ರಾಣೆಬೆನ್ನೂರ

ಹೊನ್ನತ್ತಿ ಪಂಚಾಯಿತಿ: ಮೂಲಭೂತ ಸೌಲಭ್ಯಗಳಿಗೆ ಆಗ್ರಹ

ಹೊನ್ನತ್ತಿ ಪಂಚಾಯಿತಿ: ಮೂಲಭೂತ ಸೌಲಭ್ಯಗಳಿಗೆ ಆಗ್ರಹ

ರಾಣೆಬೆನ್ನೂರು 12: ತಾಲೂಕಿನ ವೈಟಿ ಹೊನ್ನತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ಯಾವುದೇ ಯೋಜನೆಗಳು ಗ್ರಾಮಗಳಿಗೆ ದಕ್ಕಿರಲಿಲ್ಲ ಕೂಡಲೇ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಅ. 15ರಂದು ಮುಂಜಾನೆ 11 ರಿಂದ ಮಧ್ಯಾಹ್ನದವರೆಗೆ ಪಾದಯಾತ್ರೆ ಮೂಲಕ ಸಾಗಿ, ಲೋಕೋಪಯೋಗಿ ಇಲಾಖೆ ಎದುರುಗಡೆ ಧರಣಿ ನಡೆಸಿ, ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ಮುಖಂಡ ಜಗದೀಶ್ ಕೆರೋಡಿ ಹೇಳಿದರು. ಅವರು ಗುರುವಾರ ಪ್ರವಾಸಿ ಮಂದಿರದಲ್ಲಿ ನಡೆದ, ಸುದ್ದಿಗೋಷ್ಠಿಯಲ್ಲಿ ಅಲ್ಲಿನ ಸಮಸ್ಯೆ ಕುರಿತು ಮಾತನಾಡಿದರು. 

ರಸ್ತೆ, ಗಟಾರ, ಚರಂಡಿ  ಮತ್ತು ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವುದು ಸೇರಿದಂತೆ ಮತ್ತಿತರ ಸೌಲಭ್ಯಗಳಿಂದ, ಗ್ರಾಮಸ್ಥರು ವಂಚಿತರಾಗಿದ್ದಾರೆ. ಈ ಕುರಿತು ಹಲವಾರು ಬಾರಿ  ಶಾಸಕರಿಗೆ ಪಂಚಾಯಿತಿ ಅಧಿಕಾರಿಗಳಿಗೆ, ಮತ್ತು ತಹಶೀಲ್ದಾರ್  ಅವರಿಗೆ  ಮನವಿ ಸಲ್ಲಿಸಲಾಗಿದೆ ಆದರೆ ಇದುವರೆಗೂ ಅಲ್ಲಿನ ನಾಗರಿಕರ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಸ್ವಾತಂತ್ರ್ಯ ಬಂದು 75ವರ್ಷಗಳು ಗತಿಸಿದರು ಸಹಿತ. ಗ್ರಾಮಗಳಿಗೆ ಸರಕಾರದಿಂದ ದೊರೆಯಬಹುದಾದ  ಮೂಲಭೂತ ಸೌಲಭ್ಯಗಳು ದೊರಕಿಲ್ಲ. ಈ ವಿಷಯವನ್ನು ಮನವಿಯ ಮೂಲಕ ತಿಳಿಸಲು, ವಿಷಾದವೆನಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಂಚಾಯ್ತಿ ಅಧ್ಯಕ್ಷರ ಪತಿ ರವಿ ಮಲ್ಲಳ್ಳಿ, ಸದಸ್ಯರಾದ ಗುಡ್ಡಪ್ಪ ಮಲ್ಲಾಡದ, ಮಂಜಪ್ಪ ರಣಸೋತ, ಲೋಕಪ್ಪ ಗುಳೇದ, ಧರ್ಮಪ್ಪ ರಣ ಸೋತ, ಮಾಲತೇಶ ವಡ್ಡರ, ನಾಗರಾಜ ಓಲೆಕಾರ್, ರವಿ ಕೆರೋಡಿ, ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ಸುದ್ದಿ ಓದಿ