ಶಿಗ್ಗಾವ್

ಹುನಗುಂದ ಸಮೂಹ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ

ಹುನಗುಂದ ಸಮೂಹ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ

ಶಿಗ್ಗಾವಿ 26:  ಕ್ರೀಡೆಗಳಿಂದ ಶರೀರ ಸದೃಢಗೊಂಡು ದಿನವೀಡಿ ನವ ಚೈತನ್ಯದಿಂದ ಇರಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಓದಿನ ಜೋತೆ ಕ್ರೀಡೆಗಳತ್ತ ಹೆಚ್ಚಿನ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಉದ್ಯಮಿ, ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು. 

ತಾಲೂಕಿನ ಅಂದಲಗಿ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ವೀರಭದ್ರೇಶ್ವರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಹುನಗುಂದ ಸಮೂಹ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದ ಅವರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಹೊಣೆ ಶಿಕ್ಷಕರದಾಗಿರಬೇಕು.ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿದ್ದು, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸಿಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸೋಲು ಗೆಲುವಿನ ಮೂಲ. ಇಂದು ಸೋತವರು ಮುಂದೊಂದು ದಿನ ಗೆದ್ದೆ ಗೆಲ್ಲುತ್ತಾರೆ.ಆದ್ದರಿಂದ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನಲ್ಲ ಹೆಜ್ಜೆ ಹಾಕಬೇಕು ಎಂದರು. ಕ್ರೀಡಾಕೂಟದಲ್ಲಿ ಹುನಗುಂದ ಸಮೂಹ ಮಟ್ಟದ ಎಂಟು ಪ್ರೌಢಶಾಲೆಗಳು ಪಾಲ್ಗೊಂಡಿದ್ದವು. 

ವೀರಭದ್ರೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಎಸ್‌.ಕೆ.ಅಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾ.ಪಂ ಅಧ್ಯಕ್ಷೆ ವಿನೋದಾ ಕಲಗುದರಿ, ಎಮ್‌.ಎನ್‌.ಕ್ಯಾಲಕೊಂಡ, ಪುಟ್ಟಯ್ಯ ಗಿರಿಮಲ್ಲಯ್ಯನಮಠ, ಶೇಖಣ್ಣ ಜವಳಿ, ವೀರಭದ್ರಗೌಡ ಪಾಟೀಲ, ಜಾಫರ ಯಡಹಳ್ಳಿ, ಶಿವಪುತ್ರ​‍್ಪ ಜವಳಿ, ಸುಭಾಷದೇಶಪಾಂಡೆ, ಕಲವೀರ​‍್ಪಆಲಂಶೆಟ್ಟಿ, ಈರಣ್ಣ ಚಲವಾದಿ, ಪ್ರತಾಪ ಮಿಶ್ರಿಕೋಟಿ, ಉಮೇಶ ಪೂಜಾರ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ