ಹೊಳಗುಂದಿ ; ಅತ್ತೆ-ಸೊಸೆ ಬಗ್ಗೆ ಹಾಸ್ಯ ಹರಟೆ ಕಾರ್ಯಕ್ರಮ
ಹೂವಿನಹಡಗಲಿ 23: ತಾಲ್ಲೂಕಿನ ಹೊಳಗುಂದಿ ಚನ್ನವೀರಸ್ವಾಮಿ ಹಿರೇಮಠ ವರಪುತ್ರ ಬ್ರಾಂಡ್ ಚಾನೆಲ್ ಇವರ ಆಶ್ರಯದಲ್ಲಿ ಭಾನುವಾರ ಅತ್ತೆ ಮತ್ತು ಸೊಸೆ ಬಗ್ಗೆ ಹಾಸ್ಯ ಹರಟೆ ಕಾರ್ಯಕ್ರಮ ಜರುಗಿತು.
ಸಂಸಾರ ಸಾಗರದಲ್ಲಿ ಅತ್ತೆ ಪ್ರಮುಖವೊ, ಸೊಸೆ ಪಾತ್ರ ಪ್ರಮುಖವೊ ಎಂಬ ಹಾಸ್ಯ ಹರಟೆಯಲ್ಲಿ ಪರ ಮತ್ತು ವಿರೋಧವಾಗಿ ಎರಡು ತಂಡಗಳು ಭಾಗವಹಿಸಿ ಯಶಸ್ವಿಗೊಳಿದ ಚರ್ಚೆಯ ಕುರಿತು ಒಂದೆರಡು ಹಾಸ್ಯ ತುಣಿಕಿನ ಪ್ರಸಂಗಗಳು ನಯನ ಮಲ್ಲಿನಾಥ ರವರು ನಿತ್ಯ ನಮ್ಮ ಸುತ್ತಮುತ್ತಲಿನ ಪ್ರಸಂಗಗಳು ಅಂದರೆ ಮನೆಯಲ್ಲಿ ಮಗಳು ಇರುತ್ತಾರೆ ಹಾಗೆ ಆ ಮನೆಗೆ ಸೊಸೆ ಕೊಡ ಬಂದಿರುತ್ತಾಳೆ ಬರುವಾಗ ಸೇರುವದ್ದು ಒಳಗೆ ಬರುವ ಒಂದು ಪ್ರಸಂಗ, ಹೊಸದಾಗಿ ಬಂದ ಹೊಸತರಲ್ಲಿ ಇಲ್ಲಿಯಂತೆ ಇದ್ದು ಸಂಸಾರದ ಭಾರವನ್ನು ತೊಗಿಸುವ ಸಲುವಾಗಿ ಹುಲಿಯಂತೆ ವರ್ತಿಸುವ ಒಂದು ಪ್ರಸಂಗವನ್ನು ಹಾಸ್ಯವಾಗಿ ತೆಗೆದುಕೊಂಡು ಸೊಸೆಯಂದಿರಿಗೆ ಜವಾಬ್ದಾರಿ ಜಾಸ್ತಿಯಂತಲು, ಅತ್ತೆಗೆ ವಯಸ್ಸಾಗಿರುತ್ತೆ ಇಂದಿನ ಪ್ರಸ್ತುತ ದಿನಗಳಲ್ಲಿ ಸೊಸೆಯಂದಿರು ವಿದ್ಯಾಭ್ಯಾಸದಲ್ಲಿ ಪ್ರಭಾವಿತರಾಗಿ ರುವುದರಿಂದ ಮನೆಯ ಒಂದು ಜವಾಬ್ದಾರಿಯುತಾವಾಗಿ ಹೇಗೆ ನಿಭಾಯಿಸಬೇಕು ಎಂಬುದನ್ನು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಮನೆಯ ಎಲ್ಲಾ ಕುಟುಂಬಸ್ಥರನ್ನು ಅಚ್ಚುಕಟ್ಟಾಗಿ ನಿಬಾಯಿಸಿಕೊಂಡು ಹೊಗುವ ಒಂದು ಸಾಮರಸ್ಯದ ಸಾಮರ್ಥ್ಯ ಹೊಂದಿದ ಕಾರಣ ಸೊಸೆಗೆ ಜವಾಬ್ದಾರಿ ಹೆಚ್ಚೆಂದು ಹೆಚ್. ಶಾಂತ, ಮತ್ತು ರಿಹಾನ ರಫಿಕ್ ಹೀಗೆ ಹತ್ತು ಹಲವು ವಿಷಯಗಳೊಂದಿಗೆ ಚರ್ಚೆಗಳನ್ನು ಮಂಡನೆ ಮಾಡಿದರು.
ಇಲ್ಲಾ, ಇಲ್ಲಾ, ಮನೆಯಲ್ಲಿ ಅತ್ತೆಗೆ ಹೆಚ್ಚು ಜವಾಬ್ದಾರಿ ಜಾಸ್ತಿ ಇರುತ್ತದೆ ಏಕೆಂದರೆ ಅವರಿಗೆ ಜೀವನಾನುಭವ ಜಾಸ್ತಿ ಇರುವುದರ ಜೊತೆಗೆ ಹಿಂದಿನ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ಮಮತೆ ಕರುಣೆ ಸೌಹಾರ್ದತೆ ವಾತ್ಸಲ್ಯ..ಮತ್ತು ದುಡ್ಡಿನ ಬೆಲೆ ಏನೆಂದು ಚೆನ್ನಾಗಿ ತಿಳಿದಿರಿತದೆ ಆಗಾಗಿ ಅತ್ತೆಗೆ ಹೆಚ್ಚು ಜವಾಬ್ದಾರಿ ಜಾಸ್ತಿ ಮತ್ತು ಮಗ ಎಲ್ಲಿ ಸೊಸೆಯ ಪರವಾಗಿ ನಿಂತು ಬಿಡುತ್ತಾನೊ ಎಂಬ ಆತಂಕಕಾರಿ ಸೊಸೆಗೆ ಜವಾಬ್ದಾರಿ ವಹಿಸುವುದು ಏನೋ ಒಂಥರಾ ಕಾಣುತ್ತದೆ ಎಂದು ವಾದ ಮಂಡನೆ ಮಾಡುವ ಸಂದೇಶದಲ್ಲಿ ಟಿ ಎಂ ವೀರಭದ್ರಯ್ಯ ಉತ್ತಂಗಿ ಭೂಮಿಕಾ ಗೌರಮ್ಮ ಮಲ್ಲಿನಾಥ ವಾದ ಮಂಡನೆ ಮಾಡುವ ಸಂದೇಶದಲ್ಲಿ ಸಂಸಾರದಲ್ಲಿ ಎರೆಡು ಕಣ್ಣುಗಳು ಇದ್ದಂತೆ ಯಾರು ಹೆಚ್ಚು ಅಲ್ಲಾ ಕಡಿಮೆನು ಅಲ್ಲಾ ಹೊಂದಿಕೊಂಡು ಹೋಗುವ ಒಂದು ಬಾಂಧವ್ಯವೆ ಜೀವನ ಆನಂದ ಪರಮಾನಂದ ಎನ್ನುವ ವಿಷಯವನ್ನು ನಿರುಪಕರಾಗಿ ಜಿ ಯರಿಸ್ವಾಮಿ ಸಾಹಿತಿಗಳು ಹೊಸಪೇಟೆ ಇವರು ಅಚ್ಚುಕಟ್ಟಾಗಿ ನಿರ್ವಹಿಸಿ ಈ ಒಂದು ಹಾಸ್ಯ ಹರಟೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು . ಆಯೋಜಕರಾದ ಚನ್ನವೀರಸ್ವಾಮಿ ಹಿರೇಮಠ . ಸಾಹಿತಿಗಳಾದ ಜಿ ಯರಿಸ್ವಾಮಿ. ಟಿ ಎಂ ವೀರಭದ್ರಯ್ಯ ಉತ್ತಂಗಿ,ನಯನ ಮಲ್ಲಿನಾಥ ಸೋಗಿ,ಜಿ.ಶಾಂತ ಹರಪನಹಳ್ಳಿ, ಭೂಮಿಕಾ ಕಮಲಾಪುರ,ರಿಹಾನ ರಫಿಕ್ ಭಾವಿಹಳ್ಳಿ, ಗೌರಮ್ಮ ಮಲ್ಲಿನಾಥ್ ಬಸಾಪುರ ಇದ್ದರು.