ಹೂವಿನ ಹಡಗಲಿ

ಹಿತೇಶ್ ಕುಮಾರ್ ಬಿ ಸಿ ರಾಯಲ್ ಜೆಸಿಐ ನೂತನ ಅಧ್ಯಕ್ಷ

ಹಿತೇಶ್ ಕುಮಾರ್ ಬಿ ಸಿ ರಾಯಲ್ ಜೆಸಿಐ ನೂತನ ಅಧ್ಯಕ್ಷ

ಹಿತೇಶ್ ಕುಮಾರ್ ಬಿ ಸಿ ರಾಯಲ್ ಜೆಸಿಐ ನೂತನ ಅಧ್ಯಕ್ಷ 

 ಲೋಕದರ್ಶನ ವರದಿ 

ಹೂವಿನ ಹಡಗಲಿ 08:  ಇಲ್ಲಿನ ರಾಯಲ್ ಜೆಸಿಐನ 2026 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೆಸಿ ಹಿತೇಶ್ ಕುಮಾರ್ ಬಿ ಸಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.ಜೆಸಿ ಆಶಿಶ್ ಜೈನ್ (ಕಾರ್ಯದರ್ಶಿ)ಜೆಸಿ ಶಿವರಾಜ್ ಎಸ್ ಎಂ ಎನ್ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.ರಾಯಲ್ ಜೆಸಿಐನ ನಿಕಟ ಪೂರ್ವ ಅಧ್ಯಕ್ಷರಾದ ವಿನಾಯಕ ಕೋಡಿಹಳ್ಳಿ, ಡಾ ಟಿ ವೀರೇಶ್, ಭರತ್ ಕುಮಾರ್ ಬಿ ಚೌಹಾಣ್ ಉಪಸ್ಥಿತರಿದ್ದರು.ಚುನಾವಣಾ ಅಧಿಕಾರಿಯಾಗಿ ಜೆಸಿ ಡಾ ಜೆ ಡಿ ಉಮೇಶ್ ಆಯ್ಕೆ ಪ್ರಕ್ರಿಯೆಯನ್ನು ಕ್ರಮ ಬದ್ಧವಾಗಿ ನಡೆಸಿದರು.ಜೆಸಿಐ ರಾಯಲ್ ಘಟಕದ ಸದಸ್ಯರು ಹಾಜರಿದ್ದರು. 


ಸುದ್ದಿ ಓದಿ