ತಾಳಿಕೋಟಿ

ನಿಮ್ಮ ಜೀತದಾಳು ಚನ್ನಾಗಿ ದುಡಿಸಿಕೊಳ್ಳಿ: ಶಾಸಕ ಸೋಮನಗೌಡ

ನಿಮ್ಮ ಜೀತದಾಳು ಚನ್ನಾಗಿ ದುಡಿಸಿಕೊಳ್ಳಿ: ಶಾಸಕ ಸೋಮನಗೌಡ

ತಾಳಿಕೋಟಿ/ಕಲಕೇರಿ 11: ಐದು ವರ್ಷಗಳಿಗಾಗಿ ತಾವು ನನಗೆ ಜೀತಕ್ಕೆ ತೆಗೆದುಕೊಂಡಿದ್ದೀರಿ, ನಿಮ್ಮ ಕೆಲಸವನ್ನು ಮಾಡುವುದು ನನ್ನ ಕರ್ತವ್ಯವಾಗಿದೆ ನಾನು ಜೀತದಾಳು ಸಾಧ್ಯವಿದ್ದಷ್ಟು ಕೆಲಸ ತಗೆದುಕೊಳ್ಳಿ ಎಂದು ದೇ.ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು. 

ಮತಕ್ಷೇತ್ರದ ವಂದಾಲ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಸಿಂದಗಿ ಹಾಗೂ ಜಿ.ಪಂ ವಿಜಯಪೂರ ಇವರು ಹಮ್ಮಿಕೊಂಡ ವಿವಿಧ ಕಾಮಗಾರಿಗಳ ಭೂಮಿ ಪೂಜಾ ಸಮಾರಂಭದಲ್ಲಿ ಮಾತನಾಡಿದರು. 

ಕ್ಷೇತ್ರದ 120 ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಶಿಕ್ಷಣ ಹಾಗೂ ಆರೋಗ್ಯವನ್ನು ನೀಡಲು ಅನುದಾನವನ್ನು ಹಾಕಿದ್ದೇನೆ. ಇಂದು ನಿಮ್ಮ ಗ್ರಾಮಕ್ಕೆ ಅಗತ್ಯವಾಗಿರುವ ಡಂಬಳ-ಕಲಕೇರಿ ರಸ್ತೆ ಸಿ.ಸಿ.ರಸ್ತೆಗಳು, ಚರಂಡಿ, ಶಾಲಾ ಕೊಠಡಿ ಹಾಗೂ ಸಮುದಾಯಭವನಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ. 

ಇಲ್ಲಿಯವರೆಗೂ ಸುಮಾರು 2ಸಾವಿರ ಕೋಟಿ ಅನಿದಾನ ತಂದಿದ್ದೇನೆ ಕ್ಷೇತ್ರದಾದ್ಯಂತ ಕಾಮಗಾರಿಗಳು ನಡೆಯುತ್ತೀವೆ. ಸುಮಾರು 30 ಕೆರೆಗಳನ್ನು ತುಂಬಿಸಲಾಗುತ್ತಿದೆ ಬೃಹತ್ ನೀರಾವರಿಯೋಜನೆ ಕಾಮಗಾರಿ ಪ್ರಹತಿಯಲ್ಲಿದೆ ವುಳಿದ ಅವಧಿಯಲ್ಲಿ ಇನ್ನೂ ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದ ಮತ್ತೇ ನನಗೆ ಬೇಕು ಎಂದರು. 

ಬಿಜೆಪಿ ಜಿಲ್ಲಾ ಕಾರ್ಯದರ್ಶೀ ಸಿದ್ದು ಬುಳ್ಳಾ, ಪ.ಪಂ. ಸದಸ್ಯ ರಮೇಶ ಮಸಬಿನಾಳ, ಸಂತೋಷಗೌಡ ಪಾಟೀಲ ಮಾತನಾಡಿದರು. 

ಪ.ಪೂ.ಶ್ರೀ ಮಾಳಿಂಗರಾಯ ಮಹಾರಾಜರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ವೇ.ಮೂ.ಶ್ರೀ ಲಿಂಗಯ್ಯಮುತ್ಯಾ ಸಮ್ಮುಖವಹಿಸಿದ್ದರು. 

ವೇದಿಕೆಯಲ್ಲಿ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಅಸ್ಕಿ, ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ,(ಅಸ್ಕಿ) ಜಿ.ಪಂ. ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ವಿಜುಗೌಡ ಬಿರಾದಾರ(ಕರವಿನಾಳ), ರಾಯಪ್ಪಗೌಡ ನೀರಲಗಿ, ಪ್ರಕಾಶ ಯರನಾಳ, ಶಾಂತಗೌಡ ಯಾಳವಾರ, ಗುರಣ್ಣ ಚೌಧರಿ, ಗುತ್ತಿಗೆದಾರ ಎಂ. ಬಿ. ಬಿಳಗಿ. ಎಇಇ ತಾರಾನಾಥ ರಾಠೋಡ, ಎಇ ಎ.ಎಚ್‌. ತುಂಬಗಿ, ಅಭಿಯಂತರ ಪ್ರಫುಲ್ಲಕುಮಾರ ಅಬ್ದುಲ್ರಹೆಮಾನ ಅದೋನಿ, ರಾಜು ಚವ್ಹಾಣ ಇದ್ದರು. 


ಸುದ್ದಿ ಓದಿ