್ದಾರೆ ಆದರೆ ನನಗೆ ಅವರೊಂದಿಗೆ ಸಮಯ ಕಳೆಯುವುದಕಿಂತ ನಿಮ್ಮೊಂದಿಗೆ ಕಳೆಯುವುದು ಬಹಳ ಇಷ್ಟ, ನಾನು ಬಡತನದಲ್ಲಿದ್ದಾಗ ತನ್ನೆಲ್ಲಾ ಬಂಗಾರವನ್ನು ಬಿಚ್ಚಿಕೊಟ್ಟ ನನ್ನ ಹೆಂಡತಿ ಇಂದು ಬೇಕಾದಷ್ಟು ಇದ್ದಾಗಲೂ ಬಂಗಾರ ಬೇಡಾ, ನೀವು ಮಾಡುತ್ತಿರುವ ಸಮಾಜ ಸೇವೆನೆ ಮುಂದುವರಸಿ ಎಂದ ಹೇಳುತ್ತಾಳೆ ಎಂದರು.
ಹಿರಿಯ ಪತ್ರಕರ್ತ ಲೋಚನೇಶ ಹೂಗಾರ ಮಾತನಾಡಿ ದಿ. ಸಿ ಬಿ ಯಲಿಗಾರ ಅವರನ್ನು ನಾವು ಭೂಮಿ ಪುತ್ರ ಎಂದು ಕರೆಯುತ್ತಿದ್ದೆವು, ಧಾರವಾಡದ ಅರ್ದ ಅವರ ನಗರಗಳೇ, ಅಂತವರ ಮಗ ಇಂತಹ ಈಪುಣ್ಯ ಕ್ಷೇತ್ರದಲ್ಲಿ ಬಂದು ನೆಲಸಿ ಮಾಡುತ್ತಿರುವ ಸೇವೆಯು ಮಾದರಿ ಕಾರ್ಯವಾಗಿದೆ, ಇಂತವರು ಜನರ ಪ್ರತಿನಿಧಿಗಳಾಗಿ ಬಂದು ದೊಡ್ಡ ಪ್ರಮಾಣದಲ್ಲಿ ಜನಸೇವೆ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬಂಕಾಪೂರ ಅರಳಲೆಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿ. ಸಿ ಬಿ. ಯಲಿಗಾರ ಅವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಕ್ಷಕ ಎನ್ ಕೆ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಆಶಾ ಕಾರ್ಯಕರ್ತೆಯರಾದ ವಿನೋಬಾ ಬಡಿಗೇರ, ಅಕ್ಷತಾ ಮತ್ತು ವಿದ್ಯಾರ್ಥಿನಿ ಶಕುಂತಲಾ ಹಡಪದ, ನಿವೃತ್ತ ಶಿಕ್ಷಕ ಎಮ್. ಎಸ್. ಬರದೂರ, ಆರೋಗ್ಯೆ ಇಲಾಖೆಯ ನಿಂಗಮ್ಮ ಕರಿಯಪ್ಪನವರ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುನಿತಾ ಯಲಿಗಾರ, ಆಕಾಶ ಯಲಿಗಾರ, ಆದ್ಯಾ ಯಲಿಗಾರ ಬಸವರಾಜ ಕುರಗೋಡಿ, ನಾಗರಾಜ ಸೂರಗೊಂಡ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕಿಯರು ಇದ್ದರು.