ಹಿಂದೂ ವಿರಾಟ್ ಗಣಪ: ಪ್ರತಿಷ್ಠಾಪನಾ ಮೆರವಣಿಗೆಗೆ ಸಾರಥಿಯಾದ ಪೂಜಾರ
ರಾಣೆಬೆನ್ನೂರು 02: ಇಲ್ಲಿನ ಅಶೋಕ ವೃತ್ತದಲ್ಲಿ ನಗರದ ನಾಗರಿಕರು ಮತ್ತುಅಭಿಮಾನಿ ಬಳಗವು ಪ್ರಥಮವಾಗಿ ವಿರಾಟ್ ಹಿಂದೂ ಮಹಾಸಭಾ ಸಮಿತಿಯು ಆಕರ್ಷಕ ನೋಟದ ಗಣಪನನ್ನು ಪ್ರತಿಷ್ಠಾಪನೆ ಮಾಡಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಬುಧವಾರ ದಿವಸ ಇಲ್ಲಿನ ಕೆಇಬಿ ವಿನಾಯಕ ದೇವಸ್ಥಾನದಿಂದ ಹೊರಟ ಮೂವಿ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಸಂಜೆ ಮಹಾ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಶಾಸಕ ಅರುಣ್ ಕುಮಾರ್ ಪೂಜಾರ್ ಅವರು ಅಲಂಕಾರಿಕ ಗಣಪನ ಉತ್ಸವಮೂರ್ತಿಯ ಟ್ರ್ಯಕ್ಟರ್ ಚಲಾಯಿಸಿ, ಸಭಾ ವೇದಿಕೆ ವರೆಗೂ ಮೆರವಣಿಗೆಯಲ್ಲಿ ಗಣಪನ ಸಾರಥಿಯಾಗಿದ್ದು, ಅಭಿಮಾನಿಗಳಲ್ಲಿ ಹುರುಪು ಹುಮ್ಮಸ್ಸು ಇಮ್ಮಡಿಗೊಳಿಸಿದ್ದರು ಮೆರವಣಿಗೆ ಮುಂಚೂಣಿಯಲ್ಲಿ ಬಸವರಾಜ ಚಳಗೇರಿ, ಶಿವಕುಮಾರ ನರಸ ಗೊಂಡರ, ಕೆಎಂಪಿ ಮಣಿಪವಾರ, ಪವನ್ ಕುಮಾರ್ ಮಲ್ಲಾಡದ, ನಿತ್ಯಾನಂದ ಕುಂದಾಪುರ, ಬಸವರಾಜ ಪಾಟೀಲ, ಮಾಳಪ್ಪ ಪೂಜಾರಿ, ಅನಿಲ್ ಸಿದ್ದಾಳಿ, ದೀಪಕ್ ಹರಪನಹಳ್ಳಿ, ಅಮೋಘ ಬದಾಮಿ, ಬಸವರಾಜ ಹುಲ್ಲತ್ತಿ,ಕುಬೇರ್ಪ ಕೊಂಡಜ್ಜಿ, ಸೇರಿದಂತೆ ಮತ್ತಿತರ ಗಣ್ಯರು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಶಾಸಕ ಪೂಜಾರ, ಅವರ ಅಭಿಮಾನಿಗಳು. ಪಾಲ್ಗೊಂಡಿದ್ದರು. ಮೂರು ತಾಸುಗಳ ಕಾಲ ನಡೆದ ಮೆರವಣಿಗೆಗೆ ಜಾನಪದ ವಾದ್ಯಗಳು, ಸಮಾಳ, ವೀರಗಾಸೆ ಪುರವಂತರು, ಝಾಜ್ ಮೇಳಗಳು ಮೆರಗು ನೀಡಿದ್ದವು.