ರಾಣೆಬೆನ್ನೂರ

ಶಿಕ್ಷಕರ ಪ್ರೀತಿ, ವಿಶ್ವಾಸ ಅಭಿಮಾನದಿಂದ ರಾಜಕೀಯ ಗಟ್ಟಿತನ ಕಂಡಿದ್ದೇನೆ: ಬಸವರಾಜ ಹೊರಟ್ಟಿ

ಶಿಕ್ಷಕರ ಪ್ರೀತಿ, ವಿಶ್ವಾಸ ಅಭಿಮಾನದಿಂದ ರಾಜಕೀಯ ಗಟ್ಟಿತನ ಕಂಡಿದ್ದೇನೆ: ಬಸವರಾಜ ಹೊರಟ್ಟಿ

ಲೋಕದರ್ಶನ ವರದಿ 

ರಾಣೇಬೆನ್ನೂರು 03: ರಾಜಕೀಯ ಜೀವನ ಭದ್ರತೆಗೆ ಈ ನಾಡಿನ ಮತ್ತು ಉತ್ತರ ಕರ್ನಾಟಕ ಭಾಗದ ಶಿಕ್ಷಕರ ನಿರಂತರ ಅಭಿಮಾನದ ಪರಿಣಾಮ ತಾವು ರಾಜಕೀಯವಾಗಿ ಗಟ್ಟಿತನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿದೆ. ನಾನು ಏನೇ ಸಾಧನೆ ಮಾಡಿದ್ದರೂ ಅದೆಲ್ಲವೂ ಶಿಕ್ಷಕ ಸಮುದಾಯಕ್ಕೆ ಅರ​‍್ಿತವಾಗುತ್ತದೆ ಎಂದು ಕರ್ನಾಟಕ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಘೋಷಿಸಿದರು. 

ಅವರು ಶುಕ್ರವಾರ ಇಲ್ಲಿನ ರಾಜ-ರಾಜೇಶ್ವರಿ ಕಾಲೇಜು ಭವನದಲ್ಲಿ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕವು ಆಯೋಜಿಸಿದ್ದ ಶಿಕ್ಷಕರೊಂದಿಗೆ ಮನದಾಳದ ಮಾತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ರಾಜಕೀಯ ಬದಲಾವಣೆ ಅನಿವಾರ್ಯವಾಗಿ ಹಿರಿಯರ ಆಸೆ ಮತ್ತು ಶಿಕ್ಷಕ ಸಮುದಾಯದ ಒಮ್ಮತದ ಅಭಿಪ್ರಾಯದಿಂದಾಗಿ ಬಿಜೆಪಿ ಪಕ್ಷಕ್ಕೆ ಸೇರೆ​‍್ಡಯಾಗುವುದು ಅನಿವಾರ್ಯವಾಯಿತು. ಪಕ್ಷದಿಂದ ನಾನು ಸ್ಪರ್ಧಿಸಿದ್ದೇನೆ. ಶಿಕ್ಷಕ ಸಮುದಾಯ ಈಗಾಗಲೇ ಸ್ವಯಂ ಪ್ರಚಾರ ಕೈಗೊಂಡು ನನ್ನ ಗೆಲುವಿಗೆ ಸತತ ಶ್ರಮಿಸುತ್ತಿದ್ದಾರೆ. ಈ ಬಾರಿ ಶೇ.40ರಷ್ಟು ಹೆಚ್ಚಳ ಮತಗಳೊಂದಿಗೆ ಗೆಲುವು ಸಾಧಿಸುವ ವಿಶ್ವಾಸ ತಮ್ಮದಾಗಿದೆ ಎಂದರು. 

2008ರಲ್ಲಿ ಬಿಜೆಪಿ ಪಕ್ಷ ಸೇರಲು ಆಹ್ವಾನ ನೀಡಿದ್ದರು. ತಾವು ಸ್ನೇಹ ಬೇರೆ, ರಾಜಕೀಯ ಬೇರೆ ಎನ್ನುವ ತತ್ವ ಸಿದ್ದಾಂತದಲ್ಲಿ ಸಾಧನೆ ಮಾಡಿದ್ದೇನೆ. ಹೀಗಾಗಿ ಅಂದು ಪಕ್ಷಕ್ಕೆ ಸೇರೆ​‍್ಡಯಾಗಲು ಸಾಧ್ಯವಾಗಲಿಲ್ಲ. 16 ಮುಖ್ಯಮಂತ್ರಿಗಳನ್ನು ಇದುವರೆಗೆ ಕಂಡಿದ್ದೇನೆ. ಯಾರಲ್ಲಿಯೂ ಪ್ರೀತಿ ವಿಶ್ವಾಸ ಕಳೆದುಕೊಂಡಿಲ್ಲ. ಸ್ನೇಹದಿಂದಲೇ ಶಿಕ್ಷಕ ಸಮುದಾಯಕ್ಕೆ ಆಗಬೇಕಾದಂತಹ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಹೊರಟಿದ್ದೇನೆ ಹೊರತು ಯಾವುದೇ ಜಾತಿ ಮತ ಪಂಥ ಪಕ್ಷ ಪಂಗಡ ಭೇದ ಮಾಡಿಲ್ಲ ಎಂದು ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ಸ್ಮರಿಸಿಸಿದ ಬಸವರಾಜ ಹೊರಟ್ಟಿ ಅವರು ಈ ಬಾರಿಯೂ ಗೆಲುವು ಸಾಧಿಸಿದರೆ ವಿಶ್ವದಲ್ಲಿಯೇ ಐತಿಹಾಸಿಕ ದಾಖಲೆಯಾಗುತ್ತದೆ ಎಂದರು. 

ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರೂ ಸಹ ಚುನಾವಣೆಗೆ ನಿಲ್ಲಬಹುದು. ಅದಕ್ಕೆ ಸರ್ಕಾರ ನಮಗೆ ಸಂಬಂಧಪಡುವುದಿಲ್ಲ. ಕೇವಲ ಆಡಳಿತ ಮಂಡಳಿ ಮಾತ್ರ ನಮಗೆ ಸಂಬಂಧವಾಗುತ್ತದೆ. ಇದಕ್ಕಾಗಿ ಹೈಕೋರ್ಟ್‌ ಮೆಟ್ಟಿಲೇರಿ ತಾವು ಗೆಲುವಿನ ತೀರ​‍್ಪನನು ಪಡೆದಿದ್ದೇವೆ. ಹೀಗಾಗಿ ಯಾವ ಶಿಕ್ಷಕರೂ ಭಯಪಡುವ ಅವಶ್ಯಕತೆಯಿಲ್ಲ. ಕಾನೂನು ಗೊತ್ತಿಲ್ಲದವರು ಅಧಿಕಾರದಲ್ಲಿದ್ದರೆ ಏನಾದರೂ ಆದೇಶ ಹೊರಡಿಸುತ್ತಾರೆ. ಅದಕ್ಕೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಸಾಮಾಜಿಕ ನ್ಯಾಯದ ಹಕ್ಕನ್ನು ಪಡೆಯಬೇಕಾಗುತ್ತದೆ ಎಂದು ಯುವ ಶಿಕ್ಷಕ ಸಮುದಾಯಕ್ಕೆ ಹೊರಟ್ಟಿ ಅವರು ಕರೆ ನೀಡಿದರು. 

ಶಿಕ್ಷಕರು ತಮ್ಮ ಮತಗಳನ್ನು ಪ್ರಜ್ಞಾವಂತಿಕೆಯಿಂದ ಚಲಾಯಿಸಬೇಕು. ಕುಲಗೆಟ್ಟ ಮತಗಳಾದರೆ ಸಮಾಜದಲ್ಲಿ ಶಿಕ್ಷಕರ ಬಗ್ಗೆ ಅವಮಾನವಾದಂತೆ. ಹೀಗಾಗಿ ಜೂನ್ 13ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಹೆಸರಿನ ಮುಂದೆ 1 ಅಂಕಿ ಬರೆದು ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕು. ಇತಿಹಾಸದಲ್ಲಿ ತಾವು ಅನುಸರಿಸಿದ ಚುನಾವಣೆಯಲ್ಲಿ ಯಾರಿಗೂ ಯಾವುದೇ ರೀತಿಯ ನಿರಾಸೆ ಮಾಡಿಲ್ಲ. ಬಂದವರಿಗೆ ಅವರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನ್ಯಾಯ ದೊರಕಿಸುವ ಪ್ರಾಮಾಣಿಕ ಕರ್ತವ್ಯವನ್ನು ಮಾಡಿದ್ದೇನೆ. ಹೀಗಾಗಿಯೇ 7 ಬಾರಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದ ಹೊರಟ್ಟಿಯವರು, ಇನ್ನುಳಿದ ಎಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ತಾವು ಮುಂದಾಗುವುದಾಗಿ ಭರವಸೆ ನೀಡಿದರು. 

ಶಾಸಕ ಅರುಣಕುಮಾರ ಪೂಜಾರ, ಧರ್ಮಪತ್ನಿ ಮಂಗಳಗೌರಿ ಅ. ಪೂಜಾರ, ಸ್ಥಾನಿಕ ಆಡಳಿತ ಮಂಡಳಿಯ ಉಪಾಧ್ಯಕ್ಷ ವ್ಹಿ.ಪಿ.ಲಿಂಗನಗೌಡ್ರ, ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಹೆಚ್‌.ಪಿ.ಬಣಕಾರ ಮತ್ತಿತರರು ಮಾತನಾಡಿದರು. 

ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಎನ್‌.ಡಬ್ಲ್ಯುಕೆ.ಆರ್‌.ಟಿ.ಸಿ. ಉಪಾಧ್ಯಕ್ಷ ಡಾ: ಬಸವರಾಜ ಕೇಲಗಾರ, ಕರ್ನಾಟಕ ಅರಣ್ಯ ನಿಗಮದ ನಿರ್ದೇಶಕಿ ಭಾರತಿ ಜಂಬಿಗಿ, ಬಿಜೆಪಿ ನಗರ ಕಾರ್ಯದರ್ಶಿ ದೀಪಕ್ ಹರಪನಹಳ್ಳಿ ಸೇರಿಂದತೆ ಮತ್ತಿತರ ಗಣ್ಯರು, ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಅನ್ನಪೂರ್ಣ ಪ್ರಾರ್ಥಿಸಿದರು. ಡಾ:ಮಾಲತೇಶ ಛಲವಾದಿ ಸ್ವಾಗತಿಸಿದರು. ಶಿಕ್ಷಕ ಜಿ.ಕೆ.ಹಿತ್ತಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನೋರ್ವ ಶಿಕ್ಷಕ ರಮೇಶ ಬಡಕರಿಯಪ್ಪನವರ ವಂದಿಸಿದರು. 


ಸುದ್ದಿ ಓದಿ