ಸಿರುಗುಪ್ಪ

ಬ್ರಾಹ್ಮಣ್ಯ ನಾಶವಾದರೆ ಅದು ವಿಶ್ವಕ್ಜೆ ಮಾರಕ: ಮಂತ್ರಾಲಯಶ್ರೀ

ಬ್ರಾಹ್ಮಣ್ಯ ನಾಶವಾದರೆ ಅದು ವಿಶ್ವಕ್ಜೆ ಮಾರಕ: ಮಂತ್ರಾಲಯಶ್ರೀ

ಸಿರುಗುಪ್ಪ 17: ಬ್ರಾಹ್ಮಣ್ಯ ನಾಶವಾದರೆ ಅದು ಕೇವಲ ನಮ್ಮ ಸಮಾಜಕ್ಕೆ ಒಂದೇ ಅಲ್ಲ, ಇಡೀ ರಾಜ್ಯ, ದೇಶ ಹಾಗೂ ವಿಶ್ವಕ್ಕೆ ಅದು ಮಾರಕವಾಗುತ್ತದೆ  ಎಂದು ಪ್ರಸ್ತುತ ಮಂತ್ರಾಲಯ ಕ್ಷೇತ್ರದ ಪೀಠಾಧಿಪತಿ ಸುಭುದೇಂದ್ರ ಶ್ರೀಗಳು ಹೇಳಿದರು.  

ನಗರದ ಶನೈಶ್ಚರ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ನಾವು ಸರ್ವೇ ಜನ ಸುಖಿನೋ ಭವಂತು ಎಂದು ಹೇಳುವ ಸಮಾಜದವರಾಗಿದ್ದೇವೆ. ಎಂದಿಗೂ ಇತರೆ ಸಮಾಜದವರಿಗೆ ಮೀಸಲಾತಿ ಕೊಡಬೇಡಿ ಎಂದು ಹೇಳಿದವರಲ್ಲ. ಆದರೆ ಕೆಲ ಸಮುದಾಯದವರು ಬ್ರಾಹ್ಮಣ ಸಮಾಜವನ್ನು ತುಳಿತಕ್ಕೆ ಒಳಪಡಿಸಬೇಕು, ಮೂಲೆಗುಂಪು ಮಾಡಬೇಕು ಎನ್ನುವುದು ನಿಜವಾಗಿಯೂ ಸಹ ಅದು ರಾಕ್ಷಸ ಭಾವನೆ ಎಂದು ತಿಳಿಯಬೇಕು. ಎಲ್ಲರೂ ಚೆನ್ನಾಗಿರಬೇಕೆಂದು ನಾವೆಂದರೆ ಬ್ರಾಹ್ಮಣರು ಹಾಳಾಗಬೇಕು ಎಂದು ಇತರರು ಹೇಳುತ್ತಿದ್ದಾರೆ. ಅವರಿಗೆ ಸರಿಯಾದ ಮತ್ತು ದಿಟ್ಟ ಉತ್ತರವನ್ನು ಹೇಳುವ ಅವಶ್ಯಕತೆ ಇದೆ. ಬ್ರಾಹ್ಮಣ ಸಂಘಕ್ಕೆ ಮತ ಪ್ರಚಾರಕರು ಇದ್ದಾರೆ. ಶಂಕರಾಚಾರ್ಯರು, ರಾಮನುಜಾಚಾರ್ಯರು, ಮಧ್ವಾಚಾರ್ಯರು ಇವರುಗಳ ಅನುಯಾಯಿಗಳಾಗಿ ನಾವಿದ್ದೇವೆ. ಇಂದಿನ ಕಾಲಮಾನಕ್ಕೆ ವಿಪ್ರ ಸಮಾಜವು ಸಂಘಟಿತವಾಗಲೇಬೇಕಿದೆ.  ನಾವೆಲ್ಲರೂ ವೇದ ಪುರಾಣ ಶಾಸ್ತ್ರ ಮತ್ತು ವೈದಿಕ ಧರ್ಮ ಅನುಸರಿಸುವವರಾಗಿದ್ದು ನಾವುಗಳು ವೈದಿಕ ವೃತ್ತಿ ಮತ್ತು ವೈದಿಕ ಧರ್ಮಾಚರಣೆಗಳ ಮೂಲಕ ಸಮಾಜವನ್ನು ಗಟ್ಟಿ ಗೊಳಿಸಬೇಕಿದೆ. ನಮ್ಮ ಮತ ಪ್ರಚಾರಕರ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡಿದರೆ ಎಲ್ಲರೂ ಸಂಘಟಿತರಾಗಿ ಎದುರಿಸಬೇಕು ಸರ್ಕಾರಗಳು ಯಾವುದೇ ಇರಬಹುದು. ಅಧಿಕಾರಕ್ಕೆ ಬಂದವರು ಕಾಲಕಾಲಕ್ಕೆ ಅವರುಗಳು ತಮ್ಮ ಪಾತ್ರವನ್ನು ಮಾಡುತ್ತಾ ಸಹಾಯ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ರಾಜ್ಯದ ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ಗುರುರಾಯರ ಅನನ್ಯ ಭಕ್ತರಾಗಿದ್ದ ಯಡಿಯೂರ​‍್ಪ ನಿಗಮ ಮಂಡಳಿ ರಚಿಸಿ ಬ್ರಾಹ್ಮಣ ಸಮಾಜಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಮ್ಮ ಬ್ರಾಹ್ಮಣ ಸಮಾಜವು ಸರ್ಕಾರದಿಂದ ನೀಡಲ್ಪಡುವ ಅನುದಾನ ಸಹಾಯ ಮೀಸಲಾತಿಗಳನ್ನು ಪಡೆಯುವಲ್ಲಿ ನಾವು ಯಾವುದೇ ಸಂಕೋಚ ಪಡಬಾರದು.  

 ಮೀಸಲಾತಿಯ ಬಗ್ಗೆ ಹೇಳುವುದಾದರೆ ಅತ್ಯಂತ ಕನಿಷ್ಠ ಸಂಖ್ಯೆಯಲ್ಲಿ ಇರುವ ಜನಾಂಗ ಬ್ರಾಹ್ಮಣ ಸಮಾಜವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇರೆ ಸಮಾಜಗಳಿಗೆ ಅಲ್ಪಸಂಖ್ಯಾತರೆಂದು ಯಾವ ರೀತಿ ಮೀಸಲಾತಿ ನೀಡಿವೆಯೋ ಅದೇ ರೀತಿಯಾಗಿ ಬ್ರಾಹ್ಮಣ ಸಮುದಾಯಕ್ಕೂ ಸಹ  ನೀಡಲೇಬೇಕೆಂಬ ಒತ್ತಾಯ ಮಾಡಬೇಕಿದೆ. ಇದಕ್ಕಾಗಿ ನಾವೆಲ್ಲರೂ ಒಕ್ಕೊರಲಿನಿಂದ ಒತ್ತಡ ಹಾಕಿದಲ್ಲಿ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚರಗೊಳ್ಳುತ್ತವೆ. ಹಾಗೆಂದ ಮಾತ್ರಕ್ಕೆ ಇತರ ಸಮುದಾಯಗಳೊಂದಿಗೆ ಯಾವುದೇ ಘರ್ಷಣೆ ಬೇಡ  ಎಲ್ಲ ಬ್ರಾಹ್ಮಣ ಸಮಾಜದವರು ತಮ್ಮ ಮಕ್ಕಳಿಗೆ ಸಂಪ್ರದಾಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಕಲಿಸಿಕೊಡುವುದು ಮುಖ್ಯ ಮಕ್ಕಳಿಗೆ ಉಪನಯನ ಹಾಗೂ  ವಿವಾಹಾದಿ ಕಾರ್ಯಗಳನ್ನು ಸಕಾಲದಲ್ಲಿ ಮಾಡಬೇಕು. ಮಕ್ಕಳಿಗೆ ಮುಖ್ಯವಾಗಿ ಸಂಸ್ಕಾರ ನೀಡಬೇಕು ದೇಶಕ್ಕಾಗಿ ನಮ್ಮ ಸಮಾಜದಿಂದ ಯಾರು ಯಾರು ಎಂತಹ ಕೆಲಸಗಳನ್ನು ಮಾಡಿದ್ದಾರೆ ಮತ್ತು ದೇಶಕ್ಕಾಗಿ ಅವರು ನೀಡಿರುವ ಕಾಣಿಕೆಗಳು ಆತ್ಮಾಹುತಿ, ಮಾಡಿಕೊಂಡಿರುವವರ ಬಗ್ಗೆಯೂ ತಿಳಿಸಬೇಕು.  ವಿಜ್ಞಾನಿಗಳು ರಾಜಕಾರಣಿಗಳು ಮತ್ತು ಯಾರ್ಯಾರು ಉನ್ನತ ಪದವಿ ಹೊಂದಿದ್ದರು. ಸಮಾಜವನ್ನು ಮುನ್ನಡೆಸುವಲ್ಲಿ ದೊಡ್ಡ  ಸಂಘಟನೆಗಳನ್ನು ಯಾರು ಕಟ್ಟಿದ್ದಾರೆ ಎಂಬುದನ್ನು ತಿಳಿಸಬೇಕು. ಬ್ರಾಹ್ಮಣ ಮಹಿಳೆಯರು ಸಹ ಮುಂದೆ ಬರಬೇಕು ಅದೇ ರೀತಿಯಾಗಿ ಬ್ರಾಹ್ಮಣ ಮಹಿಳೆಯರಿಗೆ ಮಹಿಳಾ ಮೀಸಲಾತಿಯೂ ಬರಬೇಕು. ನಮ್ಮ ಸಮುದಾಯದವರು ಯಾವ ಪಕ್ಷಕ್ಕೆ ಮತ ಕೊಟ್ಟರೆ ಒಳ್ಳೆಯದು ಆಗುತ್ತದೆ ಎಂಬುದನ್ನು ಆಲೋಚಿಸಿ ಮತದಾನ ಮಾಡಬೇಕು. ಇಂದು ಈ ನಗರದಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಎಲ್ಲಾ ಬ್ರಾಹ್ಮಣ ಸಮಾಜದವರಿಗೆ ಅಭಿನಂದನೆಗಳನ್ನು ಶ್ರೀಗಳು ತಿಳಿಸಿದರು.ಹಾಲಿ ಶಾಸಕ ಎಂಎಸ್ ಸೋಮಲಿಂಗಪ್ಪ ಮಾತನಾಡಿ ನಿಮ್ಮ ಸಮಾಜವು ಯಾವಾಗಲೂ ನಮ್ಮ ಜೊತೆಗಿದೆ. ಇಂದು ನನಗೆ ಮನವಿ ಪತ್ರ ನೀಡಿ ಸ್ಮಶಾನಕ್ಕಾಗಿ ಸೂಕ್ತ ಸ್ಥಳ ಮತ್ತು ಏರ​‍್ಾಡು ಮಾಡಿಕೊಡುವ ಬಗ್ಗೆ ಕೇಳಿರುತ್ತೀರಿ ಅವಶ್ಯವಾಗಿ ಮಾಡುತ್ತೇನೆ. ಅಲ್ಲದೆ ಶ್ರೀಗಳು ಕೆಂಚನಗುಡ್ಡದ ವಸುಧೇಂದ್ರ ತೀರ್ಥರ ಬೃಂದಾವನ ಸ್ಥಳದಲ್ಲಿ ನೂತನ ಮಂಟಪವನ್ನು ಸರ್ಕಾರದ ವತಿಯಿಂದ ಮಾಡಿಕೊಡುವಂತೆ ಆಜ್ಞಾಪಿಸಿದ್ದಾರೆ. ಸರ್ಕಾರದ ಜೊತೆ ಮಾತನಾಡಿ ಸುಮಾರು ಒಂದು ಕೋಟಿ ರೂಪಾಯಿವರೆಗಿನ ಮಂಟಪ ಕಟ್ಟಿಸಿ ಕೊಡುತ್ತೇನೆ ಎಂಬ ಭರವಸೆ ನೀಡಿದರು.  

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದು ಸಮಾಜದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ ಮತ್ತು ರೂಪಿಸಲಾಗುತ್ತಿದೆ ಎಂದು ತಿಳಿಸಿದರು ಮಾಜಿ ಶಾಸಕ ಬಿ ಎಂ ನಾಗರಾಜ ಸೇರಿದಂತೆ ಇನ್ನಿತರ ಗಣ್ಯರು ಮಾತನಾಡಿದರುಶ್ರೀಗಳು ಪುರ ಪ್ರವೇಶ ಮಾಡಿ ದೇವಸ್ಥಾನದ ಬಳಿ ಬರುತ್ತಿದ್ದಂತೆ ತ್ರಿಮತಸ್ಥ ವಿಪ್ರರು ಜೈಘೋಷಗಳನ್ನು ಹಾಕುತ್ತಾ ಪುಷ್ಪವೃಷ್ಠಿ ಸುರಿಸಿದರು. ಸುಮಂಗಲೆಯರು ಕಳಸ ಕನ್ನಡಿಗಳನ್ನು ಹಿಡಿದು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಭಜನಾ ಮಂಡಳಿಗಳವರು ಮತ್ತು ಕೋಲಾಟ ತಂಡದವರು ಶ್ರೀಗಳನ್ನು ದೇವಸ್ಥಾನದ ಪ್ರಾಂಗಣಕ್ಕೆ ಕರೆತಂದರು. ದೇವಸ್ಥಾನದಲ್ಲಿನ ಶ್ರೀನಿವಾಸ ಆಂಜನೇಯ ಶನೇಶ್ಚರ ದೇವರುಗಳಿಗೆ ಪೂಜೆ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮಗಳು ಪ್ರಾರಂಭಗೊಂಡವು. ಶ್ರೀಗಳು ಪದಾಧಿಕಾರಿಗಳನ್ನು ಮತ್ತು ಅವರ ಜವಾಬ್ದಾರಿಗಳನ್ನು ಘೋಷಣೆ ಮಾಡಿದ ನಂತರ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಜೋಯಿಸ್ ಮಾತನಾಡಿ ತಾಲೂಕಿನಲ್ಲಿ ಅತ್ಯಂತ ಬಲಿಷ್ಠವಾದ ಸಂಘಟನೆಯನ್ನು ಕಟ್ಟಲಾಗುವುದು ಎಲ್ಲಾ ಶ್ರೀಗಳ ಆಶೀರ್ವಾದ ಮತ್ತು ಎಲ್ಲಾ ತ್ರಿಮತಸ್ಥರ ಸಹಕಾರ ಅವಶ್ಯ ಎಂದು ತಿಳಿಸಿದರು.  

ತಾಲೂಕು ಬ್ರಾಹ್ಮಣ ಸಂಘದ ಯುವ ಘಟಕದ ಅಧ್ಯಕ್ಷ ಪವನ್ ಕುಮಾರ್ ದೇಸಾಯಿ ಸ್ವಾಗತಿಸಿದರು. ಹಾಸ್ಯ ಕಲಾವಿದ ಮತ್ತು ಶಿಕ್ಷಕ ಜೆ ನರಸಿಂಹಮೂರ್ತಿ ನಿರೂಪಣೆ, ಬ್ರಾಹ್ಮಣ ಮಹಿಳಾ ಸಂಘದ ಅಧ್ಯಕ್ಷೆ ದೀಪ ಶಾಮಾಚಾರ್ ಪ್ರಾರ್ಥನೆ, ಪ್ರಧಾನ ಕಾರ್ಯದರ್ಶಿ ಕುಲಕರ್ಣಿ ರಾಘವೇಂದ್ರ ಸ್ಥಾಪನೆಯ ಉದ್ದೇಶದ ವರದಿ ವಾಚನ ಮಾಡಿದರು. 

ನಗರಸಭೆ ಅಧ್ಯಕ್ಷಿಣಿ ಕೆ. ಸುಶೀಲಮ್ಮ ವೆಂಕಟರಮರೆಡ್ಡಿ  ಅಖಿಲ ಕರ್ನಾಟಕ ಮಹಾಸಭಾದ ಪ್ರಮೋದ್ ಮನೋಲಿ, ಅಭಿವೃದ್ಧಿ ಮಂಡಳಿಯ ನಿರ್ದೇಶಕ ರಾಘವೇಂದ್ರ ಭಟ್, ಕಾರ್ಯಕಾರಿ ಸಮಿತಿಯ ಉಮೇಶ ಶಾಸ್ತ್ರಿ, ರಾಜ್ಯ ಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಎಂ.ಜಿ ಅನಂತಮೂರ್ತಿ, ಆಮ್ ಆದ್ಮಿ ಪಕ್ಷದ ಮುಖಂಡ ದರ​‍್ಪ ನಾಯಕ, ಜಿಲ್ಲಾ ಬ್ರಾಹ್ಮಣ ಒಕ್ಕೂಟದ ಪ್ರಕಾಶ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರುರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಗಾಯಕ  ಅನಂತ ಕುಲಕರ್ಣಿ ರಾಯಚೂರಿನ ಹಾಸ್ಯ ಕಲಾವಿದ  ರಾಘವೇಂದ್ರಾಚಾರ್ ಇವರುಗಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. 


ಸುದ್ದಿ ಓದಿ