ಯರಗಟ್ಟಿ

ಹಿರೇಬೂದನೂರ: ರಾಜ್ಯಮಟ್ಟದ ಜಾನಪದ ಕಲಾ ಮೇಳ

ಹಿರೇಬೂದನೂರ: ರಾಜ್ಯಮಟ್ಟದ ಜಾನಪದ ಕಲಾ ಮೇಳ

ಲೋಕದರ್ಶನ ವರದಿ 


ಯರಗಟ್ಟಿ 18: ಜಾನಪದ ಕಲೆ ಜೀವನದ ಅವಿಭಾಜ್ಯ ಅಂಗವಾಗಿದ್ದು ಇದನ್ನು ಉಳಸಿ ಬೆಳೆಸುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯಮಟ್ಟದ ಯುವ ಚೇತನ ಪ್ರಶಸ್ತಿ ವಿಜೇತ ಉಮೇಶ್ವರ ಮರಗಾಲ ಮಾತನಾಡಿದರು. 

ಅವರು ಸಮೀಪದ ಹಿರೇಬೂದನೂರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧೆಶನಾಲಯ, ಬೆಂಗಳೂರ ಶ್ರೀನಾಗಲಿಂಗ ಸಾಹಿತ್ಯ ಜಾನಪದ ಕಲಾಪೂಷಕರ ಯುವ ಬಳಗ ಹಿರೇಬೂದನೂರ ಇವರ ಸಹಯೂದಲ್ಲಿ ಬುದವಾರ ದಿ.15 ರಂದು ಗುರು ಡೆಂಗಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೂಜಿಸಿದ್ದ ರಾಜ್ಯಮಟ್ಟದ ಜಾನಪದ ಕಲಾ ಮೇಳದಲ್ಲಿ ಬಾಗವಹಿಸಿ ಮಾತನಾಡಿದರು. 

ಇಂದಿನ ಯುವ ಜನತೆ ನಾಡಿನ ಸಂಸ್ಕೃತಿ ಪರಂಪರೆ ಸಂಪ್ರದಾಯ ಹಾಗೂ ಕಲೆಗಳ ಮಹತ್ವ ಅರಿಯಬೇಕಿದೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೊಗುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಗ್ರಾಮೀಣ ಸೊಗಡಿನ ವಿಶಿಷ್ಟ ಪರಂಪರೆಯ ಜಾನಪದ ಕಲೆಯನ್ನು ಉಳಸಿ ಬೆಳಸಬೇಕಿದೆ ಎಂದರು.  

ಗ್ರಾಪಂ ಸದಸ್ಯರಾದ ಮಂಜುಳಾ ನಾಯ್ಕರ, ಬಾಳೇಶ ಮೇಟಗುಪ್ಪಿ, ಲಕ್ಕಪ್ಪ ನಾಯ್ಕಪ್ಪಗೋಳ, ಈಶ್ವರಚಂದ್ರ ಬೆಟಗೇರಿ, ಯಲ್ಲಪ್ಪ ನಾಯ್ಕರ, ಸಿದ್ದಪ್ಪ ಹೆಗಡಿ, ಅರ್ಚಕರಾದ ದರೇಪ್ಪ ಸೂರನ್ನವರ, ನಿಂಗಪ್ಪ ಕುಂಟಮಾಯನ್ನವರ, ನಿಂಗಪ್ಪ ತಳವಾರ, ಎಸ್ ಬಿ ಚನವಾನ, ಸಿದ್ದಪ್ಪ ಮಾಲದಿನ್ನಿ, ವಿಠ್ಠಲ ಗೋಡಚಿ, ಕುಬೇಂದ್ರ ಗೋಡಚಿ, ಮಾರುತಿ ನಾಯ್ಕರ, ದುರಗಪ್ಪ ಹರಿಜನ, ಮಹಾದೇವ ಹಟ್ಟಿಹೊಳಿ ಮುಂತಾದವರು ಇದ್ದರು. 


ಸುದ್ದಿ ಓದಿ