ಚಿಕ್ಕೋಡಿ

ನಾನೊಬ್ಬ ಅಪ್ಪಟ್ಟ ಹಿಂದೂ ಸಿದ್ದರಾಮಯ್ಯ

ನಾನೊಬ್ಬ ಅಪ್ಪಟ್ಟ ಹಿಂದೂ ಸಿದ್ದರಾಮಯ್ಯ

ಚಿಕ್ಕೋಡಿ 12: ನಾನೊಬ್ಬ ಅಪ್ಪಟ್ಟ ಹಿಂದೂ, ಆದರೆ ಧರ್ಮದ ಹೆಸರಿನಲ್ಲಿ ಹಿಂದೂತ್ವ ಮಾಡುವವರ ವಿರುದ್ಧ ವಿರೋಧ ಇದೆ. ನಾನೊಬ್ಬ ಸಂವಿಧಾನ ಬದ್ದವಾಗಿ ಎಲ್ಲ ಧರ್ಮ, ಎಲ್ಲ ಸಮುದಾಯವನ್ನು ಸಮಾನವಾಗಿ ನೋಡುತ್ತೇನೆ. ಆದರೆ, ಬಿಜೆಪಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊಂಚ ಹಾಕುತ್ತಿರುವುದನ್ನು ರಾಜ್ಯದ ಜನ ಸಹಿಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು. 

ಇಲ್ಲಿನ ಆರ್‌.ಡಿ.ಕಾಲೇಜಿನ ಮೈಧಾನದಲ್ಲಿ ಆಯೋಜಿಸಿದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ ವಿರೋಧಿ ಅಡಳಿತ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆ ಆರಂಭಿಸಿದೆ. ಇದು ದಿ.11 ರಿಂದ 28 ರವರೆಗೆ ಜಿಲ್ಲಾ ಕೇಂದ್ರಗಳಿಗೆ ಈ ಯಾತ್ರೆ ನಡೆಯುತ್ತದೆ. ಒಂದು ದಿನಕ್ಕೆ ಎರಡು ಜಿಲ್ಲೆಗೆ ಯಾತ್ರೆ ನಡೆಯುತ್ತದೆ ಎಂದರು. 

ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಪಕ್ಷ. ಜನರಿಗೆ ಸುಳ್ಳು ಹೇಳೋದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬಡವರು. ದಲಿತರು. ರೈತರು.ಮಹಿಳೆಯರು ಪರವಾಗಿ ಕಾರ್ಯಕ್ರಮ ನೀಡಿದೆ. ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಲಾಗಿದೆ. 2013ರಲ್ಲಿ ನಾಣು ಮುಖ್ಯಮಂತ್ರಿ ಅಗಿದ್ದ ವೇಳೆಯಲ್ಲಿ 165 ಭರವಸೆ ಪ್ರಣಾಳಿಕೆ 158 ಭರವಸೆ ಈಡೇರಿಸಲಾಗಿದೆ. 30ಕ್ಕು ಹೆಚ್ಚು ಹೊಸ ಕಾರ್ಯಕ್ರಮ ಜಾರಿ ಮಾಡಲಾಗಿತ್ತು. 50 ಸಾವಿರ ರೂವರೆಗೆ ರೈತರ ಸಾಲ ಮನ್ನಾ ಮಾಡಲಾಗಿತ್ತು. ಇಂದಿರಾ ಕ್ಯಾಂಟಿನ ಆರಂಭ ಮಾಡಲಾಗಿತ್ತು. ಕ್ಷೀರ ಭಾಗ್ಯ, ಅನ್ನಭಾಗ್ಯ, ಪಶು ಭಾಗ್ಯ ನೀಡಿ ಬಡವರಿಗೆ, ರೈತರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲ ಯೋಜನೆಗಳನ್ನು ರದ್ದು ಪಡಿಸಿ ಧ್ವೇಷದ ರಾಜಕಾರಣ ಮಾಡುತ್ತಿದೆ ಎಂದರು. 

ಬಿಜೆಪಿ ಕೋಟ್ಯಾಂತರ ರೂ ಖರ್ಚು ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಜನರ ಆಶಿರ್ವಾದ ಬಿಜೆಪಿಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರ ಹಿತ ಮರೆತುಬಿಟ್ಟಿದ್ದಾರೆ. ಭ್ರಷ್ಟಾಚಾರ ಸಾಗರದಲ್ಲಿ ಮುಳುಗಿದ್ದಾರೆ. 2018 ರಲ್ಲಿ 600 ಭರವಸೆ ಕೊಟ್ಟಿದ್ದಾರೆ. ಇಲ್ಲಿಯವರಿಗೆ ಶೇ 10 ರಷ್ಟು ಭರವಸೆ ನೀಡಿಲ್ಲ. ಕೇಂದ್ರದಲ್ಲಿ ಮನಮೋಹನಸಿಂಗ ಪ್ರಧಾನಿಯಾದ ಸಂದರ್ಭದಲ್ಲಿ 78 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದರು. ಈಗ ನರೇಂದ್ರ ಮೋದಿ ನಯಾ ಪೈಸೆ ಸಾಲ ಮನ್ನಾ ಮಾಡಿಲ್ಲ ಎಂದರು. 

ಬಿಜೆಪಿ ಸುಳ್ಳಿನ ಪ್ಯಾಕಟ್ರಿ: ದೇಶದಲ್ಲಿ ರೈತರ ಆದಾಯ ಧ್ವಿಗುಣ, ಮಹಿಳೆಯರ ಸಬಲಿಕರಣ, ಯುವಕರಿಗೆ ಉದ್ಯೋಗ ನೀಡುತ್ತೇನೆಂದು ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುವ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಬರುತ್ತಿದ್ದಾರೆ. ಅವರಿಗೆ ಬರುವ ಯಾವ ಹಕ್ಕು ಇದೆ ಎಂದು ಪ್ರಶ್ನಿಸಿ ದೇಶದ ಯುವಕರಿಗೆ ಮಕ್ಬಲ ಟೋಪಿ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ. ಐತಿಹಾಸಿಕ ಪ್ರಜಾಧ್ವನಿ ಯಾತ್ರೆಗೆ ಅದ್ಸೂರಿಯಾಗಿ ಚಾಲನೆ ನೀಡಲಾಗಿದೆ. ದೇಶ ಕಟ್ಟುವಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಸ್ಯೆ ಹೆಚ್ಚಾಗಿದೆ. ಪೆಟ್ರೋಲ್‌. ಗ್ಯಾಸ್‌. ಅಡುಗೆ ಎಣ್ಣೆ. ರಸಗೊಬ್ಬರ ಬೆಲೆ ಹೆಚ್ಚಳವಾಗಿದೆ. ಬಿಜೆಪಿ ಸುಳ್ಳಿನ ಭರವಸೆಗೆ ಯುವಕರು ಬೀದಿಪಾಲಾಗಿದ್ದಾರೆ. ರೈತರ ಆದಾಯ ದ್ವಿಗುಣ ಆಗಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ 15 ಲಕ್ಷ ಮನೆ ಕಟ್ಟಲಾಗಿದೆ. ಬಿಜೆಜೆ ಒಂದೂ ಮನೆ ಕಟ್ಟಿಲ್ಲ. ಬಿಜೆಪಿ ವೈಪಲ್ಯ ಜನರಿಗೆ ತಿಳಿಸಲು ಪ್ರಜಾಧ್ವನಿ ಯಾತ್ರೆ ನಡೆಸಲಾಗಿದೆ ಎಂದರು. 

ಕೆಪಿಸಿಸಿ ಕಾರಾ​‍್ಯಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಬಿಜೆಪಿ ಸರಕಾರ ಕಿತ್ತು ಒಗೆಯಲು ಕಾಂಗ್ರೆಸ್ ಕಾರ್ಯಕರ್ತರು ಸನ್ನದ್ದರಾಗಬೇಕಿದೆ. ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗೆಲುವು ಸಿಗಲಿದೆ. ಅಭಿವೃದ್ಧಿ ಮಾಡದ ಬಿಜೆಪಿಗೆ ಎಲ್ಲ ಕಡೆ ಜನ ವಿರೋಧ ಮಾಡುತ್ತಿದೆ. ಸಿದ್ದರಾಮಯ್ಯ ಸರಕಾರದ ಯೋಜನೆ ಸ್ಥಗಿತಗೊಳಿಸುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ. ಬಿಜೆಪಿ ಸುಳ್ಳಿನ ಸರಮಾಲೆಗೆ ಜನ ಬೆಸತ್ತು ಹೋಗಿದ್ದಾರೆ.ಅಂದ ಭಕ್ತರು ಬುಲೆಟ್ ಟ್ರೇನ ಬಿಟ್ಟು ಈಗ ವಂದೇ ಮಾತರಂ ರೈಲಿನ ಹೆಸರು ಹೇಳುತ್ತಿದ್ದಾರೆ ಎಂದರು. 

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಮಾತನಾಡಿ, ಬಿಜೆಪಿ ದುರಾಡಳಿತ. ದೌರ್ಜನ್ಯ ವಿರುದ್ಧ ಈ ಯಾತ್ರೆ ಆರಂಭವಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟು ಹೋಗಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಶೇ 48 ಮಹಿಳೆಯರು ಕಾಣೆಯಾಗಿದ್ದಾರೆ. ಬಿಜೆಪಿ ಕ್ರಮ ವಹಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.  ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಕೊಡುಗೆ ಏನು ಇಲ್ಲ. ಧರ್ಮದ ಹೆಸರಿನಲ್ಲಿ ನಮಗೆ ಪಾಠ ಹೇಳುವ ಅವಶ್ಯಕತೆ ಇಲ್ಲ ಎಂದರು. 

================================= 

ಪ್ರಜಾಧ್ವನಿ ಯಾತ್ರೆಗೆ ಜನಸಾಗರ: ಬಿಜೆಪಿ ದುರ್ಬಲ ಆಡಳಿತ ವಿರೋಧಿಸಿ ಕಾಂಗ್ರೆಸ್ ಆರಂಭ ಮಾಡಿರುವ ಪ್ರಜಾಧ್ವನಿ ಯಾತ್ರೆಗೆ ಚಿಕ್ಕೋಡಿಯಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಪ್ರತಿ ಲೋಕಸಭೆ ಕ್ಷೇತ್ರದ ಜಿಲ್ಲಾ ಕೇಂದ್ರದಲ್ಲಿ ಮೊದಲ ಹಂತದಲ್ಲಿ ನಡೆಯುವ ಈ ಯಾತ್ರೆಗೆ ಚಿಕ್ಕೋಡಿ ಭಾಗದಲ್ಲಿ ಮೊದಲ ದಿನ ಜನಸಾಗರವೇ ಹರಿದು ಬಂದಿತ್ತು.  

==================== 

ಬಸ್ ಮೂಲಕ ವೇದಿಕೆಗೆ ಆಗಮಿಸಿದ ಗಣ್ಯರು: ಬೆಳಗಾವಿ ಮೂಲಕ ಚಿಕ್ಕೋಡಿಗೆ ವಿಶೇಷ ಬಸ್‌ದಲ್ಲಿ ಆಗಮೀಸಿದ ಕಾಂಗ್ರೆಸ್ ಮುಖಂಡರು ಜೈನಾಪೂರದಿಂದ ಚಿಕ್ಕೋಡಿಯವರಿಗೆ ಬೈಕ್ ರಾ​‍್ಯಲಿ ಮೂಲಕ ಸ್ವಾಗತಿಸಿದರು. ಬಸವ ವೃತ್ತದಿಂದ ಕುಂಬ ಮೇಳ, ವಾಧ್ಯದೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಶಿವುಕುಮಾರ ಮತ್ತು ಸಿದ್ದರಾಮಯ್ಯನವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಬಸ್ ಮೂಲಕ ವೇದಿಕೆ ಕಡೆ ಆಗಮೀಸುತ್ತಿದ್ದಂತೆ ಕಾರ್ಯಕರ್ತರು ಚಪ್ಪಾಳೆ, ಸೀಳ್ಳೆ ಜೋರಾದವು. ಇಬ್ಬರು ನಾಯಕರು ಜನರತ್ತ ಕೈ ಬಿಸಿ ವೇದಿಕೆ ಏರಿದರು. 


ಸುದ್ದಿ ಓದಿ