ಅಥಣಿ

ಖಾಸಗಿ ವ್ಯಕ್ತಿ ಲೈಟ ಕಂಬ ಏರಿದರೆ ಹೆಸ್ಕಾಂ ಇಲಾಖೆ ಹೊಣೆಯಲ್ಲ : ಠಕ್ಕನ್ನವರ

ಖಾಸಗಿ ವ್ಯಕ್ತಿ ಲೈಟ ಕಂಬ ಏರಿದರೆ ಹೆಸ್ಕಾಂ ಇಲಾಖೆ ಹೊಣೆಯಲ್ಲ : ಠಕ್ಕನ್ನವರ

ಸಂಬರಗಿ29: ಜಂಬಗಿ ಹೆಸ್ಕಾಂ ವಲಯದಲ್ಲಿ 21 ಗ್ರಾಮಗಳು ಬರುತ್ತಿದ್ದು ಈ ಗ್ರಾಮದಲ್ಲಿ ಯಾವುದೇ ಖಾಸಗಿ ವ್ಯಕ್ತಿ ಲೈಟ ಕಂಬದ ಮೇಲೆ ಏರುವುದು ಮಾಡಬಾರದು. ಇದು ಅಪರಾದವಾಗಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಯಾವುದೇ ವ್ಯಕ್ತಿ ಕಂಬದ ಮೇಲೆ ಹತ್ತಬಾರದು ಏನಾದರೂ ಅನಾಹುತವಾದರೆ ಹೆಸ್ಕಾಂ ಇಲಾಖೆ ಜವಾಬ್ದಾರಿ ಇರುವದಿಲ್ಲ ಎಂದು ಜಂಬಗಿ ವಲಯ ಹೆಸ್ಕಾಂ ಅಧಿಕಾರಿಯಾದ ಕಲ್ಲಪ್ಪ ಎಸ್. ಠಕ್ಕನ್ನವರ ಇವರು ಹೇಳಿದರು. 

ಜಂಬಗಿ ಹೆಸ್ಕಾಂ ವಲಯ ಅಧಿಕಾರ ಸ್ವೀಕರಿಸಿದ ನಂತರ ಜಂಬಗಿ ಹೆಸ್ಕಾಂ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗಾರರರೊಂದಿಗೆ ಮಾತನಾಡಿ ಅವರು ಈ ವಲಯದಲ್ಲಿ 21 ಗ್ರಾಮಗಳು ಬರುತ್ತಿದ್ದು ಅದರಲ್ಲಿ ಬಳ್ಳಿಗೇರಿ ಶಿರೂರ ಹಾಗೂ ಜಂಬಗಿ ವಿದ್ಯುತ್ ಸಂಶ್ಲೇಷಣೆ ಇದ್ದು ಬಳ್ಳಿಗೇರಿ ಸ್ಟೇಷನನಿಂದ ಎಫ್.-4 ಲಿಂಕ್ ಲೈನ್ ಬೇವನೂರ ಗ್ರಾಮಕ್ಕೆ ಸರಬರಾಜು ಮಾಡಲಾಗಿದೆ. ಈ ವಲಯದಲ್ಲಿ ಸದ್ಯದಲ್ಲಿ ಯಾವುದೇ ವಿದ್ಯುತ್ ಕೊರತೆ ಇರುವದಿಲ್ಲ. 24 ಲೈನ್ ಮನ್ ಬಿಲ್ ವಸೂಲಾತಿ ಅಧಿಕಾರಿಗಳು 9 ಜನ ಇದ್ದು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏನೇ ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಬೇಕು. ಯಾವುದೇ ಖಾಸಗಿ ವ್ಯಕ್ತಿಗಳು ಕಂಬದ ಮೇಲೆ ಹತ್ತಿದರೆ ನನ್ನ ಪೋನ್ ನಂ.9480882532 ಕರೆ ಮಾಡಬೇಕು. ಎಂದು ತಿಳಿಸಿದರು.  


ಸುದ್ದಿ ಓದಿ