ಕೊರೋನಾ-19 ತುರ್ತು ನಿರ್ವಹಣಾ ತಂಡದ ಪದಾಧಿಕಾರಿಗಳಿಂದ ಸಹಾಯವಾಣಿ ಕೇಂದ್ರ
ಶಿಗ್ಗಾವಿ 26: 2020 ರ ಕೋರೋನಾ ತುರ್ತು ಪರಿಸ್ಥಿತಿಯಲ್ಲಿ ಭಾ.ಜ.ಪ ಪಕ್ಷ ಸಾರ್ವಜನಿಕರಿಗೆ ದಿನಸಿ, ಉಟೋಪಚಾರ, ಚಿಕಿತ್ಸೆ, ಓಷಧಿ ಇತ್ಯಾದಿ ಸೇವೆಗಳ ಜೊತೆಗೆ ಸಹಾಯ ಸಹಕಾರ ನೀಡಿ ಎಲ್ಲರಿಗೂ ಆತ್ಮ ವಿಶ್ವಾಸವನ್ನು ತುಂಬಿ ಯಶಸ್ಸು ಗಳಿಸಿದ ಹಿನ್ನಲೆಯಲ್ಲಿ ತಾಲೂಕ ಭಾರತೀಯ ಜನತಾ ಪಕ್ಷ ಸಹಾಯವಾಣಿ ಕೇಂದ್ರವನ್ನು ತೆರೆದಿದೆ ಎಂದು ಭಾ.ಜ.ಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿ ಜನರ ಹಿತರಕ್ಷಣೆಗೆ ಸದಾ ಬದ್ದ ಎಂಬ ಘೋಷ ವ್ಯಾಖ್ಯದೊಂದಿಗೆ ಭಾರತೀಯ ಜನತಾ ಪಕ್ಷದ ಯುವ ಪಡೆ ಸಜ್ಜಾಗಿದೆ. ಇದರ ಎಲ್ಲ ನೇತೃತ್ವವನ್ನು, ಸಲಹೆ, ಸೂಚನೆಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಅನುಮತಿ ಮೇರೆಗೆ ಕೋವಿಡ್-19 ತಾಲೂಕ ತುರ್ತು ನಿರ್ವಹಣಾ ತಂಡ ಕಾರ್ಯವನ್ನು ನಿರ್ವಹಿಸಲಿದೆ ಎಂದರು.
ತಾಲೂಕ ಕೋವಿಡ್-19 ತುರ್ತು ನಿರ್ವಹಣಾ ತಂಡದ ಪದಾಧಿಕಾರಿಗಳು ಈ ಕೆಳಗಿನಂತೆ ಅವರ ಜವ್ದಾಬಾರಿ ನಿರ್ವಹಿಸಲಿದ್ದಾರೆ. ಕಾರ್ಯಾಲಯ : ರಾಘವೇಂದ್ರ ಅತಡಕರ 8970650588, ಸಹಾಯವಾಣಿ: ವಿನಯ ಮುಂಡಗೋಡ 9538366703, ಮಂಜುನಾಥ ಮಿರ್ಜಿ 7259526962, ಅಂತ್ಯ ಸಂಸ್ಕಾರದ ಸಹಾಯ : ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ 9611491104, ಪುರಸಭೆ ಸದಸ್ಯ ರಮೇಶ ವನಹಳ್ಳಿ 9945985600, ಅಂಬ್ಯುಲೆನ್ಸ ಸಹಾಯ : ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ತಾಲೂಕ ಪ್ರ.ಕಾರ್ಯದರ್ಶಿ ಬಸವರಾಜ ನಾರಾಯಣಪೂರ 9916881583, ಆಸ್ಪತ್ರೆಗಳ ಮಾಹಿತಿ, ವ್ಯಾಕ್ಸಿನೇಶನ, ವೇಂಟಿಲೇಟರ ಸಹಾಯ : ತಾಲೂಕ ಪ್ರಧಾನ ಕಾರ್ಯದರ್ಶಿ ರೇಣುಕನಗೌಡ ಪಾಟೀಲ, ಯುವ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಪ್ರತೀಕ ಕೊಳೇಕರ 9535335143, ಓಷಧ ಮಾಹಿತಿ ಮತ್ತು ಆಯುಷ್ಮಾನ ಕಾರ್ಡ ಮಾಹಿತಿ ವಿನಿಮಯ : ಚೇತನ ಕಲಾಲ 8105985143, ಸಚಿನ ಮಡಿವಾಳರ 9964644302, ವೈದ್ಯಕೀಯ ಪ್ರಕೋಷ್ಠ : ಡಾಽಽ ಮದನ ಘೋಡ್ಕೆ 7483521508, ಡಾಽಽ ಮಮತ ನಾಗಪ್ಪ ತುಪ್ಪದ 9980381267.
ಇದರ ಜೊತೆಗೆ ಹೆಚ್ಚಿನ ಮಾಹಿತಿಗಾಗಿ ಭಾ.ಜ.ಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ 9620742575, ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ 8970656206 ????? ಸಂಪರ್ಕಿಸಲು ಕೋರಲಾಗಿದೆ.