ಹೂವಿನಹಡಗಲಿ: ಮಲ್ಲಮ್ಮನ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಹಿರಿಶಾಂತವೀರ ಶ್ರೀ
ಲೋಕದರ್ಶನ ವರದಿ
ಹೂವಿನಹಡಗಲಿ 12: ತಾಲೂಕಿನ ಕೆಂಚಮನಹಳ್ಳಿ ಗ್ರಾಮದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಸೇವಾ ಟ್ರಸ್ಟ್ ಹಾಗೂ ನೌಕರರ ಟ್ರಸ್ಟ್ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮನವರ 592ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಉದ್ಘಾಟಿಸಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮನವರ ಆದರ್ಶ ಮೌಲ್ಯಗಳನ್ನು ಪ್ರತಿಯೊಂದು ಕುಟುಂಬದ ಮಾತೆಯರು ಬದುಕಿನಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿಮರ್ಿಸಲು ಸಾಧ್ಯ ಎಂದು ಹೇಳಿದರು. ಚಿಕ್ಕ ಗ್ರಾಮವಾಗಿದ್ದರೂ ಚಿಂತಕರ, ಅನುಭಾವಿಗಳ ಜಯಂತಿಯ ನೆಪದಲ್ಲಿ ಸಮಾಜೋದ್ದಾರದ ಕಾರ್ಯಕ್ರಗಳನ್ನು ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯ ಎಂದು ಪ್ರಶಂಸಿಸಿದರು.
ಉಪನ್ಯಾಸಕ ಶಂಕರ್ ಬೆಟಗೇರಿ ಉಪನ್ಯಾಸ ನೀಡಿದ ಅವರು, ಬದುಕಿನುದ್ದಕ್ಕೂ ನೋವುಗಳನ್ನು ಅನುಭವಿಸಿ ಮಲ್ಲಮ್ಮ ದಾನ ಧರ್ಮ, ಕ್ಷಮಾ ಗುಣಗಳ ಮೂಲಕ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ಶರಣರು ಕಟ್ಟಿ ಬೆಳೆಸಿದ ವೀರಶೈವಪರಂಪರೆಯನ್ನು ಮುಂದುವರೆಸಿಕೊಂಡು ಬಂದ ಮಹಾನ್ ಸಾಧ್ವಿ ಈ ಮಲ್ಲಮ್ಮ ಎಂದು ಹೇಳಿದರು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಮಲ್ಲಮ್ಮನವರ ಮೌಲ್ಯಗಳನ್ನು ಪೀಳಿಗೆಗೆ ತಲುಪಿಸಬೇಕಾಗಿದೆ ಎಂದು ಹೇಳಿದರು.
ತಾಲೂಕು ರಡ್ಡಿ ಸಮಾಜದ ಖಜಾಂಚಿ ಗೋವಿನಾಳು ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಎಂ.ಮಲ್ಲಯ್ಯ, ಗ್ರಾ.ಪಂ.ಸದಸ್ಯರಾದ ಡಿ.ಮಲ್ಲಪ್ಪ, ಬಣಕಾರ ಕೆ,ಮಲ್ಲಿಕಾಜರ್ುನ, ಮುಖಂಡರಾದ ಪಿ.ವೀರಪ್ಪ, ಕೆ.ಚಂದ್ರಪ್ಪ, ಎಂ.ಶಿವಣ್ಣ, ಕೆ.ಬಸವಲಿಂಗಪ್ಪ, ಬಿ.ಬಸಪ್ಪ, ಕೆ.ಶಿವಪುತ್ರಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕುರುಬಗೊಂಡದ ಪಂಡಿತ್ ಪಂಚಾಕ್ಷರಿ ಹಿರೇಮಠ ಶಾಸ್ತ್ರೀಜಿ ಹೇಮರಡ್ಡಿ ಮಲ್ಲಮ್ಮನವರ ಕೀರ್ತನೆ ನಡೆಸಿಕೊಟ್ಟರು. ದೂರದರ್ಶನ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ನಡೆಸಿಕೊಟ್ಟ ಹಾಸ್ಯ ಜನಮನ ರಂಜಿಸಿತು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾಥರ್ಿಗಳಾದ ಭೋವಿ ಸುರೇಶ್, ಪ್ರ್ರಿಯಾಂಕ ಮಡಿವಾಳರ, ಎಸ್.ಎಂ.ಸ್ವಾಮಿ, ಎಂ.ಸುಷ್ಮಾ, ಕೆ.ಲಕ್ಷ್ಮಿ, ಜೆ.ಶಶಿಕಲಾ ಇವರನ್ನು ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಜೆ.ಶಶಿಕಲಾ, ಕೆ.ಲಕ್ಷ್ಮಿ ಪ್ರಾಥರ್ಿಸಿದರು. ವೈ.ಗುರುಬಸವರಾಜ ಸ್ವಾಗತಿಸಿದರು. ಹಿರಿಯೂರಿನ ಶಿಕ್ಷಕ ಟಿ.ಶೇಖರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ನಿರ್ವಹಿಸಿದರು.
ಕಾರ್ಯಕಮಕ್ಕೂ ಮುನ್ನ ಗ್ರಾಮದ ಬೀದಿಗಳಲ್ಲಿ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರದ ಮೆರವಣಿಗೆ ನಂದಿಕೋಲು, ಸಮಾಳ, ಡ್ರಮ್ಸೆಟ್, ಮಹಿಳೆಯರ ಕಳಸದೊಂದಿಗೆ ಅದ್ದೂರಿಯಾಗಿ ಜರುಗಿತು. ನಂತರ ಅನ್ನ ಸಂತರ್ಪಣೆ ನಡೆಯಿತು