ಮಕ್ಕಳಿಗೆ ಕುದುರೆ ಸವಾರಿ ತರಬೇತಿ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 28: ಯಾವುದೇ ಕ್ರೀಡೆಯಿರಲಿ ವ್ಯಾಯಾಮ ಇದ್ದಂತೆ ನಮ್ಮ ದೇಹಕ್ಕೆ ವ್ಯಾಯಾಮ ಆಹಾರದಂತಯೇ ಮುಖ್ಯ ಅಲ್ಲದೇ ಕ್ರೀಡೆ ಮನೋಲ್ಲಾಸ ತಂದು ದಿನಂಪ್ರತಿ ಚೈತನ್ಯದಿಂದರಲು ಸ್ಪೂರ್ತಿಯಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹ್ಮದ ರೋಷನ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಪಿನಿಕ್ಸ ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳಿಗೆ ಕುದುರೆ ಸವಾರಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲ ಕ್ರೀಡಾಪಟುಗಳಿಗೆ ಮುಕ್ತ ಅವಕಾಶ ಸಿಗಬೇಕು ಅದರಲ್ಲಿ ಕುದುರೆ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯ ಕ್ರೀಡೆಗಳಾಗಿ ಹೊರಹೊಮ್ಮಿದೆ ಕುದುರೆ ಸವಾರಿ ಕ್ರೀಡೆಯು ಹೌದು ಹಾಗೂ ವ್ಯಾಯಾಮವು ಹೌದು ಅಲ್ಲದೇ ಕ್ರೀಡಾಪಟುಗಳು ನಮ್ಮ ದೇಶದ ಆಸ್ತಿ. ಕ್ರೀಡೆಗಳನ್ನು ಆಡುವುದರಿಂದ ರಕ್ತ ಪರಿಚಲನೆ ಹೆಚ್ಚಿ ದೇಹದ ಎಲ್ಲ ಅಂಗಾಂಗಗಳು ಸಹಜವಾಗಿ ಕೆಲಸ ಮಾಡಲು ಕಾರಣವಾಗುತ್ತದೆ ಹಾಗೂ ಶಿಗ್ಗಾವಿಯಂತಹ ಪಟ್ಟಣದಲ್ಲಿ ಕುದುರೆ ಸವಾರಿ ತರಬೇತಿ ಆರಂಬಿಸಿದ ಡಾ.ತಿರ್ಲಾಪೂರ ದಂಪತಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಪೋಲಿಸ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಇತರೆ ಕ್ರೀಡೆಗಳಿಗೆ ಆಸಕ್ತವಹಿಸುತ್ತಿರಲಿಲ್ಲ ಇದನ್ನು ಅರಿತು ತಿರ್ಲಾಪುರ ಕುಟುಂಬ ವರ್ಗ ಮಕ್ಕಳಿಗೆ ವಿಧ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಇಂತಹ ಒಳ್ಳೆಯ ಕ್ರೀಡಾವೇದಿಕೆ ಸೃಷ್ಟಿ ಮಾಡಿದ್ದಾರೆ ಅದರ ಸದುಪಯೋಗ ಮಕ್ಕಳು ಪಡಿಸಿಕೊಳ್ಳಲು ತಿಳಿಸಿದರು.
ಪಿನಿಕ್ಸ ಶಾಲೆ ಅಧ್ಯಕ್ಷ, ಡಾ.ಎಂ.ಎಂ.ತಿರ್ಲಾಪೂರ ಮಾತನಾಡಿ ಇದು ಬಹಳ ದಿನಗಳ ಕನಸು ಕೋವಿಡ್ ಅಲೆಯಿರುವಾಗ ಕುದುರೆ ಸವಾರಿ ತರಬೇತಿಯನ್ನು ಮುಂದೂಡಿದ್ದು ಅದು ಈಗ ನನಸಾಗುತ್ತಿರುವುದು ಸಂತಸ ಅಲ್ಲದೇ ಕುದುರೆ ಕ್ರೀಡೇ ವಿಶೇಷತೆ ಏನೆಂದರೆ ಮನಸ್ಸನ್ನು ಕೇಂದ್ರಿಕರಿಸಲು, ದೈರ್ಯವನ್ನು, ಸಾಹಸವನ್ನು ಸೃಷ್ಟಿಸಲು ತಾಲೂಕಿನ ಮಕ್ಕಳಿಗೆ ಅನುಕೂಲವಾಗುತ್ತದೆ.
ಸಂಸ್ಥೆ ಉಪಾಧ್ಯಕ್ಷ ನರಹರಿ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಮ್ಮದ್ ರೋಷನ ಧರ್ಮಪತ್ನಿ, ಮಗು, ರಾಜೋತ್ಸವ ಪ್ರಶಸ್ತಿ ವಿಜೇತ ಶಿವಾನಂದ ಮ್ಯಾಗೇರಿ, ಸಂಸ್ಥೆಯ ಕಾರ್ಯದರ್ಶಿ ಡಾ.ರಾಣಿ ತಿರ್ಲಾಪೂರ, ಭಾರತೀಯ ರೈಲ್ವೆ ಅಧಿಕಾರಿ ಅಂಕಿತ ವರ್ಮಾ ಉಪಸ್ಥಿತರಿದ್ದರು.