ಹೂವಿನ ಹಡಗಲಿ

ಹೊಳಗುಂದಿ : ರಸ್ತೆ ಅಪಘಾತ ಇಬ್ಬರು ಬೈಕ್ ಸಾವರರು ಸಾವು

ಹೊಳಗುಂದಿ : ರಸ್ತೆ ಅಪಘಾತ ಇಬ್ಬರು ಬೈಕ್ ಸಾವರರು ಸಾವು

ಹೊಳಗುಂದಿ : ರಸ್ತೆ ಅಪಘಾತ ಇಬ್ಬರು ಬೈಕ್ ಸಾವರರು ಸಾವು 

ಲೋಕದರ್ಶನ ವರದಿ 

ಹೂವಿನಹಡಗಲಿ  11 :  ತಾಲೂಕಿನ ಹೊಳಗುಂದಿ ಹೊರ ವಲಯದ ಕೆಇಬಿ  ಗ್ರೀಡ್ ಬಳಿ  ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್  ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿ ಗ್ರಾಮದ ಸುಗ್ಗೆನಹಳ್ಳಿ ಹನುಮರೆಡ್ಡಿ (63), ಸುಗ್ಗೆನಹಳ್ಳಿ ಬಸವರೆಡ್ಡಿ (58) ಮೃತ. ಸವಾರರು ಎಂದು ಗುರುತಿಸಲಾಗಿದೆ. ಇಬ್ಬರಿಗೂ ತಲೆಗೆ ಪೆಟ್ಟುಬಿದ್ದು ತೀವ್ರ ರಕ್ತಸಿಕ್ತರಾಗಿ ಸಾವನ್ನಪ್ಪಿದ್ದಾರೆ. ಮೃತರು ಕೆ.ಎ.35, 4820 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಹೂವಿನಹಡಗಲಿಯಿಂದ ಗದ್ದಿಕೇರಿ ಕಡೆಗೆ ಹೋಗುತ್ತಿದ್ದರು. , ಎಎಸ್‌ಐ ರಾಜೇಂದ್ರನಾಯ್ಕ, ಪೊಲೀಸ್ ಸಿಬ್ಬಂದಿ  ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.ನಂತರ ರಸ್ತೆ ಅಪಘಾತ ಸ್ಥಳಕ್ಕೆ  ಶಾಸಕ ಕೃಷ್ಣನಾಯ್ಕ  ಭೇಟಿ ನೀಡಿ ಮೃತರಿಗೆ ಸಂತಾಪ ಸಲ್ಲಿಸಿ ಅಪಘಾತ ಬಗ್ಗೆ ಪೋಲಿಸರ ಜತೆ ಚರ್ಚೆಸಿ ಮಾಹಿತಿ ಪಡೆದರು. 


ಸುದ್ದಿ ಓದಿ