ಐತಿಹಾಸಿಕ ಭೀಮನ ಭಾವಿ ಸ್ವಚ್ಚತೆ
ತಾಳಿಕೋಟೆ02:ಪಟ್ಟಣದ ವೀರಶೈವ ವಿದ್ಯಾವರ್ದಕ ಸಂಘದ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲದ ವತಿಯಿಂದ ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ರಾಜವಾಡೆಯ ಐತಿಹಾಸಿಕ ಭೀಮನ ಬಾವಿ ಸ್ಚಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ಪಟ್ಟಣದ ರಾಜವಾಡೆಯಲ್ಲಿರುವ ಪುರಾತನ ಭೀಮನ ಭವಿಗೆ ಬೇಟಿ ನೀಡಿದ ಕಾಲೇಜಿನ ಎನ್.ಸಿ.ಸಿ ಕೇಡೆಟಗಳು ಮತ್ತು ಎನ್.ಎಸ್.ಎಸ್ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯವನ್ನು ನಡೆಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಾಚಾರ್ಯ ಆರ್.ವಿ.ಜಾಲವಾದಿ, ಇಂದಿನ ದಿನಮಾನದಲ್ಲಿ ಅವಸಾನದ ಹಂತದಲ್ಲಿರುವ ಬಾವಿ, ಕೆರೆಗಳು ಮತ್ತು ನೀರಿನ ಮೂಲಗಳನ್ನು ಸ್ಚಚ್ಛತೆಗೊಳಿಸುವ ಮೂಲಕ ಅವುಗಳನ್ನು ಸಂರಕ್ಷಣೆ ಮಾಡಬಹುದು ಎಂದರು.
ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಡಾ.ಡಿ.ಬಿ.ಮೂಗಡ್ಲಿಮಠ, ಎನ್.ಸಿ.ಸಿ.ಅಧಿಕಾರಿಗಳಾದ ಆರ್.ವಿ.ಮಿಸ್ಕಿನ ಮತ್ತು ಎನ್‌ಎಸ್‌ಎಸ್. ಅಧಿಕಾರಿಗಳಾದ ಡಾ.ದೀಪಾ ಮಾಳಗೆ, ರಮೇಶ ಜಾಧವ ಮಾರ್ಗ ದರ್ಶನವನ್ನು ನೀಡಿದರು. ವಿದ್ಯಾರ್ಥಿಗಳ ಈ ಸಮುದಾಯ ಸೇವೆಯನ್ನು ಮಹಾವಿದ್ಯಾಲಯದ ಚೇರಮನ್ನರು ಮತ್ತು ಸಿಬ್ಬಂದಿ ವರ್ಗದವರು ಶ್ಲಾಘಿಸಿದರು.