ಹೊಳಗುಂದಿ: ಹೃದಯಾಘಾತಕ್ಕೆ ಮಹಿಳೆ ಸಾವು
ಹೂವಿನಹಡಗಲಿ 10: ತಾಲ್ಲೂಕಿನ ಹೊಳಗುಂದಿ ಗ್ರಾಮದ ಬಾಳಪ್ಪನವರ ದೇವಪ್ಪ ಅವರ ಪತ್ನಿ ಲಲಿತಾಮ್ಮ(45)ಬುಧವಾರ ಸಂಜೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆ ಹೊಲದಲ್ಲಿ ಕೆಲಸ ಮಾಡಿ ಸಂಜೆ 5.30ಕ್ಕೆ ತರಕಾರಿ ತರಲಿಕ್ಕೆ ಸಂತೆಗೆ ಹೋಗಿ ಹಿಂತಿರುಗುವಾಗ ಕುಸಿದು ಬಿದಿದ್ದು ನೋಡಿ ಮನೆಯವರು ಚಿಕಿತ್ಸೆಗೆ ಹೂವಿನಹಡಗಲಿ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಮೃತಪಟ್ಟಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಗಂಡ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಬಿಟ್ಟ್ಟಗಲಿದ್ದಾರೆ.
ಕೆಎಂಎಫ್ ನಿಂದ ಅಂತ್ಯಕ್ರಿಯೆಗೆ 10ಸಾವಿರ: ಗ್ರಾಮದಲ್ಲಿ ನಂದಿನಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮೃತ ಮಹಿಳೆ ಸದಸ್ಯರಾಗಿದ್ದು. ಕೆಎಂಎಫ್ ಕೆ.ಎಸ್.ಶಾಂತನಗೌಡ ಅವರು ಕುಟುಂಬದ ಸದಸ್ಯರಿಗೆ ಸಂತ್ವಾನ ಹೇಳಿ ಅಂತ್ಯಕ್ರಿಯೆಗೆ 10 ಸಾವಿರ ನಗದು ಹಣವನ್ನು ನೀಡಿದರು.