ತಾಳಿಕೋಟಿ

ಹೋಳಿ ಹಬ್ಬದ ಶಾಂತಿ ಸಭೆ

ಹೋಳಿ ಹಬ್ಬದ ಶಾಂತಿ ಸಭೆ


ತಾಳಿಕೋಟೆ: ಹೋಳಿ ಹಬ್ಬವನ್ನು ಶಾಂತಿಯುತವಾಗಿ, ಸುಸೂತ್ರವಾಗಿ, ಅದ್ದೂರಿಯಾಗಿ ಆಚರಿಸಿ ಆದರೆ ದೇಹಕ್ಕೆ ಮಾರಕವಾದ ಬಣ್ಣ ಬಳಿಸಬೇಡಿ, ಪರಿಸರ ಸ್ನೇಹಿ ಬಣ್ಣ ಬಳಸಿರಿ ಹಾಗೂ ಇಷ್ಟ ಪಟ್ಟವರ ಮಾತ್ರ ಬಣ್ಣ ಹಾಕಿ, ಒತ್ತಾಯ ಸಲ್ಲದು ಎಂದು ಡಿ.ವೈಎಸ್ಪಿ ಅರುಣಕುಮಾರ ಕೋಳೂರ ಹೇಳಿದರು. 

ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಹೋಳಿ ಹಬ್ಬದ ಶಾಂತಿ ಸಭೆಯನ್ನುದ್ದೇಶಿಸಿ ಬುಧವಾರ ಮಾತನಾಡಿದರು. 

ಮದ್ಯ ಮಾರಾಟ ಬಂದ್ ಇರುತ್ತದೆ. ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ನಿರಂತರ ದಾಳಿ ನಡೆಯುತ್ತಿದೆ .ಅಕ್ರಮ ಮಧ್ಯ ಮಾರಾಟಕ್ಕೆ ತಡೆಯಲು ಸಹಕಾರ ನೀಡಬೇಕು, ಬೇಸಿಗೆಯಲ್ಲಿ ಕಳ್ಳತನ ಪ್ರಕರಣ ಬಗ್ಗೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಬೆಲೆ ಬಾಳುವ ಆಭರಣ, ವಸ್ತುಗಳು, ಹಣ ಇದ್ದವರು ಮನೆಯಲ್ಲಿ ಒಬ್ಬರು ಖಯಂ ಆಗಿ ಇರುವಂತೆ ನೋಡಕೊಳ್ಳಬೇಕು ಎಂದರು. 

ಸಿಪಿಐ ಆನಂದ ವಾಗ್ಮೋಡೆ ಮಾತನಾಡಿ, ಶಾಂತಿಯಿಂದ ಹೋಳಿ ಹಬ್ಬ ಆಚರಿಸಿ, ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಹಬ್ಬ ಬಂದ್ ಆಗಿತ್ತು, ಈ ವರ್ಷ ನಿಯಮ ಸಡಲಿಕೆ ಮಾಡಿದ್ದು ಶಾಂತಿಯಿಂದ ಅದ್ದೂರಿಯಾಗಿ ಹಬ್ಬ ಆಚರಿಸಿ. ಕಾಮದಹನ ಮಾಡುವಾಗ ಯಾವುದೇ ಅವಘಡ ಆಗದಂತೆ ಎಚ್ಚರಿಕೆ ನೀಡಿದರು. 

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಪಿಎಸೈ ವಿನೋದ ದೊಡಮನಿ ಇದ್ದರು. ಕರವೇ ಮುಖಂಡ ಜೈಭೀಮ ಮುತ್ತಗಿ, ನೀಲಮ್ಮ ಪಾಟೀಲ, ಡೋಣಿ. ಎಎಸೈ ಆರ್‌.ಎಸ್‌.ಭಂಗಿ ಮಾತನಾಡಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಪ್ರಭುಗೌಡ ಮದರಕಲ್ಲ, ಮುತ್ತಪ್ಪ ಚಮಲಾಪೂರ, ಎಂ.ಕೆ.ಚೋರಗಸ್ತಿ, ಪ್ರಕಾಶ ಹಜೇರಿ, ಅಣ್ಣಪ್ಪ ಜಗತಾಪ, ಜೈಸಿಂಗ ಮೂಲಿಮನಿ, ಫಯಾಜ ಉತ್ನಾಳ, ವಿಜಯಸಿಂಗ ಹಜೇರಿ. ಶೌಕತ ಲಾಹೋರಿ, ಮಹಿಬೂಬ ಕೆಂಬಾವಿ ಸೇರಿದಂತೆ ಇತರರು ಇದ್ದರು, 


ಸುದ್ದಿ ಓದಿ