ವಿದ್ಯಾರ್ಥಿಗಳ ಬಾಳ ಬುನಾದಿಗೆ ಐಟಿಐ ಸಂಜೀವಿನಿ: ಭಾರತಿ ಮದಭಾವಿ
ಲೋಕದರ್ಶನ ವರದಿ
ಗೋಕಾಕ 21: ವಿದ್ಯಾರ್ಥಿಗಳು ಆಟ ಪಾಠಗಳ ಜೊತೆಗೆ ಕನ್ನಡ ನಾಡು, ಭಾಷೆ, ಸಂಸ್ಕೃತಿ ಸಂರಕ್ಷಿಸುವಂತೆ ಮತ್ತು ಬಸವಜ್ಯೋತಿ ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಮೂಲಭೂತ ಸೌಕರ್ಯ ಹಾಗೂ ತರಬೇತಿಗೆ ಬೇಕಾಗುವ ಎಲ್ಲ ಪರಿಕರಗಳನ್ನು ಸಂಸ್ಥೆಯು ಹೊಂದಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದು ಸುಂದರ ಭವಿಷ್ಯ ರೂಪಿಸಿಕೊಳ್ಳುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾರತಿ ಮದಭಾವಿ ಕರೆ ನೀಡಿದರು.
ಸತ್ಯವೇದ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ದ ಬಸವಜ್ಯೋತಿ ಐಟಿಐ ಕಾಲೇಜ್ ಗೋಕಾಕದ 2023-24 ನೇ ಸಾಲಿನ ಪ್ರಥಮ
ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಉಪನ್ಯಾಸಕಾರರಾಗಿ ಆಘಮಿಸಿದ್ದ ಗೋಕಾಕ ಸರ್ಕಾರಿ ಪದವ ಪೂರ್ವ ಮಹಾವಿದ್ಯಾಲಯ ಸಹ ಶಿಕ್ಷಕ ರಮೇಶ ಎಲ್. ಮಿರ್ಜಿ
ಅವರು ವಿದ್ಯಾರ್ಥಿಗಳ ಜೀವನ ಸಂಘರ್ಷಮಯವಿದ್ದು ಕಠಿಣ ಪರಿಶ್ರಮ, ಏಕಾಗ್ರತೆ, ವಿನಯವಂತಿಕೆ, ಸದುದ್ದೇಶದ ಗುರಿ ಅಳವಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಗೋಕಾಕ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಶೋಕ. ಶಿ. ಪಾಟೀಲ ಪರರಿಗೆ ಉಪಕಾರ ಮಾಡುವ
ಉದ್ದೇಶಕ್ಕಾಗಿಯೇ ಈ ಶರೀರವಿದ್ದು ಸಮಾಜ ಸೇವಾ ಮನೋಭಾವನೆ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಗೋಕಾಕ ಅಬುಲ್ ಕಲಾಂ ಪದವಿ ಪೂರ್ವ ಮಹಾವಿದ್ಯಾಲಯ ಉಪನ್ಯಾಸಕ ಎಸ್. ಎಂ. ಪೀರಜಾದೆ ಅವರು ಸಂಸ್ಥೆಯ ಕುರಿತು ವರದಿ
ವಾಚನ ಮಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯ ಗೋಕಾಕ ಇದರ
ಪ್ರಾಚಾರ್ಯ ಜಯಾನಂದ ಮಾದರ ಅವರು ಸಂಸ್ಥೆಯೊಂದಿಗೆ ತಾವು ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಸ್ಮರಿಸುತ್ತಾ
ಕಷ್ಟ, ನೋವು, ಅನುಭವಿಸುತ್ತಲೆ ಸುಂದರ ಭವಿಷ್ಯ ನೀವೇ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಶೋಕ ಲಗಮಪ್ಪಗೋಳ ಅವರು ಎರಡು ವರ್ಷದ
ಅವಧಿಯಲ್ಲಿ ಕೌಶಲ್ಯ ತರಬೇತಿ ಪಡೆದು ತಂದೆ ತಾಯಿ, ಸಮಾಜಕ್ಕೆ ಕೀರ್ತಿ ತಂದು ಮತ್ತು ದೇಶವನ್ನು ಸಶಕ್ತಗೊಳಿಸಬೇಕು ಈ ನಿಟ್ಟಿನಲ್ಲಿ
ವಿದ್ಯಾರ್ಥಿಗಳು ಪ್ರಯತ್ನ ಶೀಲರಾಗುವಂತೆ ಕರೆನೀಡಿದರು.
2023-24 ನೇ ಸಾಲಿಗೆ ಗೋಕಾಕ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅಶೋಕ ಶಿ. ಪಾಟೀಲ ಕಾರ್ಯದರ್ಶಿಗಳಾಗಿ ಎಚ್. ಬಿ. ಪಾಟೀಲ ಖಜಾಂಚಿಗಳಾದಗಿ ಎಸ್. ಜಿ.ದೊಡಮನಿ ಹಾಗೂ ಹಿರಿಯರಾದ ಅಣ್ಣವ್ವ ಪುಂಡಲೀಕ ಶರಣರ ಅವರನ್ನು ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸತ್ಕರಿಸಲಾಯಿತು.
ಖುಷಿ ಶಿಂಗಳಾಪೂರ ಪ್ರಾರ್ಥನೆ, ಉಪನ್ಯಾಸಕ ಸಾಗರ ಪರಿಚಯ, ಉಪನ್ಯಾಸಕ ವಿನೋದ ದಾಸರ ಕಾರ್ಯಕ್ರಮ ನಿರೂಪನೆ ಅಶ್ವಿನಿ ಜೋಗೊಜಿ ವಂದನಾರ್ಪಣೆ ಮಾಡಿದರು. ಕಾರ್ಯದರ್ಶಿ ಕೆಂಪಣ್ಣ ಶಿಂಗಳಾಪೂರ, ಐಟಿಐ ಕಾಲೇಜಿನ ಪ್ರಾಚಾರ್ಯ ಎಲ್. ಎಸ್. ಜಾಧವ, ರತ್ನಮ್ಮ ಲಗಮಪ್ಪಗೋಳ ಪ. ಪೂ ಕಾಲೇಜಿನ ಪ್ರಾಚಾರ್ಯ ಪರ್ವಿನ್ ತಿಗಡಿ, ಮಾಲಾ ಅಶೋಕ ಲಗಮಪ್ಪಗೋಳ, ಪರಶುರಾಮ ಗೊಲ್ಲರ ಮತ್ತು ಶಿಕ್ಷಕರು ಉಪಸ್ಥಿತರಿದ್ದರು