ಅಥಣಿ

ಜಂಬಗಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ರವಿ ವಾಘಮಾರೆ

ಜಂಬಗಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ರವಿ ವಾಘಮಾರೆ

ಅಥಣಿ 26: ಜಂಬಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಜಂಬಗಿ, ಹಣಮಾಪುರ, ಶಿವನೂರ, ಕಲೋತಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ ಎಂದು ಜಂಬಗಿ ಗ್ರಾಮ ಪಂಚಾಯತನ ನೂತನ ಅಧ್ಯಕ್ಷ ರವಿ ವಾಘಮಾರೆ ಹೇಳಿದರು. ಅವರು ಚುನಾವಣೆಯಲ್ಲಿ ಅವಿರೋಧ ಆಯ್ಕೆಯ ನಂತರ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.   

ನನ್ನ ಅಧ್ಯಕ್ಷ ಅವಧಿಯಲ್ಲಿ ಜಂಬಗಿ ಸೇರಿದಂತೆ ಎಲ್ಲ ಗ್ರಾಮಗಳಲ್ಲಿಯೂ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವೆ ಮತ್ತು ಕಳೆದ ಅವಧಿಯಲ್ಲಿಯೂ ಸಹ ನಾನು ಉಪಾಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೆ. ಗ್ರಾಮ ಪಂಚಾಯತನ ಎಲ್ಲ 23 ಸದಸ್ಯರು ನನಗೆ ಬೆಂಬಲ ನೀಡಿದ್ದರಿಂದಲೇ ನಾನು ಅವಿರೋಧವಾಗಿ ಆಯ್ಕೆಯಾಗಿರುವೆ ಎಂದರು. ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರನ್ನು ಅಭಿನಂದಿಸಿದರು.     ಗ್ರಾಮದ ಯುವ ಮುಖಂಡ ಹಾಗೂ ಗ್ರಾಮ ಪಂಚಾಯತ ಸದಸ್ಯ ಯಶವಂತ ಪಾಟೀಲ ಮಾತನಾಡಿ, ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಇವರ ಮಾರ್ಗದರ್ಶನದಲ್ಲಿ ಜಂಬಗಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯ ಸ್ಥಾನಕ್ಕೆ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದ ಅವರು ಪಂಚಾಯತನ ಎಲ್ಲ 24 ಸದಸ್ಯರು ಒಟ್ಟಾಗಿ ಜಂಬಗಿ, ಶಿವನೂರ, ಕಲೋತಿ, ಹಣಮಾಪುರ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.  

ಶ್ರೀದೇವಿ ಸಿದ್ದಪ್ಪಾ ಗುಗ್ಗರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿ ದೀಪಕ್ ಕಾಂಬಳೆ, ಸಹಾಯಕರಾಗಿ ಪಿಡಿಓ ಎಸ್‌.ಎಮ್‌.ರಾಠೋಡ ಕಾರ್ಯನಿರ್ವಹಿಸಿದರು. ಒಟ್ಟು 24 ಬಲದ ಸದಸ್ಯರಲ್ಲಿ 23 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.   

ಧುರೀಣರಾದ ರಾಮನಗೌಡ ಪಾಟೀಲ, ಯಶವಂತ ಪಾಟೀಲ, ಮುರಿಗೆಪ್ಪ ಪಾಟೀಲ, ರಾಜೇಂದ್ರ ಪಾಟೀಲ, ಬಸವರಾಜ ಮಾಳಿ, ಮಲ್ಲಿಕಾರ್ಜುನ ಪೂಜಾರಿ, ಗೋಪಾಲ ಕೊಳೆಕರ, ಪ್ರಕಾಶ ಜಾಧವ, ಸುಖದೇವ ಸೊಂದಕರ, ರವಿಕಾಂತ ಪಾಟೀಲ, ಅರ್ಜುನ ನಾಯಿಕ,  ವಿಜಯ ಅಡಹಳ್ಳಿ ಅರುಣ ಜಾಧವ, ಮುರಘೇಶ ಪಾಟೀಲ ಉಪಸ್ಥಿತರಿದ್ದರು. 


ಸುದ್ದಿ ಓದಿ