ಹೊಳಲು ಪ್ರಾ.ಕೃ.ಸ. ಸಂಘ ನೂರರಷ್ಟು ಸಾಲ ವಸೂಲಾತಿ
ಹೂವಿನಹಡಗಲಿ 23: ತಾಲೂಕಿನ ಹೊಳಲು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಶೇ.100ರಷ್ಟು ಬೆಳೆಸಾಲ ಹಾಗೂ ಬಿಡಿಪಿ ಸಾಲ ವಸೂಲಾತಿ ಮಾಡುವಲ್ಲಿ ಹೂವಿನಹಡಗಲಿ ತಾಲೂಕಿಗೆ ಪ್ರಥಮ ಸ್ಥಾನದಲ್ಲಿದೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಗೌಡಪ್ಪಗಡ್ಡಿಗೌಡ್ರ ತಿಳಿಸಿದ್ದಾರೆ.
ಒಟ್ಟು 668 ಜನಕ್ಕೆ 6,76.24,000 ಬೆಳೆಸಾಲ ಹಾಗೂ 188 ಜನಕ್ಕೆ 1.07.21.000 ಬಿಡಿಪಿ ಸಾಲ ಸೇರಿದಂತೆ 32ಜನಕ್ಕೆ ಟ್ಯಾಕ್ಟರ್ ಸಾಲ ಮತ್ತು 18ಜನರಿಗೆ ಪಂಪಸೆಟ್ ಸಾಲವನ್ನು ನೀಡಿದ್ದೇವೆ ಎಂದರು.
ಈಚೆಗೆ ನಡೆದ ಹೊಸಪೇಟೆಯಲ್ಲಿ 103ನೇ ವಾರ್ಷಿಕ ಮಹಾಜನ ಸಭೆಯಲ್ಲಿ ನಮ್ಮನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿಅಧ್ಯಕ್ಷ ಸತೀಶ ಕೋಡಬಾಳ, ಉಪಾಧ್ಯಕ್ಷಜಗ್ಗಿನ ಹನುಮಂತಪ್ಪ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಇದ್ದರುಎಂದರು.