ಬಡವರ ಬಂಧು ಯೋಜನೆ ಅಡಿ ಬೀದಿಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಗುರುತಿನ ಚೀಟಿ ವಿತರಣೆ
ಲೋಕದರ್ಶನ ವರದಿ
ಬಳ್ಳಾರಿ 31:ನಗರದ ಬೀದಿಬದಿ ವ್ಯಾಪಾರಿಗಳಿಗೆ ಇಲ್ಲಿನ ಮಹಾನಗರ ಪಾಲಿಕೆಯಿಂದ ಮೊದಲ ಬಾರಿಗೆ ಸ್ಥಳದಲ್ಲೇ ಗುರುತಿನ ಚೀಟಿ ವಿತರಿಸುವ ಮತ್ತು ವ್ಯಾಪಾರ ವೈವಾಟಿಗಾಗಿ ಮುಖ್ಯಮಂತ್ರಿಗಳ ಬಡವರ ಬಂದು ಯೋಜನೆ ಅಡಿ ಆಥರ್ಿಕ ನೆರವು ನೀಡುವ ಕಾರ್ಯಕ್ಕೆ ಭಾನುವಾರ ದೊಡ್ಡ ಮಾರುಕಟ್ಟೆಯ ಬಳಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಮೇಯರ್ ಸುಶೀಲಾಬಾಯಿ, ಉಪಮೇಯರ್ ದಿವ್ಯಕುಮಾರಿ ಚಾಲನೆ ನೀಡಿದರು. ಮಹಾನಗರ ಪಾಲಿಕೆಯ ಆಯುಕ್ತ ಮಹಮ್ಮದ ಮುನೀರ್ ಸೇರಿದಂತೆ ಹಲವಾರು ಅಧಿಕಾರಿಗಳು ಸ್ಥಳದಲ್ಲೆ ಇದ್ದು ಸೂಕ್ತ ದಾಖಲೆಗಳನ್ನು ನೀಡಿದ 60ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿಗೆ ಮದ್ಯಾಹ್ನದ ವೇಳೆಗೆ ಗುರುತಿನ ಚೀಟಿ ನೀಡಿತು. 120ಕ್ಕೂ ಹೆಚ್ಚು ಜನ ಅಜರ್ಿ ಸಲ್ಲಿಸಿದ್ದು ಪರಿಶೀಲನೆ ಕಾರ್ಯ ಮುಂದುವರೆದಿದೆ.
ಈ ಗುರುತಿನ ಕಾರ್ಡ ಪಡೆದವರಿಗೆ ಬಡವರ ಬಂದು ಯೋಜನೆ ಅಡಿ 2ರಿಂದ 10 ಸಾವಿರದವರೆಗೆ ಬಡ್ಡಿ ರಹಿತ ಸಾಲವನ್ನು ನಗರದ ಅರ್ಬನ್ಬ್ಯಾಂಕ್ನಲ್ಲಿ ಪಡೆದು ದಿನನಿತ್ಯ ಫಿಗ್ಮಿ ಕಟ್ಟಿ 3 ತಿಂಗಳಲ್ಲಿ ಪಾವತಿ ಮಾಡಬೇಕಿದೆ. ಈ ಕಾರ್ಯಕ್ರಮ ಮಾರುಕಟ್ಟೆಯಲ್ಲಿ ಭಾನುವಾರ ಚಾಲನೆಗೆ ಬಂದಿತು.