ಬ್ಯಾಡ್ಗಿ

ಹೇಮರೆಡ್ಡಿ ಮಲ್ಲಮ್ಮ ಆದರ್ಶ ಮಹಾಸಾದ್ವಿ: ಬಳ್ಳಾರಿ

ಹೇಮರೆಡ್ಡಿ ಮಲ್ಲಮ್ಮ ಆದರ್ಶ ಮಹಾಸಾದ್ವಿ: ಬಳ್ಳಾರಿ

ಬ್ಯಾಡಗಿ 11: ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಸತ್ಯನಿಷ್ಟೆ, ಪ್ರಾಮಾಣಿಕತೆ ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. 

ಸ್ಥಳೀಯ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ 599ನೇ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಯಾವುದೇ ಶರಣರ, ಸಂತರ, ದಾಸರ ಆದರ್ಶಗಳ ತಿರುಳು ಒಂದೇ ಆಗಿದ್ದು ಅದು ಮನುಕುಲಕ್ಕೆ ಸನ್ನಡತೆಯ ಮಾರ್ಗದರ್ಶನ, ಸುಂದರ ಬದುಕಿಗೆ ದಾರಿದೀಪವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಶಿವಶರಣರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು. 

ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಎನ್. ತಿಮ್ಮಾರೆಡ್ಡಿ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸಾರಿಯಾಗಿದ್ದುಕೊಂಡೇ ಶ್ರೀಶೈಲ ಮಲ್ಲಿಕಾಜರ್ುನನ್ನು ಒಲಿಸಿಕೊಂಡ ಮಹಾಸಾದ್ವಿಯಾಗಿದ್ದಾರೆ. ಅಲ್ಲದೆ ವಿಷಲಂಟನಾಗಿದ್ದ ಮೈದುನ ವೇಮನ ಅವರನ್ನು ಮಹಾಯೋಗಿಯನ್ನಾಗಿ ಮಾಡಿದ ಕೀತರ್ಿ ಹೇಮರೆಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ ಎಂದು ತಿಳಿಸುತ್ತಾ ಮಲ್ಲಮ್ಮನ ಭಕ್ತಿಮಾರ್ಗ ಅನನ್ಯ ಎಂದರು. 

ರೆಡ್ಡಿ ಸಮಾಜದ ಮುಖಂಡರಾದ ಶಿಕ್ಷಕ ಪ್ರಕಾಶ ತಾರಿಕೊಪ್ಪ ಮಾತನಾಡಿ, ಮಹಾಸಾಧ್ವಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ  ಮಲ್ಲಿಜಾರ್ಜನನನ್ನು  ತನ್ನ ಆರಾಧ್ಯ ದೈವವಾಗಿ ಆರಾಧಿಸಿ, ಅವರನ್ನು ಸಾಕ್ಷಾತ್ಕರಿಸಿಕೊಂಡು ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದರು. ಆಯುಷ್ಯ ಮುಗಿಯುವ ಸಂದರ್ಭದಲ್ಲಿ  ಮಲ್ಲಮ್ಮ ಮಲ್ಲಿಕಾಜರ್ುನನನ್ನು  ಧ್ಯಾನಿಸುತ್ತಿರಬೇಕಾದರೆ, ಸ್ವಾಮಿಯು ಏನಾದರೂ ವರವನ್ನು ಕೇಳು ಎಂದಾಗ ಅವರು ತನ್ನ ಸಮಾಜದ ಬಾಂಧವರಿಗೆ ಎಂದಿಗೂ ಬಡತನ ಬರಬಾರದು ಎಂದು ಕೇಳಿಕೊಂಡ ಮಹಾ ಸಾದ್ವಿಯಾಗಿದ್ದಾರೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿ ಕೊರವರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ.ರುದ್ರಮುನಿ, ಪುರಸಭೆ ಮುಖ್ಯಾಧಿಕಾರಿ ವಿ.ಎಮ್.ಪೂಜಾರ, ಗ್ರೇಡ್-2 ತಹಶೀಲ್ದಾರ ಗವಿಸಿದ್ದಪ್ಪ, ಗಣೇಶ ಕಟ್ಟಿಮನಿ, ರಾಜಪ್ಪ ಬಂಕಾಪುರ, ಆಹಾರ ನಿರೀಕ್ಷಕ ಪಿ.ಆರ್.ದೊಡ್ಡಮನಿ, ರೆಡ್ಡಿ ಸಮಾಜದ ಮುಖಂಡ ಮಂಜುನಾಥ ಅಜ್ಜಮ್ಮನವರ, ತಾಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಕಾರ್ಯದಶರ್ಿ ಶಿವಯೋಗಿ ಶಿರೂರ, ಗುಂಡಪ್ಪ ಹುಬ್ಬಳ್ಳಿ ಸೇರಿದಂತೆ ಇನ್ನಿತರಿದ್ದರು. 

ಸುದ್ದಿ ಓದಿ