ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ,ನಿಸ್ವಾರ್ಥ ಸೇವೆ: ದಮ್ಮೂರಮಠ
ತಾಳಿಕೋಟೆ 23: ಸಾಲವನ್ನ ತೆಗೆದುಕೊಳ್ಳುವಾಗ ಇದ್ದಾಗಿನ ಸಂಬಂಧ ಸಾಲ ತುಂಬುವಾಗಲೂ ಇದ್ದರೆ ಮಾತ್ರ ಸಹಕಾರಿ ಸಂಘಗಳ ಬೆಳೆವಣಿಗೆ ಸಾಧ್ಯ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಬಿ.ದಮ್ಮೂರಮಠ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ಸಭಾ ಭವನದಲ್ಲಿ ಶ್ರೀ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ ನಿಯಮಿತದ ಸರ್ವ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಶಿಸ್ತು ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅಭ್ಯುದಯ ಸಾಧ್ಯ. ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯ ನಿರ್ವಹಿಸಿದಾಗ ಸಹಕಾರ ಸಂಘದ ಬೆಳವಣಿಗೆ ಆಗಲಿದೆ. ಉತ್ತಮ ಕಾರ್ಯನಿರ್ವಹಣೆ, ನಂಬಿಕೆ ಹಾಗೂ ವಿಶ್ವಾಸ ಸಹಕಾರ ಸಂಘದ ಪ್ರಮುಖ ಗುರಿಯಾದಾಗ ಮಾತ್ರ ಸಂಘ ಬೃಹದಾಕಾರವಾಗಿ ಬೆಳೆಯಲಿದೆ. ಇಂತಹ ಗುರಿಯನ್ನು ಹೊಂದಿರುವ ಪಂಚಾಚಾರ್ಯ ಸಹಕಾರಿ ಪತ್ತಿನ ಸಂಘದ ಬೆಳೆವಣಿಗೆಲ್ಲಿ ಕಾಣಬಹುದಾಗಿದೆ ಎಂದರು.
ದೇರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆ ಇರಬೇಕು. ಇತ್ತಿಚಿನ ದಿನಗಳಲ್ಲಿ ಸ್ವಾರ್ಥಮಯ ವಾತಾವರಣದ ನಡುವೆಯೇ ಸಹಕಾರ ಸಂಘದ ಬೆಳವಣಿಗೆಗೆ ಶ್ರಮಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಇಂಗಳೇಶ್ವರ ವಚನಶಿಲಾ ಮಂಟಪದ ಚನ್ನಬಸವ ಮಹಾಸ್ವಾಮಿಗಳು, ತುಂಬಗಿ-ಸಾಸನೂರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು. ಹಿರೂರ ಅನ್ನದಾನೇಶ್ವರ ಮಠದ ಗುರುಜಯಸಿದ್ದೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಸಂಘದ ಅಧ್ಯಕ್ಷ ಬಸಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಸಂಗಯ್ಯ ಹಿರೇಮಠ, ಎಸ್.ಕೆ.ಕಾಲೇಜಿನ ಅಧ್ಯಕ್ಷ ವ್ಹಿ.ಸಿ.ಹಿರೇಮಠ, ಖಾಸ್ಗತೇರ್ಶವರ ಮಠದ ಆಡಳಿತಾಧಿಕಾರಿ ಮುರಗೇಶ ವೀರಕ್ತಮಠ, ರಾಜಶೇಖರ ಹಿರೇಮಠ, ಸಂಘದ ಉಪಧ್ಯಕ್ಷ ಸೋಮಶೇಖರಯ್ಯ ಹಿರೇಮಠ, ಸಂಗಯ್ಯ ಕೊಡಗಾನೂರ, ಗುರಯ್ಯ ಬಿರಾದಾರ, ಮುತ್ತುರಾಜ ಜಾಗೀರದಾರ, ಶಂಕ್ರಯ್ಯ ಗದ್ದಗಿಮಠ ಸೇರಿದಂತೆ ಇತರರು ಇದ್ದರು. ಮಹಾದೇವಯ್ಯ ಶಾಸ್ತ್ರಿಗಳು ನಿರೂಪಣೆ ಮಾಡಿದರು. ಶ್ರೀಕಾಂತ ಹಿರೇಮಠ ವರದಿ ವಾಚನ ಮಾಡಿದರು.ಅಮರಯ್ಯ ಹಿರೇಮಠ ಸಂಗೀತ ನಡೆಸಿಕೊಟ್ಟರು.