ಮಾನವೀಯತೆ ಮೆರೆದ ವೃತ್ತಿನಿರತ ಗೆಳೆಯರು
ಬೈಲಹೊಂಗಲ 18: ತಾಲೂಕಿನ ಹಣ್ಣಿಕೇರಿ ಗ್ರಾಮದ ಪೋಟೊಗ್ರಾಫರ ಲಿಂಗರಾಜ ಚಂದ್ರಯ್ಯ ಪೂಜಾರ(26) ವರುಷದ ಹಿಂದೆ ಅಕಾಲಿಕ ಮರಣ ಹೊಂದಿದ್ದರು. ವೃತ್ತಿನಿರತ ಗೆಳೆಯರೆಲ್ಲ ಸೇರಿಕೊಂಡು ಮಾನವೀಯತೆಯ ದೃಷ್ಟಿಯಿಂದ ಮೃತರ ಎರಡು ವರ್ಷದ ಪುತ್ರಿಯ ಸಿಂಚನಾ ಲಿಂಗರಾಜ ಪೂಜಾರ ಹೆಸರಿನಲ್ಲಿ ಪೋಸ್ಟ್ ಕಚೇರಿಯಲ್ಲಿ ಮಂಗಳವಾರ ರೂ. 40000 ರೂ. ಠೇವಣಿ ಇರಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮೃತನ ಪತ್ನಿ ಪೂಜಾ ಲಿಂಗರಾಜ ಪೂಜಾರ, ನ್ಯಾಯವಾದಿ ವಿಜಯ ಪತ್ತಾರ, ಬಸವರಾಜ ಗೋಕಾವಿ, ನಾಗರಾಜ ಬಡಿಗೇರ, ಬಸವರಾಜ ಈಟಿ, ಶಂಕರ ನಾಯ್ಕರ, ಇನಾಮುಲ್ಲಾ ಚಕ್ಕೋಲಿ, ಮಲ್ಲಿಕಾರ್ಜು, ಗೋವಿಂದ ಚಿತ್ರಗಾರ, ಆನಂದ ಕದಂ, ಚಂದ್ರು ಪಾಟೀಲ, ಮಾದಾರ, ಫಕೀರ ಶಿಡ್ಲಿ, ದಾನಪ್ಪ ಹುಂಚಿಮರದ, ಕುಮಾರ ಬೂದಿಹಾಳ, ಅನಿಲ ಮೇಟಿ, ಶೀವು ಸುತಗಟ್ಟಿ, ನಾಗರಾಜ ಬಾವಿಕಟ್ಟಿ, ಸುಬಾಶ ಪಾಟೀಲ, ಇನ್ನಿತರರು ಇದ್ದರು.