ಸರ್ವಸಮಾಜಗಳನ್ನು ಸಮಾನವಾಗಿ ಕಾಣುತ್ತೇನೆ: ಶಾಸಕ ಸೋಮನಗೌಡ
ತಾಳಿಕೋಟಿ28: ಸಾಮಾಜಿಕ ನ್ಯಾಯದ ಅಡಿಯಲ್ಲಿ ನನ್ನ ಕ್ಷೇತ್ರದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಬದ್ಧನಾಗಿರುವೆ. ಅವರ ಮಧ್ಯೆ ಯಾವುದೇ ರೀತಿಯ ತಾರತಮ್ಮ್ಯ ಮಾಡುವುದಿಲ್ಲ ಎಂದುದೇ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದರು.
ಇತ್ತೀಚಿಗೆ ಮತಕ್ಷೇತ್ರದ ವಣಕಿಹಾಳ ಹಾಗೂ ನೀರಲಗಿ ಗ್ರಾಮದಲ್ಲಿ ತಮ್ಮ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ರೂ.8 ಲಕ್ಷ ಮೊತ್ತದ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನನ್ನ ಮತಕ್ಷೇತ್ರದವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವಗುರಿ ನನ್ನದಾಗಿದೆ ಇದಕ್ಕಾಗಿ ಹಗಲಿರುಳು ಪ್ರಯತ್ನಿಸುತ್ತಿದ್ದೇನೆ.
ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಬೇಕಾದರೆ ಕ್ಷೇತ್ರದಲ್ಲಿರುವ ಎಲ್ಲ ಸಮುದಾಯಗಳ ಅಭಿವೃದ್ಧಿ ಆಗಬೇಕು ಇದಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ ಅಭಿವೃದ್ಧಿ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಅಂಥವರ ಮಾತುಗಳಿಗೆ ಜನರು ಕಿವಿಗೊಡಬಾರದು ನಿಮ್ಮ ಸೇವೆಗೆ ನಾನು ಸದಾ ಸಿದ್ಧನಾಗಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಾಹೇಬಗೌಡ ಪಾಟೀಲ(ಸಾಸನೂರ), ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಸಿದ್ದು ಬುಳ್ಳಾ, ಪ.ಪಂ. ಸದಸ್ಯರಮೇಶ ಮಸಿಬನಾಳ, ರಾಮನಗೌಡ ನಾವದಗಿ, ಪ್ರಕಾಶ ಯರನಾಳ, ಅಪ್ಪುದೇಸಾಯಿ ಇದ್ದರು.