ಜ. 4ರಿಂದ ಬೃಹತ್ ವಿಶ್ವಮಟ್ಟದ ಕಾರ್ಯಾಗಾರ
ಲೋಕದರ್ಶನ ವರದಿ
ಬೈಲಹೊಂಗಲ 28: ಪುರೋಹಿತರ ಶ್ರೇಯೋಭಿವೃದ್ಧಿಗಾಗಿ ಶಿಲಾಮೂರ್ತಿ ಪ್ರತಿಷ್ಠಾಪನೆ ವಿಷಯದ ಅಂಗವಾಗಿ ಮೂರು ದಿನಗಳ ಬೃಹತ್ ವಿಶ್ವಮಟ್ಟದ ಕಾರ್ಯಾಗಾರವನ್ನು ಜ. 4 ರಿಂದ 6 ರವರೆಗೆ ಮೂರು ದಿನಗಳ ಕಾಲ ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಏರಿ್ಡಸಲಾಗಿದ್ದು ಉತ್ತರ ಕರ್ನಾಟಕದ ಪುರೋಹಿತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಪ್ರದೀಪ ಕಂಕಣವಾಡಿ ಹೇಳಿದರು.
ಅವರು ಸೋಮವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ಶಿಬಿರವು ಉತ್ತರ ಕರ್ನಾಟಕ ಭಾಗದಲ್ಲಿ ್ರ್ರಥಮವಾಗಿ ಏರಿ್ಡಸಲಾಗಿದ್ದು, ಶಿಬಿರದಲ್ಲಿ ಪಂಡಿತರು, ವಿದ್ವಾಂಸರು, ಅರ್ಚಕರು ಆಗಮಿಸಿ ಪುರೋಹಿತರ ಸಮಸ್ಯೆ ಕುರಿತು ಚಿಂತನ-ಮಂಥನ ಕಾರ್ಯ ನಡೆಯಲಿದ್ದು ಕಾರಣ ಅರ್ಚಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಡಾ. ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಮಾತನಾಡಿ, ಇಂದಿನ ಕಷ್ಟದ ದಿನಮಾನಗಳಲ್ಲಿ ಪುರೋಹಿತರು ಹಲವಾರು ಸಮಸ್ಯೆ ಎದುರಿಸುತ್ತಿದ್ದು ಇದನ್ನು ಮನಗಂಡು ಪ್ರದೀಪ ಕಂಕನವಾಡಿ ಅವರು ಪುರೋಹಿತರ ಸಂಘಟನೆ ಮಾಡುವ ಜೊತೆಗೆ ಅವರ ಏಳ್ಗೆಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಚಂದ್ರಯ್ಯ ಪೂಜೇರಿ, ಸಿದ್ದಬಸಯ್ಯ ಶಾಸ್ತಿ ್ರಗಳು ಇದ್ದರು. ಹೆಚ್ಚಿನ ಮಾಹಿತಿಗಾಗಿ ಮೊ.8073456820 ಸಂಪರ್ಕಿಸಲು ಕೋರಲಾಗಿದೆ.