ತಾಳಿಕೋಟಿ

21 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ

21 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ
ತಾಳಿಕೋಟೆ ಪಟ್ಟಣದಲ್ಲಿ ವಿವಿಧ ಬೇಡಿಕೆಗಳ ಈಡೇರಸುವಂತೆ ಒತ್ತಾಯಿಸಿ ನಡೆದ ಧರಣಿ ಸತ್ಯಾಗ್ರಹ 8ನೇ ದಿನ ಪೂರ್ಣಗೊಳಿಸಿತು.

ತಾಳಿಕೋಟೆ19: ವಿವಿಧ ಬೇಡಿಕೆಗಳ ಈಡೇರಿಸುವಂತೆ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಇದೇ 21 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವದು ಎಂದು ತಾಳಿಕೋಟೆ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೇಟ್ಟಿ ತಿಳಿಸಿದರು. 

ಪಟ್ಟಣದ ಮಹಾರಾಣಾ ಪ್ರತಾಪ್ ವೃತ್ತದಲ್ಲಿ ನಡೆದ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಮಾತನಾಡಿದ ಅವರು, ಹಡಗಿನಾಳ ರಸ್ತೆಯ ಡೋಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ರಸ್ತೆಯನ್ನು ಅಂಕುಡೊಂಕಾಗಿಸದೇ ನೇರವಾಗಿ ನಿರ್ಮಾಣ ಮಾಡಬೇಕು. ಪಟ್ಟಣದ ಪುರಸಭೆಯಲ್ಲಿ ನಡೆದ ಅಕ್ರಮಗಳ ತನಿಖೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಕೊಳ್ಳಬೇಕು ಹಾಗೂ ಪುರಸಭೆ ಆಸ್ತಿಗಳನ್ನು ಮತ್ತೆ ಪುರಸಭೆಗೆ ಹಸ್ತಾಂತರಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು. ಧರಣಿ ಆರಂಭವಾಗಿ 8 ದಿನ ಕಳೆದಿದೆ. ಅಧಿಕಾರಿಗಳು ಕಾಟಾಚಾರಕ್ಕೆ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದು ಭೇಟಿ ನೀಡಿದ್ದಾರೆ ಹೊರತು ಬೇಡಿಕೆಗಳ ಈಡೇರಿಸುವ ಭರವಸೆ ನೀಡುತ್ತಿಲ್ಲ. ಸೇತುವೆ ರಸ್ತೆಯ ಎರಡು ಬದಿಯಲ್ಲಿ ಸರ್ವಿಸ್ ರಸ್ತೆ ಮಾಡಬೇಕು. ಇಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಹಿಗಾಗಿ ಅಧಿಕಾರಿಗಳ ನಿರ್ಲಕ್ಷದಿಂದ ಹೋರಾಟಗಾರರು ರೋಶಿ ಹೋಗಿದ್ದು ಇದೇ 21 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಬೇಡಿಕೆ ಈಡೇರುವವರೆಗೂ ಧರಣಿ ಸತ್ಯಾಗ್ರಹ  ಕೈಬಿಡುವದಿಲ್ಲ. ಹೋರಾಟಗಾರರಿಗೆ ಯಾವುದೇ ತೊಂದರೆಯಾದರೂ ಸರಕಾರವೇ ಹೊಣೆ ಮಾಡಲಾಗುವದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಉಪಾಧ್ಯಕ್ಷ ಸುಭಾಸ ಗೌಡಗೇರಿ, ಸುರೇಶ ಹಜೇರಿ, ಸುರೇಶ ಅಮರಸಿಂಗ ಹಜೇರಿ, ನದೀಂ ಕಡು, ಹಣಮಪ್ಪ ಮೇಲಿನಮನಿ, ಪತ್ತೆಮಹಮ್ಮದ ನಾಯ್ಕೋಡಿ, ನಿಂಗನಗೌಡ ದೇಸಾಯಿ, ಭೀಮರಾಯ ಸಾಲವಾಡಗಿ, ಶಿವರಾಜ ಗುಂಡಕನಾಳ, ಮಹಾದೇವಪ್ಪ ನಡಕೂರ, ಬಸಪ್ಪ ಚಂದ್ಲಾಪೂರ, ದೇವಿಂದ್ರ ಘತ್ತರಗಿ, ಅರ್ಜುನ ಕಲಕೇರಿ, ರಾಮನಗೌಡ ದೇಸಾಯಿ, ಮಲ್ಲಪ್ಪ ಮೇಲ್ದಾಪೂರ, ನಿಂಗನಗೌಡ ದೇಸಾಯಿ, ಕಲ್ಲನಗೌಡ ದೇಸಾಯಿ, ರಮೇಶ ಮೋಹಿತೆ, ಚಂದ್ರಶೇಖರ ಮಠಪತಿ, ಮಲ್ಲಪ್ಪ ಪೂಜಾರಿ, ಮಲಕಾಜಿ ಮದರಿ, ಆನಂದ ಕಡಕೋಳ, ಅಶೋಕ ವಠಾರ ಸೇರಿದಂತೆ ಇತರರು ಇದ್ದರು. 

ಸುದ್ದಿ ಓದಿ