ರಾಣೆಬೆನ್ನೂರ

ವಾರದೊಳಗೆ ಬೇಡಿಕೆ ಈಡೇರದಿದ್ದರೆ ಅರೆಬೆತ್ತಲೆಗೆ ನಿರ್ಧಾರ

ವಾರದೊಳಗೆ ಬೇಡಿಕೆ ಈಡೇರದಿದ್ದರೆ ಅರೆಬೆತ್ತಲೆಗೆ ನಿರ್ಧಾರ

ರಾಣೇಬೆನ್ನೂರು 21:-  ಯೋಜನೆಗೆ ಒತ್ತಾಯಿಸಿ ಇಂದು ಮಾಕನೂರಿನ ಯೂನಿಯನ್ ಬ್ಯಾಂಕ್ ಮುಂದೆ 500 ಕ್ಕೂ ಹೆಚ್ಚು ರೈತರು ಅರೆಬೆತ್ತಲೆ ಮೆರವಣಿಗೆ ನಡೆಸಿ ಸರಕಾರ ಮತ್ತು ಬ್ಯಾಂಕ್ ಅಧಿಕಾರಿಗಳ ನೀತಿಯನ್ನು  ರೈತರ ಬಗ್ಗೆ ಇರುವ ನಿರ್ಲಕ್ಷ್ಯತನವನ್ನು ಖಂಡಿಸಿದರಲ್ಲದೆ ಸರಕಾರ ಮತ್ತು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ರೈತರು ಅರೆಬೆತ್ತಲೆಯಾಗುವ ಮೂಲಕ ಸರಕಾತ ಮತ್ತು ಮುಖ್ಯಮಂತ್ರಿಗಳನ್ನು ಮುಜುಗರಕ್ಕೆ ಈಡು ಮಾಡದರಲ್ಲದೆ ವಾರದೊಳಗೆ ಓಖಿಖ ಯೋಜನೆಯ ಬೇಡಿಕೆ ಈಡೇರದಿದ್ದರೆ, ಮುಖ್ಯಮಂತ್ರಿಗಳ ಶಿಗ್ಗಾಂವ ನಿವಾಸದೆದುರು ಪೂರ್ಣಬೆತ್ತಲೆಯಾಗಿ ರೈತರ ಬಗ್ಗೆ ಸರಕಾರಕ್ಕಿರುವ ನಿರ್ಲಕ್ಷ್ಯತನವನ್ನು ಆ ಮೂಲಕ ಖಂಡಿಸಲಾಗುವುದೆಂದು ರೈತ ಹೋರಾಟಗಾರ ರವೀಂದ್ರಗೌಡ ಎಫ್‌. ಪಾಟೀಲ ಎಚ್ಚರಿಸಿದರು. 

ಕಳೆದ 28 ದಿನಗಳಿಂದ  ಓಖಿಖ ಯೋಜನೆಗೆ ಒತ್ತಾಯಿಸಿ ಮಾಕನೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಂದೆ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರಕಾರ ಮತ್ತು ಜಿಲ್ಲಾಡಳಿತ ಈ ಸಮಸ್ಯೆ ಬಗೆಹರಿಸಲು ತೋರಿರುವ ನಿರ್ಲಕ್ಷ್ಯತನ ಖಂಡಿಸಿ ಇಂದು ಮಾಕನೂರಿನ ಬ್ಯಾಂಕ್ ಮುಂದೆ ಅರೆಬೆತ್ತಲೆ ಧರಣಿ ನಡೆಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸರಕಾರ ಮತ್ತು ಜಿಲ್ಲಾಡಳಿತ ಹಾಗೂ ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ದಿಕ್ಕಾರ ಕೂಗಿದರು.  

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಈರಣ್ಣ ಹಲಗೇರಿ, ಶಿವಮೊಗ್ಗದಲ್ಲಿ ಹರೀಶ ನ ಕೊಲೆಯಾದರೆ ಇಡೀ ಸರಕಾರವೇ ಹಿಂದೂ ಹತ್ಯೆ ಎಂದು ಬೊಬ್ಬೆ ಇಡುತ್ತಾ ರಾಷ್ಟ್ರಮಟ್ಟದ ಸುದ್ದಿ ಮಾಡುತ್ತೆ, ಆದರೆ ನಾವು ರೈತರೆಲ್ಲ ಹಿಂದೂಗಳು ತಿಂಗಳುಗಳ ಕಾಲ ಬಿಸಿಲಲ್ಲಿ ಬೆಂದರೂ ತಿರುಗಿ ನೋಡದೆ ಬೊಮ್ಮಾಯಿಗೆ ಎನನ್ನಬೇಕು ? ಎಂದು ಪ್ರಶ್ನಿಸಿದರು. 

ಇನ್ನೊಬ್ಬ ರೈತ ಮುಖಂಡ ನ್ಯಾಯವಾದಿ ಎಸ್‌.ಡಿ. ಹಿರೇಮಠ ಮಾತನಾಡಿ  ಓಖಿಖ ಯೋಜನೆ ರೈತರ ಹಕ್ಕು ಅದನ್ನು ಕಸಿದುಕೊಳ್ಳುವು ಪ್ರಯತ್ನವನ್ನು ಬ್ಯಾಂಕಿನವರು ಮಾಡಬಾರದೆಂದರಲ್ಲದೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಅವರ ಬೇಜಾಬ್ದಾರಿ ನೀತಿಯೇ ಜಿಲ್ಲೆಯಲ್ಲಿ ಇಂಥಹ ಅವಘಡಕ್ಕೆ ಕಾರಣವೆಂದರು.  

ರೈತರ ಗಮನಕ್ಕೆ ಬಾರದಂತೆ ರೀಸ್ಟ್ರಕ್ಚರ್ (ಚಾಲ್ತಿ) ಮಾಡಿಕೊಂಡು ರೈತರಿಗೆ ಓಖಿಖ ಯೋಜನೆ ಸಿಗದಂತೆ ಮಾಡಿರುವ ಬ್ಯಾಂಕಿನವರ ಕ್ರಮ ಖಂಡಿಸಿದರಲ್ಲದೆ, ಬ್ಯಾಂಕಿನವರು ಮಾಡಿದ ತಪ್ಪಿಗೆ ರೈತರು ಕಣ್ಣೀರು ಸುರಿಸುವಂತಾಗಿದೆ ಎಂದರು. 

500 ಕ್ಕೂ ಹೆಚ್ಚು ರೈತರು ಅರೆಬೆತ್ತಲೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರೈತ ಮುಖಂಡರಾದ ಬಸವರಾಜ ಕೊಂಗಿಯವರ, ಚಂದ್ರ​‍್ಪ ಬಾರ್ಕಿ, ಅಶೋಕಗೌಡ ಗಂಗನಗೌಡ್ರ, ರಮೇಶ ಪೂಜಾರ, ಸುರೇಶ ಮಲ್ಲಾಪುರ, ಶಿವನಗೌಡ ದೊಡ್ಡಗೌಡ್ರ, ಹನುಮಂತಪ್ಪ ಕಂ  ಬಳೂರು, ಶಿದ್ದಣ್ಣ ಸಿರಗೇರಿ, ಹರಿಹರಗೌಡ ಎಸ್‌. ಪಾಟೀಲ, ಬಸವನಗೌಡ ಹುಲ್ಲತ್ತಿ, ಯಲ್ಲಪ್ಪ ಓಲೇಕಾರ, ಭೀಮೇಶ ಪೂಜಾರ, ಸುಭಾಸಗೌಡ ಪಾಟೀಲ, ಬಸವಣ್ಣೆಪ್ಪ ಸಣ್ಣಮನಿ ಮುಂತಾದವರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್‌ ಒದಗಿಸಿದ್ದರು. 


ಸುದ್ದಿ ಓದಿ