ಸಾಯಿ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ
ಇಂಡಿ: ಪಟ್ಟಣದ ಬೀರ್ಪನಗರದಲ್ಲಿರುವ ಸಾಯಿಮಂದಿರದಲ್ಲಿ ಪುಟಪರ್ತಿ ಭಗವಾನ ಸತ್ಯ ಸಾಯಿ ಬಾಬಾರ ಮೂರ್ತಿ ಪ್ರತಿಷ್ಠಾಪನೆ ಬೆಳಗಿನ 4 ಗಂಟೆಗೆ ನಾಗಣಸೂರದ ಶ್ರೀಕಂಠ ಶಿವಾಚಾರ್ಯರಿಂದ ನೆರೆವೇರಿತು. ಮನಗೂಳಿಯ ಸಿದ್ದಯ್ಯ ಮಠ ಶ್ರೀಗಳಿಂದ ಗಣಹೋಮ ಮತ್ತು ನವಗ್ರಹ ಪೂಜೆ ಸೋಮವಾರ ನಡೆಯಿತು.
ಸೇವಾಕಾರ್ಯ-ಪುರುಷ ಕಾರ್ಯಕರ್ತರು ಬಿಳಿಯ ಬಟ್ಟೆ ಮಹಿಳಾ ಕಾರ್ಯಕರ್ತೆಯರು ಹಳದಿ ಸೀರೆ ಉಟ್ಟು ಗಮನ ಸೆಳೆದರು. ಮಹಿಳೆಯರು ಕುಂಭಮೇಳ ಮತ್ತು ಪೂಜಾ ಕಾರ್ಯದಲ್ಲಿ ಸಹಕರಿಸಿದರು. ಪುರುಷರು ಪೂಜಾಕಾರ್ಯ ಮತ್ತು ಪ್ರಸಾದ ವಿತರಣೆ ಅಚ್ಚುಕಟ್ಟಾಗಿ ನೆರೆವೇರಿಸಿದರು.
ಪಲ್ಲಕ್ಕಿ ಉತ್ಸವದಲ್ಲಿ ಎರಡು ದಿನ ಅನ್ನ ಪ್ರಸಾದ ಸೇವೆ ಮಾಡಿದ ಶೀವಮ್ಮ ಚನಗೊಂಡ ಬಿರಾದಾರ, ಐ.ಬಿ.ಸುರಪುರ, ರವೀಂದ್ರ ನಿಗಡಿ,ಸಂಜೀವ ಭೈರಶೆಟ್ಟಿ ಪಾಲ್ಗೊಂಡಿದ್ದರು.
ಜಯಘೋಷ- ಬೆಳಿಗ್ಗೆಯಿಂದಲೇ ಭಕ್ತರು ಸಾಯಿರಾಮ ಜಯಘೋಷ ಹಾಕುವದು ಸಾಮಾನ್ಯವಾಗಿತ್ತು.
ಭಕ್ತಸಾಗರ- ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಬೆಳಿಗ್ಗೆಯಿಂದಲೇ ಭಕ್ತಸಾಗರ ಹರಿದು ಬಂದಿತು. ನೌಕರರು, ವ್ಯಾಪಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಪೂಜೆ, ಹೋಮ, ಹವನ, ಆರತಿಯಲ್ಲಿ ಪಾಲ್ಗೊಂಡು ಪ್ರಸಾದ ಪಡೆದರು.
ಸನ್ಮಾನ: ಹಿರಿಯ ಸಾಯಿ ಭಕ್ತರಾದ ಗುರಣ್ಣ ಶಿರಣಗಾರ, ಬಸಣ್ಣ ಇಜೇರಿ, ಎಸ್.ಎಸ್.ಶೇಖದಾರ, ವಿಜಯಕುಮಾರ ಇಬ್ರಾಹಿಂಪುರ, ಸುನಂದಾ ಚೌಧರಿ, ಚಂದ್ರಶೇಖರ ಭೈರಗೊಂಡ, ಗುರಸಿದ್ದಪ್ಪ ಹಾವಿನಾಳ, ಶಕುಂತಲಾ ಕೂಡಗಿ, ಪುರಸಭೆ ಅಧ್ಯಕ್ಷೆ ಬನ್ನೆಮ್ಮ ಹದರಿ, ಸದಸ್ಯ ಉಮೇಶ ದೇಗಿನಾಳ, ನಿರ್ಮಲಾ ಹಂಜಗಿ, ಚಂದ್ರಶೇಖರ ಮಣೂರ, ರೇವಣಸಿದ್ದಕಕ್ಕೇರಿ, ವಿಶ್ವನಾಥ ಕಾಖಂಡಕಿ ಇವರನ್ನು ಸನ್ಮಾನಿಸಲಾಯಿತು.
ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ, ಪ್ರಿಯಾ ಪೈ, ಪ್ರಭಾಕರ ಬೀರಯ್ಯ, ಪುಟಪರ್ತಿಯ ಶ್ರೀಧರ, ವಿ.ಪಿ.ನಂದ್ಯಾಳ, ರವೀಂದ್ರ ನಿಗಡಿ, ವಿ.ಎಂ.ಸಾಲಿಮಠ,ವಿಶ್ವನಾಥ ಲಬ್ಬಾ, ವಿಜಯಲಕ್ಷ್ಮೀ ದೇಸಾಯಿ, ಗಂಗುಬಾಯಿ ಗಲಗಲಿ, ಸಂಜೀವ ಕುಲಕರ್ಣಿ, ಶಾಂತಗೌಡ ಚನಗೊಂಡ ಬಿರಾದಾರ, ಶರಣು ಮನಗೂಳಿ, ಭೀಮರಾಯ ಜಾಲಗೇರಿ ಮತ್ತಿತರಿದ್ದರು.