ಬೈಲಹೊಂಗಲ

ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ಹೋಟಿಗೆ ಸನ್ಮಾನ

ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ಹೋಟಿಗೆ ಸನ್ಮಾನ

ಲೋಕದರ್ಶನ ವರದಿ 

ಬೈಲಹೊಂಗಲ 09: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಗ್ರಾಮಾಂತರ ವರದಿಗೆ  ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಈಶ್ವರ ಹೋಟಿ ಅವರನ್ನು ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆಯ ಸಮಾನ ಮನಸ್ಕರ ವೇದಿಕೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 


ಹಿರೇಬಾಗೇವಾಡಿ ಸಮುದಾಯ ಆರೋಗ್ಯ ಕೇಂದ್ರದ ವಿಕಿರಣ ಶಾಸ್ತ್ರದ ಆಕಾಶ ಥಬಾಜ, ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆಯ ಸಮಾನ ಮನಸ್ಕರ ವೇದಿಕೆಯ ಮುಖಂಡ ಕಿರಣ ಸಾವಂತನವರ ಮಾತನಾಡಿ, ಹೋಟಿ ಅವರ ಪ್ರಾಮಾಣಿಕತೆ ಸರಳತೆ ಎಲ್ಲರಿಗೂ ಅನುಕರಣೀಯವಾಗಿದ್ದು ಈ ನಾಡಿಗೆ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ವಿಷಯ ಎಂದರು.  

   

  ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ ಹೋಟಿ ಅವರು ಉತ್ತಮ ಸಮಾಜ ನಿರ್ಮಿಸುವಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳ ಮುಖ್ಯವಾದದ್ದು.  ಲೇಖನಿ ಎಂಬ ಆಯುಧವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವುದು ಹಾಗೂ ಜನರಿಗೆ ಸತ್ಯದ ದರ್ಶನ ಮಾಡಿಸುವುದು ಪತ್ರಿಕಾ ಧರ್ಮ ಎಂದರು. 


 ಮೋಹನ ಪಾಟೀಲ,ಪುಂಡಲೀಕ ಭಜಂತ್ರಿ, ಎನ್‌.ಆರ್‌.ಠಕ್ಕಾಯಿ, ಚಂದ್ರಶೇಖರ ಹನಮನಹಾಳ, ಅಶೋಕ ಸವದತ್ತಿ, ವಿವೇಕಾನಂದ ಪೂಜಾರ, ಉಮೇಶ ಗಾಡದ, ಮಹಾಂತೇಶ ಗುಮತಿ, ಅಶೋಕ ಬಡಿಗೇರ, ಜಗದೀಶ ಕಡಗದ, ಚಂದ್ರಯ್ಯ ಯರಗಟ್ಟಿಮಠ, ಪ್ರಕಾಶ ಬೆಳಗಾವಿ ಇದ್ದರು. 


ಸುದ್ದಿ ಓದಿ