ಗಂಗಾವತಿ

ಹಿಂದು ಮಹಾಮಂಡಳಿ ವಿಶೇಷ ಗಣೇಶೋತ್ಸವ: ಗೋ ಪೂಜೆ ಮೂಲಕ ಡಿವೈಎಸ್ಪಿ ಚಾಲನೆ

ಹಿಂದು ಮಹಾಮಂಡಳಿ ವಿಶೇಷ ಗಣೇಶೋತ್ಸವ: ಗೋ ಪೂಜೆ ಮೂಲಕ ಡಿವೈಎಸ್ಪಿ ಚಾಲನೆ

ಗಂಗಾವತಿ; ಪ್ರತಿ ವರ್ಷದಂತೆ ಈ ವರ್ಷವು ಹಿಂದು ಮಹಾಮಂಡಳಿಯಿಂದ ಗಣೇಶೋತ್ಸವ ವಿಶೇಷ ಆಕರ್ಷಣೆಗೊಂಡಿದೆ.  ಗೋವುಗಳನ್ನು ರಕ್ಷಣೆ ಮಾಡುವ ಸಂದೇಶ ಸಾರುವ ಮತ್ತು ಗೋವುಗಳ ರಕ್ಷಣೆಗೆ ಸಂಕಲ್ಪ ಮಾಡಿದ್ದ ಪುರಾಣದ ಇತಿಹಾಸದ ಪರಶುರಾಮ ನಿಂತ ಭಂಗಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಟಾಪಿಸಲಾಗಿದೆ.  ಮಂಗಳವಾರ ಶುಭ ಮುಹೂರ್ತದಲ್ಲಿ ಪ್ರತಿಷ್ಟಾಪನೆ ಪೂಜೆ ನಡೆಸಿದ ಸಮಿತಿ ಪದಾಧಿಕಾರಿಗಳು ಗೋವು ಮತ್ತು ಕರುವಿಗೆ ಗೋ ಗ್ರಾಸ ನೀಡುವ ಮೂಲಕ ಡಿವೈಎಸ್ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್, ಪಿಐ ಅಡಿವೇಶ, ಮಾಜಿ ಜಿಪಂ ಸದಸ್ಯ ಸಿದ್ಧರಾಮಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ರಾಘವೇಂದ್ರಶೆಟ್ಟಿ,  ಹುಸೇನಪ್ಪಸ್ವಾಮಿ, ಅಯ್ಯನಗೌಡ ಹೇರೂರು, ನೀಲಕಂಠ ನಾಗಶೆಟ್ಟಿ, ಶ್ರೀಕಾಂತ ಹೊಸಕೇರಿ, ಕುಮಾರ ಹೂಗಾರ ಮತ್ತಿತರು ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಗಣೇಶೋತ್ಸವಕ್ಕೆ ಚಾಲನೆ ನೀಡಿದರು. ಪವನ ಆಚಾರ ಪೂಜೆ ನೇರವೇರಿಸಿದರು.

ವಿವಿಧ ಸಮಾಜದ ಮುಖಂಡರಾದ ಜಗದೀಪ್ಪ ಸಿಂಗನಾಳ, ರವೀಂದ್ರ ಹೂಲಗೇರಿ, ಅನಿಲ್ ಭಾಗಮಾರ, ತಿಪ್ಪಣ್ಣ ಬಿದರಕರ್, ಲಕ್ಷ್ಮಣ ನಾಯಕ, ರಮೇಶ ನಾಡಿಗೇರಿ, ನರಸಿಂಗರಾವ್ ಕುಲಕರ್ಣಿ,  ಟಿ.ಆರ್.ರಾಯಬಾಗಿ, ಬಿ.ನಾರಾಯಣಪ್ಪ, ಶೇಷಾರಾವ್ ಮತ್ತಿತರು ಪ್ರತಿಷ್ಟಾಪನೆ ಪೂಜೆಯಲ್ಲಿ ಭಾಗವಹಿಸಿದ್ದರು.  ನಂತರ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹೆಚ್.ಆರ್.ಶ್ರೀನಾಥ, ಅಧ್ಯಕ್ಷ ಡಾ. ಅಮರ ಪಾಟೀಲ್,  ನೆಕ್ಕಂಟಿ ಸೂರಿಬಾಬು, ಸಂತೋಷ ಕೆಲೋಜಿ, ಕಾಂಗ್ರೆಸ್ ಮುಖಂಡ ಬಸವರಾಜಸ್ವಾಮಿ ಮಳಿಮಠ, ವೆಂಕಟೇಶ ಅಮರಜ್ಯೋತಿ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಗಣ್ಯರು ಆಗಮಿಸಿ ಗೋವಿಗೆ ಪೂಜೆ ಸಲ್ಲಿಸಿ ಗಣೇಶನ ದರ್ಶನ ಪಡೆದರು.  ಹಿಂದು ಮಹಾ ಮಂಡಳಿ ಪದಾಧಿಕಾರಿಗಳು ಇದ್ದರು. ಹನ್ನೊಂದು ದಿನಗಳ ಗಣಪತಿ ಪ್ರತಿಷ್ಟಾಪನೆ ಮಂಟಪದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಪ್ರತಿ ನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.  ಹನ್ನೊಂದು ದಿನದಂದು ಅದ್ದೂರಿ ಶೋಭಾಯಾತ್ರೆ ಮೂಲಕ ವಿಸರ್ಜನೆ ನಡೆಸಲಾಗುವುದು ಎಂದು ಆಯೋಜಕರು ತಿಳಿಸಿದರು.

ಸುದ್ದಿ ಓದಿ