ಕೋವಿಡದಿಂದ ನೊಂದ ಕುಟುಂಬಕ್ಕೆ ಆಶಾಕಿರಣವಾದ ಮುಖ್ಯಮಂತ್ರಿ
ಶಿಗ್ಗಾವಿ 17: ಕೋವಿಡನಿಂದ ಸಾವನ್ನಪ್ಪಿದ ನೋಂದ ಬಡ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕನರ್ಾಟಕದ ಜನ ಅಭಿನಂದಿಸಲೇಬೇಕು ಎಂದು ತಾಲೂಕ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಶ್ವವನ್ನೇ ವ್ಯಾಪಿಸಿದ ಕಣ್ಣಿಗೆ ಕಾಣದ ಕೈಗೂ ಸಿಗದ ಕೋವಿಡ ಸೋಂಕು ಜನರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿ ರಾಜ್ಯಾದ್ಯಂತ ಸಾವಿರಾರು ಜನರ ಜೀವವನ್ನು ನುಂಗಿ ಅಟ್ಟಹಾಸ ಮೆರೆದಿದೆ ಅನೇಕ ಬಡ ಕುಟುಂಬಗಳ ಮುಖ್ಯಸ್ಥರೇ ಸಾವನ್ನಪ್ಪಿ ಅಂಥವರ ಬದುಕು ಕಣ್ಣೀರಿನಲ್ಲಿ ತೊಳೆಯುವಂತಹ ಸನ್ನಿವೇಶವನ್ನು ಕಣ್ಣಾರೆ ಕಂಡ ಬಡ ಜನರ ಬಂದು ರೈತರ ಕಣ್ಮಣಿ ಹೃದಯ ವೈಶಾಲತೆಯ ಮುಖ್ಯಮಂತ್ರಿ ಬಿ.ಎಸ್.ವೈಯವರ ದೂರದೃಷ್ಟಿಯನ್ನು ಮೆಚ್ಚಲೇಬೇಕು.
ಒಬ್ಬ ರಾಜಕಾರಣಿ ದೃಷ್ಟಿ ಮುಂದಿನ ಚುನಾವಣೆಯ ಮೇಲೆ ಇದ್ದರೆ ಒಬ್ಬ ಮುತ್ಸದ್ದಿಯ ದೃಷ್ಟಿ ಮುಂದಿನ ಜನಾಂಗದ ಮೇಲೆ ಇರುತ್ತದೆ ಎಂಬ ಮಾತಿಗೆ ಸ್ಪೂತರ್ಿಯಾಗಿ ಬಡವರ ಕಷ್ಟ ಅರಿತು ಹಿಂದೆ ಮುಂದೆ ನೋಡದೇ ಬಿ.ಪಿ.ಎಲ್ ಕುಟುಂಬದ ಸದಸ್ಯ ಸೊಂಕಿಗೆ ತುತ್ತಾಗಿದ್ದಲ್ಲಿ ಅಂತಹ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವ ಯೋಜನೆ ಘೋಷಣೆ ಮಾಡಿದ್ದು ಬಡವರ ಆಶಾಕಿರಣವಾಗಿ ಆತ್ಮಸ್ತೈರ್ಯ ತುಂಬಿ ನಿಮ್ಮೊಂದಿಗೆ ನಾವಿದ್ದೇವೆ ನಮ್ಮ ಬಿಜೆಪಿ ಸರಕಾರವಿದೆ ಎಂಬುದು ಸಾಬೀತು ಮಾಡಿದ ಭಾರತ ದೇಶದ ಏಕೈಕ ರಾಜ್ಯ ಕನರ್ಾಟಕವಾಗಿದೆ.ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ ಸೋಂಕಿಗೆ ತುತ್ತಾದಲ್ಲಿ ಮಾತೋಶ್ರೀ ಗಂಗಮ್ಮ ಬೊಮ್ಮಾಯಿ ಟ್ರಸ್ಟವತಿಯಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ 25 ಸಾವಿರ ರೂಗಳ ಪರಿಹಾರವನ್ನು ನೀಡುತ್ತಿದ್ದಾರೆ, ಇಂತಹ ಸರಕಾರ ಮತ್ತು ಇಂತಹ ನಾಯಕರನ್ನು ಪಡೆದ ನಾವೇ ಧನ್ಯರು ಎಂದರು