ಹಿರೇಹಡಗಲಿ ; ಸಂಭ್ರಮದ "ಮುಳ್ಳು ಗದ್ದುಗೆ" ಮಹೋತ್ಸವ
ಹಿರೇಹಡಗಲಿ ; ಸಂಭ್ರಮದ "ಮುಳ್ಳು ಗದ್ದುಗೆ" ಮಹೋತ್ಸವ
ಲೋಕದರ್ಶನ ವರದಿ
ಹೂವಿನಹಡಗಲಿ 10: ಎಲ್ಲ ಜಾತಿ, ವರ್ಗದ ಭಕ್ತರ ಭಾವೈಕ್ಯ ಸಂಗಮದಂತಿರುವ ತಾಲ್ಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದಲ್ಲಿ ಪ್ರಮುಖ ಆಚರಣೆ ಯಾಗಿರುವ " ಮುಳ್ಳು ಗದ್ದುಗೆ ’ ಮಹೋತ್ಸವ ಗುರುವಾರ ರಾತ್ರಿ 11ಗಂಟೆಗೆ ಸಂಭ್ರಮದಿಂದ ಜರುಗಿತು.ಹಾಲಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಶ್ರೀ ಗಳ ಮುಳ್ಳು ಗದ್ದುಗೆ ಉತ್ಸವಕ್ಕೆ ಸಮಾಳ, ಡೊಳ್ಳು ,ನಂದಿಕೋಲು ,ಭಜನೆ ಹಾಡುಗಳು ಮೆರಗು ತಂದವು. ರಾತ್ರಿ ಸಾಂಪ್ರದಾಯಿಕ ಮುಳ್ಳು ಗದ್ದುಗೆ ಉತ್ಸವ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ಬೆಳಗಿನಜಾವ ಮೂಲ ಸ್ಥಳದಲ್ಲಿ ಸಂಪನ್ನಗೊಂಡಿತು.ಧಾರ್ಮಿಕ ಇತಿಹಾಸ ಹೊಂದಿರುವ ಉತ್ಸವದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿಭಾವ ಮೆರೆದರು.