ಹೋಳಿ ಹುಣ್ಣಿಮೆ, ರಮಜಾನ ಹಬ್ಬ: ಶಾಂತಿ ಪಾಲನಾ ಸಭೆ
ಘಟಪ್ರಭಾ 24: ಸ್ಥಳಿಯ ಪೋಲಿಸ ಠಾಣಾ ಆವರಣದಲ್ಲಿ ಹೋಳಿ ಹುಣ್ಣಿಮೆ ಹಾಗೂ ರಮಜಾನ ಹಬ್ಬದ ನಿಮಿತ್ತ ಸಿಪಿಐ ಅವರ ನೇತೃತ್ವದಲ್ಲಿ ಶಾಂತಿ ಪಾಲನಾ ಸಭೆ ಜರುಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಗೋಕಾಕ ಡಿವೈಎಸ್ಪಿ ಮುಲ್ಲಾ ಅವರು ಪೋಲಿಸ ಇಲಾಖೆಯು ಸಾರ್ವಜನಿಕರ ಮೇಲೆ ಒತ್ತಾಯ ಮಾಡೋದಿಲ್ಲ. ಆದರೆ ಇತರೆ ಜನಾಂಗದ ಮತ್ತು ಧರ್ಮದ ನೆಮ್ಮದಿಗೆ ದಕ್ಕೆಬಾರದಂತೆ ನಡೆದುಕೋಳ್ಳಬೇಕು. ಬಲವಂತವಾಗಿಯಾರ ಮೇಲೆಯು ಬಣ್ಣ ಎರಚದೇ ಸುವ್ಯವಸ್ಥೆಯೋಂದಿಗೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದರು.
ಪಿಎಸ್ಐ ಹಣಮಂತ ನೇರಳೆ ಮಾತನಾಡಿ ಡಿ.ಜೆ ಸೌಂಡಗಳು ಹಚ್ಚುವದು, ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ಕೋಡುವುದು ಮಾಡಬಾರದು. ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭವಾಗಿರುವದರಿಂದ ಶಾಲೆ ಮಕ್ಕಳಿಗೆ ಬಣ್ಣ ಹಚ್ಚುವದು ಮಾಡಬಾರದು. ಒಂದು ವೇಳೆ ಅಂತಹ ಪ್ರಸಂಗ ಕಂಡು ಬಂದಲ್ಲಿ ನಿರ್ದಾಕ್ಷೀಣವಾಗಿ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸ ಲಾಗುವದು ಎಂದರು.
ಈ ಸಂದರ್ಭದಲ್ಲಿ ಸಿಪಿಐ ಬಸವರಾಜ ಕಾಮನಬೈಲ, ಪಿಎಸ್ಐ ಕಂಚಗಾರ, ಮುತವಲ್ಲಿ ಶೌಕತ ಕಬ್ಬೂರ, ಸುರೇಶ ಪಾಟೀಲ, ಜಿ.ಎಸ್.ರಜಪೂತ, ಕಲ್ಲಪ್ಪ ಕಾಡದವರ, ಪುಟ್ಟು ಖಾನಾಪುರೆ, ಅರವಿಂದ ಬಡಕುಂದ್ರಿ, ಕೆಂಪಣ್ಣಾ ಚೌಕಶಿ, ರಹಮಾನ ಮೋಕಾಶಿ, ಪೋಲಿಸ ಠಾಣೆಯ ಸಿಬ್ಬಂದಿ ಸೇರಿದಂತೆಅನೇಕರುಇದ್ದರು.